/newsfirstlive-kannada/media/post_attachments/wp-content/uploads/2025/04/laxmi-baramma1.jpg)
ಕನ್ನಡದ ಜನಪ್ರಿಯ ಧಾರಾವಾಹಿ ಎಂದರೆ ಅದು ಲಕ್ಷ್ಮೀ ಬಾರಮ್ಮ. ಈಗಾಗಲೇ ಲಕ್ಷ್ಮೀ ಬಾರಮ್ಮ ಸೀರಿಯಲ್ ಶೂಟಿಂಗ್ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀರಿಯಲ್ ಅಂತ್ಯ ಹಾಡಲಿದೆ. ಸದ್ಯ ಈಗ ಕ್ಲೈಮ್ಯಾಕ್ಸ್ ಬಗ್ಗೆ ವೀಕ್ಷಕರ ಚಿತ್ತ ನೆಟ್ಟಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ನ ವಿಡಿಯೋವೊಂದು ವೈರಲ್ ಆಗಿದೆ.
ಇದನ್ನೂ ಓದಿ:ಬಿಸಿಲ ಬೇಗೆಯನ್ನು ನೀಗಿಸಿದ ಮಳೆರಾಯ! ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ!
ಹೌದು, ಇದು ನಿಜಕ್ಕೂ ವೀಕ್ಷಕರಿಗೆ ಶಾಕಿಂಗ್ ಸುದ್ದಿ ಅಂತಲೇ ಹೇಳಬಹುದು. ವೀಕ್ಷಕರು ತುಂಬಾ ಇಷ್ಟಪಟ್ಟ, ಇವತ್ತಿಗೂ ಪ್ರೀತಿಯಿಂದ ನೋಡುತ್ತಿರೋದು ಲಕ್ಷ್ಮೀ ಬಾರಮ್ಮ. ಆದ್ರೆ ಮುಕ್ತಾಯದ ಹಂತಕ್ಕೆ ಬಂದು ತಲುಪಿದ ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಟ್ವಿಸ್ಟ್ವೊಂದು ಎದುರಾಗಿದೆ.
ಅದು ಲಕ್ಷ್ಮೀ ಸೀಮಂತದ ಫೋಟೋ. ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಸುಪ್ರೀತಾ ಪಾತ್ರದಲ್ಲಿ ನಟಿಸಿದ್ದ ರಜನಿ ಅವರು ಶೇರ್ ಮಾಡಿಕೊಂಡಿರೋ ವಿಡಿಯೋ ಈಗ ವೀಕ್ಷಕರಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ನಟಿ ರಜನಿ ಪ್ರವೀಣ್ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸೀರಿಯಲ್ ಕೊನೆ ದಿನದ ಶೂಟಿಂಗ್ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಒಂದು ಫೋಟೋದಲ್ಲಿ ಲಕ್ಷ್ಮೀಗೆ ಸೀಮಂತ ಮಾಡುತ್ತಿರುವ ಹಾಗೆ ಎದ್ದು ಕಾಣುತ್ತಿದೆ. ಅಂದರೆ ಈ ಧಾರಾವಾಹಿ ಅಂತ್ಯದಲ್ಲಿ ಲಕ್ಷ್ಮೀ ಗರ್ಣಿಣಿಯಾಗಲೂಬಹುದು ಎಂದು ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.
ಈಗಾಗಲೇ ಕೀರ್ತಿಗೆ ನೆನಪಿನ ಶಕ್ತಿ ಬಂದಿದ್ದು, ಹಳೆಯ ವಿಚಾರ ಎಲ್ಲ ನೆನಪಾಗಿದೆ. ತಮಗೆ ಬೇಕಾದಂತೆ ನಮ್ಮ ಜೀವನವನ್ನು ಹಾಳು ಮಾಡಿರೋ ಕಾವೇರಿ ಆಂಟಿಯನ್ನು ಕೊಲ್ತೀನಿ ಅಂತ ಕೀರ್ತಿ ತ್ರಿಶೂಲ ಹಿಡಿದು ಹೊರಟಿದ್ದಳು. ಅದನ್ನು ನೋಡಿ ಲಕ್ಷ್ಮೀ ತಡೆದಿದ್ದಾಳೆ. ಇನ್ನೂ ಸೀರಿಯಲ್ ಅಂತ್ಯ ಆಗುವ ಬಗ್ಗೆ ಕಲರ್ಸ್ ಕನ್ನಡ ಮಾಹಿತಿ ಹಂಚಿಕೊಂಡಿದೆ. ಏಪ್ರಿಲ್ 14ರಂದು ಈ ಧಾರಾವಾಹಿಯ ಕೊನೆಯ ಎಪಿಸೋಡ್‌ಗಳು ಪ್ರಸಾರ ಆಗಲಿದೆ. ಸೀರಿಯಲ್ ಕೊನೆಯಲ್ಲಿ ಲಕ್ಷ್ಮೀ ಸೀಮಂತದ ಬಗ್ಗೆ ರಿವೀಲ್ ಮಾಡ್ತಾರಾ ಅಂತ ಕಾದು ನೋಡಬೇಕಿದೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ