/newsfirstlive-kannada/media/post_attachments/wp-content/uploads/2025/04/laxmi-nivasa7.jpg)
ಚಿನ್ನುಮರಿಯನ್ನು ಕಳೆದುಕೊಂಡ ಜಯಂತ್ ನಿಜಕ್ಕೂ ಸೈಕೆ ರೀತಿಯಲ್ಲಿ ವರ್ತಿಸುತ್ತಿದ್ದಾನೆ. ಬಾಲ್ಯದಲ್ಲಿ ಆರೈಕೆ ಮಾಡಿದ್ದ ಶಾಂತಮ್ಮಳನ್ನು ಕರೆತಂದು ಆಕೆಗೂ ಜಾನು ಬಗ್ಗೆ ಹೇಳಿ ಹೇಳಿ ಹಿಂಸೆ ನೀಡುತ್ತಿದ್ದಾರೆ. ಜಾನು ಸತ್ತಿಲ್ಲ, ಚಿನ್ನು ಮರಿ ಜೀವಂತವಾಗಿಯೇ ಇದ್ದಾಳೆ. ಇಂದಲ್ಲಾ ನಾಳೆ ಬಂದೆ ಬರ್ತಾಳೆ ಅಂತ ಬಲವಾಗಿ ನಂಬಿಕೆ ಇಟ್ಟುಕೊಂಡಿದ್ದಾನೆ ಜಯಂತ್.
ಇದನ್ನೂ ಓದಿ: ಗಂಡನಿಂದ 9 ತಿಂಗಳ ಗರ್ಭಿಣಿ ಪತ್ನಿಯ ಬರ್ಬರ ಕೊಲೆ.. ಭೂಮಿಗೆ ಬರುವ ಮೊದಲೇ ಕಣ್ಣು ಮುಚ್ಚಿದ ಕಂದಮ್ಮ..
ಇದಕ್ಕೆ ಸಾಕ್ಷಿ ಎಂಬಂತೆ ಜಾನು ಕಾಲ್ಗೆಜ್ಜೆ ಜಯಂತ್ ಕೈಗೆ ಸಿಕ್ಕಿದೆ. ಮತ್ತೊಂದು ಕಡೆ ಹುಡುಗನ ಮಾತು ಕೇಳಿ ಶಾಕ್ ಆಗಿದ್ದಾನೆ ಜಯಂತ್. ಹೌದು, ಜಾಹ್ನವಿಯನ್ನು ಕಳೆದುಕೊಂಡಿರುವ ಜಯಂತ್ ಹಾವ ಭಾವ ಬದಲಾಗಿ ಹೋಗಿದೆ. ಚಿನ್ನುಮರಿ ಸತ್ತಿಲ್ಲ ಅನ್ನೋದು ಜಯಂತ್ ಬಲವಾದ ನಂಬಿಕೆಯಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಚಿನ್ನುಮರಿ ಇನ್ನೂ ಜೀವಂತವಾಗಿದ್ದಾರೆ ಅನ್ನೋದು ಬಲವಾಗಿದೆ.
ಜಾನು ಪೋಷಕರನ್ನು ನೋಡಲು ತನ್ನ ಮನೆಗೆ ವಾಪಸ್ ಆಗಿದ್ದಾಳೆ. ನಂತರ ಅಜ್ಜಿಯನ್ನು ಭೇಟಿಯಾಗಿ ತನ್ನೆಲ್ಲಾ ಕಥೆಯನ್ನು ಹೇಳಿಕೊಂಡು ಅಲ್ಲಿಂದ ಹೋಗಿದ್ದಳು. ಈ ವೇಳೆ ಜಾನು ಧರಿಸಿದ ಕಾಲ್ಗೆಜ್ಜೆ ಅಜ್ಜಿಯ ಕೋಣೆಯಲ್ಲಿಯೇ ಬಿದ್ದಿತ್ತು. ಈ ಕಾಲ್ಗೆಜ್ಜೆ ಜಯಂತ್‌ಗೆ ಸಿಕ್ಕಿದ್ದು, ತನ್ನ ಚಿನ್ನುಮರಿ ಸತ್ತಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾನೆ.
ಬೆಳಗ್ಗೆ ಜಾನು ಮನೆಯಿಂದ ಹೊರಡುವಾಗ ಲಕ್ಷ್ಮೀ ನಿವಾಸದ ಪಕ್ಕದ್ಮನೆ ಹುಡುಗ, ಜಯಂತ್ ಅಂಕಲ್, ಜಾನು ಅಕ್ಕ ಎಲ್ಲಿ ಎಂದು ಕೇಳುತ್ತಾನೆ. ಇದಕ್ಕೆ ದುಃಖದಿಂದ ಜಾನು ತನ್ನೊಂದಿಗೆ ಇಲ್ಲ ಎಂಬ ವಿಷಯವನ್ನು ಹೇಳಿದ್ದಾನೆ. ಆಗ ಹುಡುಗ ನಗುತ್ತಾ, ನಾನು ನಿನ್ನೆ ರಾತ್ರಿಯಷ್ಟೇ ಜಾನು ಅಕ್ಕಳನ್ನ ನೋಡಿದ್ದೆ. ನನಗೆ ಚಾಕೊಲೇಟ್ ನೀಡಿ ಚೆನ್ನಾಗಿ ಓದಬೇಕು ಎಂದು ಹೇಳಿದ್ದಾಳೆ. ಸುಳ್ಳು ಹೇಳಬೇಡಿ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಜಯಂತ್, ಚಿನ್ನುಮರಿ ಬದುಕಿರೋದನ್ನು ಖಚಿತಪಡಿಸಿಕೊಂಡಿದ್ದಾನೆ. ಇತ್ತ ಆ ಹುಡುಗನ ಮಾತು ಕೇಳಿ ಕಾರ್‌ನಲ್ಲಿ ಕುಳಿತಿದ್ದ ಶಾಂತಮ್ಮ ಕಂಗಾಲು ಆಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ