/newsfirstlive-kannada/media/post_attachments/wp-content/uploads/2025/03/yajamana-1.jpg)
ಯಜಮಾನ ಧಾರಾವಾಹಿಯಲ್ಲಿ ಸತ್ಯದ ಮಹಾ ಸ್ಫೋಟ ಆಗುತ್ತಿದೆ. ರಾಘು ಗುಟ್ಟು ಬಯಲಾಗೋ ಟೈಮ್ ಬಂದೇ ಬಿಟ್ಟಿದೆ. ಹೌದು, ರಾಘು, ಝಾನ್ಸಿನ 30 ದಿನಗಳಿಗೆ ಕಾಂಟ್ರ್ಯಾಕ್ಟ್ ಮದುವೆ ಆಗಿರೋ ವಿಚಾರ ತಾತನ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ: ನೇಹಾ ಗೌಡ ತಮ್ಮ ಮುದ್ದಾದ ಮಗಳಿಗೆ ಶಾರದ ಅಂತಾ ಹೆಸರು ಇಟ್ಟಿದ್ದೇಕೆ; ಗುಟ್ಟು ಬಿಚ್ಚಿಟ್ಟ ನಟಿಯ ತಂದೆ
ಸತ್ಯ ತಿಳಿಯೋಕೆ ರಾಘು ಮನೆಗೆ ಹೋಗಿದ್ದಾರೆ ತಾತ. ಇತ್ತ ಝಾನ್ಸಿ, ರಾಘುಗೆ ಟೆನ್ಶನ್ ಶುರುವಾಗಿದೆ. ಈ ರೋಚಕ ಸಂಚಿಕೆ ಇವತ್ತು ಪ್ರಸಾರವಾಗಲಿದೆ. ಇನ್ನೂ, ಕಲರ್ಸ್ ಕನ್ನಡದಲ್ಲಿ ಫೈಟ್ ಸೀನ್ಗಳಿಗೆ ಕಮ್ಮಿ ಇಲ್ಲ. ಸ್ಪೇಷಲಿ ನಾಯಕಿಯರೇ ಹೀರೋ ರೇಂಜ್ಗೆ ಸಾಹಸ ದೃಶ್ಯಗಳನ್ನ ಮಾಡ್ತಿದ್ದಾರೆ.
ಈ ಹಿಂದೆ ಭಾರ್ಗವಿ ಫೈಟ್ ಸೀನ್ ನೋಡಿದ್ರೀ.. ಈ ಸಾಲಿಗೆ ಝಾನ್ಸಿ ಕೂಡ ಸೇರ್ಪಡೆಯಾಗಿದ್ದಾಳೆ. ಗಂಡಸರು ಅಂದ್ರೇ ಕೆಂಡಾಕಾರೋ ಝಾನ್ಸಿ ಜಬರ್ದಸ್ತ್ ಫೈಟ್ ಮಾಡಿದ್ದಾಳೆ. ಹುಡುಗಿನ ಚುಡಾಯಿಸ್ತಿದ್ದ ಪುಂಡರಿಗೆ ಒದ್ದು ಬುದ್ದಿ ಕಲಿಸಿದ್ದಾಳೆ.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಝಾನ್ಸಿ- ರಾಘು ಕಾಂಟ್ರಾಕ್ಟ್ ಮದುವೆ ಮುಗಿಯೋಕೆ ಇನ್ನು ಕೇವಲ 10 ದಿನ ಬಾಕಿಯಿದೆ. ಇಷ್ಟರಲ್ಲಿ ಇಬ್ಬರಿಗೂ ಲವ್ ಆಗುತ್ತಾ? ತಾತ ಈ ಜೋಡಿನ ಪರ್ಮನೆಂಟ್ ಆಗಿ ಒಂದು ಮಾಡ್ತಾರಾ ನೋಡೋದಕ್ಕೆ ಯಜಮಾನ ಸೀರಿಯಲ್ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ