‘ಅಯ್ಯೋ, ಗೌಡ್ರೆ ಇದೇನ್​ ಮಾಡ್ಬಿಟ್ರಿ..’ ಕನ್ನಡಿಗರ ಮನಸ್ಸು ಗೆದ್ದ ಲಕ್ಷ್ಮೀ ನಿವಾಸದಲ್ಲಿ ಶಾಕಿಂಗ್​ ಟ್ವಿಸ್ಟ್..!​

author-image
Veena Gangani
Updated On
ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ ಸಿದ್ದೇಗೌಡ್ರ ತಾಳಿ ಸ್ಟೋರಿ.. ಭಾವನಾಗೆ ಮತ್ತೆ ಸಂಕಷ್ಟ
Advertisment
  • ಕನ್ನಡ ಕಿರುತೆರೆಯಲ್ಲೇ ವಿಭಿನ್ನವಾಗಿ ಮೂಡಿ ಬರ್ತಿದೆ ಲಕ್ಷ್ಮೀ ನಿವಾಸ ಸೀರಿಯಲ್​
  • ಎಲ್ಲ ಮಿಡಲ್ ಕ್ಲಾಸ್ ಜೀವನದಲ್ಲಿ ಬದುಕುತ್ತಿರೋ ದಂಪತಿಯ ಕತೆ ಇದಾಗಿದೆ
  • ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಲಕ್ಷ್ಮೀ ನಿವಾಸ ಸೀರಿಯಲ್​​ ಟೀಮ್

ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್​ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಈ ಸೀರಿಯಲ್​. ಅದರಲ್ಲೂ ಲಕ್ಷ್ಮೀ ನಿವಾಸ ವೀಕ್ಷಕರ ಮನಸ್ಸನ್ನ ಗೆದ್ದುಕೊಂಡಿದೆ.

publive-image

ಇದನ್ನೂ ಓದಿ: ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

ಕರ್ನಾಟಕದ ನಂಬರ್​ ಒನ್​ ಧಾರಾವಾಹಿಯಾಗಿ ಜನಪ್ರಿಯತೆ ಪಡೆಯುತ್ತಿದೆ. ತುಂಬು ಕುಟುಂಬದ ಕಥೆ ಮತ್ತೊಂದು ಹೊಸ ರೂಪ ಪಡೆಯುತ್ತಿದೆ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಒಂದು ಕಡೆ ಜಾಹ್ನವಿ-ಜಯಂತ್​ ಮದುವೆ ಸ್ಟೋರಿ. ಮತ್ತೊಂದು ಕಡೆ ಸಿದ್ದೇಗೌಡ್ರು-ಭಾವನಾ ಲವ್​ ಸ್ಟೋರಿ ಶುರುವಾಗಿತ್ತು. ಸಿದ್ದೇಗೌಡ್ರು ಲವ್​​ ಮಾಡೋ ಸ್ಟೈಲ್​ ಅನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಭಾವನಾ ತನಗೆ ಸಿಗಬೇಕು ಅಂತ ಸಿದ್ದೇಗೌಡ್ರು ಅಂದ್ರು ಕೊಂಡಿದ್ದರು. ಆದರೆ ಭಾವನಾ ಎಲ್ಲಿ ಕೈ ತಪ್ಪಿ ಹೋಗಿ ಬಿಡುತ್ತಾರೆ ಅಂತ ಸಿದ್ದೇಗೌಡ್ರು ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ಇದೀಗ ಭಾವನಾಳಿಗೆ ಸಿದ್ದೇಗೌಡರು ಕದ್ದು ಮುಚ್ಚಿ ತಾಳಿ ಕಟ್ಟಿ ಮದುವೆ ಆಗಿ ಬಿಟ್ಟಿದ್ದಾರೆ. ಆದರೆ ತನ್ನ ಕತ್ತಲ್ಲಿ ತಾಳಿ ನೋಡಿದ ಭಾವನ ಫುಲ್ ಶಾಕ್​ ಆಗಿದ್ದಾಳೆ. ಸದ್ಯ ಕತ್ತಲ್ಲಿರೋ ತಾಳಿಯನ್ನು ಬಚ್ಚಿಟ್ಟು, ವಿಧಿಯಾಟದ ಬಗ್ಗೆ ದುಃಖಿಸ್ತಿದ್ದಾಳೆ ಭಾವನಾ.

publive-image

ಹೌದು, ಇದೇ ಸೀರಿಯಲ್​ ನೋಡಿದ ವೀಕ್ಷಕರು ನಟ ವಿಜಯ್ ರಾಘವೇಂದ್ರ, ನಟಿ ರಮ್ಯಾ ಅಭಿಮಾನಿ ಸೇವಂತಿ ಸೇವಂತಿ ಸಿನಿಮಾದ ದೃಶ್ಯವನ್ನು ಮರುಸೃಷ್ಟಿ ಮಾಡಿಬಿಟ್ರಾ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಲಕ್ಷ್ಮೀ ನಿವಾಸ ದೃಶ್ಯದಿಂದ ಇಡೀ ಧಾರಾವಾಹಿಯ ಕಥೆ ಹೊಸ ತಿರುವು ಪಡೆದುಕೊಳ್ಳಲಿದೆ. ಸದ್ಯ ಮುಂದಿನ ದಿನಗಳಲ್ಲಿ ಏನೆಲ್ಲಾ ಆಗುತ್ತೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment