/newsfirstlive-kannada/media/post_attachments/wp-content/uploads/2025/07/kana-serial.jpg)
ಕಾಯ್ದು ತಿನ್ನೋ ಹಣ್ಣು ಬಲೂ ರುಚಿಯಾಗಿರುತ್ತೆ ಅಂತಾರಲ್ಲ. ಇದಕ್ಕೆ ಪರ್ಫೆಕ್ಟ್ ಎಕ್ಸಾಂಪಲ್ ಕರ್ಣ. ಸಾಕಷ್ಟು ಅಡೆತಡೆಗಳ ನಂತರ ತೆರೆಗೆ ಬಂದಿರೋ ಕರ್ಣನ ಹವಾ ಜೋರಾಗಿದೆ. ನಿತ್ಯಾ, ನಿಧಿ, ಕರ್ಣ ಪಾತ್ರಗಳ ಪ್ರೇಮ, ಪ್ರೀತಿ ಮುದ ನೀಡುತ್ತಿದ್ದರೆ ಕರ್ಣನ ವಿರುದ್ಧ ನಡೀತಿರೋ ಷಡ್ಯಂತ್ರಗಳು ಭಾವನಾತ್ಮಕವಾಗಿ ವೀಕ್ಷಕರನ್ನ ಹಿಡಿದಿಟ್ಟುಕೊಂಡಿವೆ.
ನಮ್ರತಾ ಹಾಗೂ ಭವ್ಯಾ ಜೊತೆಗೆ ಕಿರಣ್ ರಾಜ್ನ ಒಂದೇ ಫ್ರೇಮ್ನಲ್ಲಿ ನೋಡೋ ಫ್ಯಾನ್ಸ್ ಆಸೆ ಈಡೇರಿದೆ.
ಇದನ್ನೂ ಓದಿ: ಅಲಿಯಾ ಭಟ್ಗೆ ಲಕ್ಷ ಲಕ್ಷ ವಂಚನೆ, ಬೆಂಗಳೂರಲ್ಲಿ ಆಪ್ತ ಸಹಾಯಕಿ ಅರೆಸ್ಟ್.. ಈಕೆ ವಂಚಿಸಿದ್ದೇ ಸಖತ್ ಇಂಟರೆಸ್ಟಿಂಗ್
ನಿತ್ಯಾ- ಕರ್ಣ ಮುಖಾಮುಖಿಯಾದ್ರೇ ಸಾಕು ಒಳ್ಳೆ ಸಿಡಿಮಿಡಿ ಅಂತ ಸಿಡಿತಾ ಇರ್ತಾರೆ. ನಿಧಿ ಹಂಗಲ್ಲ. ಕರ್ಣ ಸರ್ಗೆ ಪ್ರಪೋಸ್ ಮಾಡೋಕೆ ಕಾಯ್ತಿದ್ದಾಳೆ. ಟ್ವಿಸ್ಟ್ ಏನಂದ್ರೇ ನಿಧಿ ಪ್ರೀತಿಸ್ತಿರೋ ಡಾಕ್ಟರ್ ಕರ್ಣ ಅಂತ ಅಕ್ಕ ನಿತ್ಯಾಗೆ ಗೊತ್ತಿಲ್ಲ. ಈ ನಡುವೆ ನಿತ್ಯಾಗೂ ಒಬ್ಬ ಬಾಯ್ಫ್ರೆಂಡ್ ಇರ್ತಾನೆ. ಅಜ್ಜಿ ಮುಂದೆ ಪ್ರೀತಿ ವಿಚಾರ ಹೇಳಿರೋ ನಿತ್ಯಾ ಮದುವೆ 15 ದಿನದಲ್ಲಿ ಆಗ್ಲೇ ಬೇಕು ಅಂತ ಷರತ್ತು ಹಾಕಿದ್ದಾರೆ ಅಜ್ಜಿ. ಹೀಗಾಗಿ ಕರ್ಣನ ಅಜ್ಜಿ ಮೂಲಕ ಮದುವೆ ಜವಾಬ್ದಾರಿ ಕರ್ಣ ವರೆಗೂ ತಲುಪಿದೆ.
ಇದಿಷ್ಟು ಸದ್ಯದ ಟ್ರ್ಯಾಕ್. ಈ ಮದುವೆ ಮುಗಿಯೋ ಅಷ್ಟರಲ್ಲಿ ಮೂವರ ಲೈಫೇಗೆ ಹೊಸ ಟ್ವಿಸ್ಟ್ ಸಿಗಲಿದೆ. ನಿತ್ಯಾ ಜೋಡಿ ಆಗಿರೋ ತೇಜಸ್ ಬಗ್ಗೆ. ತೇಜಸ್ ಪಾತ್ರ ಮಾಡ್ತೀರೋ ನಟನ ಹೆಸರು ಚೇತನ್ ರಾಜ್. ಮೂಲತಹ ಬೆಂಗಳೂರಿನವರು. ಓದಿದ್ದು ಜೈನ್ ಕಾಲೇಜ್ನಲ್ಲಿ ಪದವಿ ಮುಗಿಸಿದ್ದಾರೆ. ಅಲ್ಲಿಂದ ಕೆಲ ವರ್ಷ ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡಿದ್ರು. ಆದ್ರೇ ಆಸಕ್ತಿ ಎಲ್ಲಾ ನಟನೆ ಕಡೆ ಇದ್ದಿದ್ರಿಂದ, ಕೆಲಸಕ್ಕೆ ಗುಡ್ ಬೈ ಹೇಳಿ ಅಭಿನಯದತ್ತ ಮುಖ ಮಾಡಿದ್ರು.
ಚೇತನ್ ರಾಜ್ ನಟನೆ ಜೊತೆಗೆ ಅದ್ಭತ ಡ್ಯಾನ್ಸರ್.
ಕೊರಿಗ್ರಾಫರ್ ತಾರಕ್ ಅವರ ಜೊತೆಗೆ ಕೆಲಸ ಮಾಡಿದ್ದಾರೆ. ನಂತರ ಇಂತಿ ನಿಮ್ಮ ಆಶಾ, ಕ್ಷಮಾ ಸೇರಿದಂತೆ ಹಲವು ಸೀರಿಯಲ್ಗಳಿಗೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ಇಂಡಸ್ಟ್ರಿಲಿದ್ರು, ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಬ್ರೇಕ್ ಆಗಿ ಕಾಯ್ತಾ ಇದ್ದ ಚೇತನ್ಗೆ ಅರಸಿ ಬಂದಿದ್ದು ಕರ್ಣ ಧಾರಾವಾಹಿಯ ತೇಜಸ್ ಪಾತ್ರ. ನಮ್ರತಾ ಹಾಗೂ ಚೇತನ್ ಜೋಡಿಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ತೇಜಸ್ ಪಾತ್ರ ನಿಜಕ್ಕೂ ನಿತ್ಯಾಳನ್ನ ಮದುವೆ ಆಗ್ತಾನಾ? ಇವ್ರು ವಿಲನ್? ಹೀಗೆ ಸಾಕಷ್ಟು ಕುತೂಹಲದ ಅಂಶಗಳು ವೀಕ್ಷಕ ಬಳಗದಲ್ಲಿ ಚರ್ಚೆ ಆಗ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ