/newsfirstlive-kannada/media/post_attachments/wp-content/uploads/2025/04/laxmi-nivasa4.jpg)
ದಿನದಿಂದ ದಿನಕ್ಕೆ ಲಕ್ಷ್ಮೀ ನಿವಾಸ ಸೀರಿಯಲ್ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸೈಕೋ ಪತಿ ಜಯಂತ್ನಿಂದ ಮುಕ್ತಿ ಪಡೆಯಬೇಕು ಅಂತ ಜಾಹ್ನವಿ ಸಮುದ್ರಕ್ಕೆ ಹಾರಿದ್ದಳು. ಆದ್ರೆ, ಅಚ್ಚರಿಯ ಎಂಬಂತೆ ಜಾನೂ ಬದುಕಿ ಬಂದಿದ್ದಾಳೆ. ಆದ್ರೆ ಚಿನ್ನುಮರಿ ಬದುಕಿರೋ ವಿಚಾರ ಜಯಂತ್ಗೆ ತಿಳಿದಿಲ್ಲ. ಆದ್ರೆ ನಿಜಕ್ಕೂ ಚಿನ್ನುಮರಿ, ಮುದ್ದು ಮರಿ ತನ್ನ ಜೊತೆಗೆ ಇಲ್ಲ ಅಂತ ಜಯಂತ್ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ.
ಇದನ್ನೂ ಓದಿ: ಮೂರನೇ ಮಹಡಿ ಹೊತ್ತಿ ಉರಿಯುತ್ತಿತ್ತು.. ಇಬ್ಬರು ಮಕ್ಕಳನ್ನ ರಕ್ಷಿಸಿ ತಾಯಿ ಗ್ರೇಟ್ ಎಸ್ಕೇಪ್..! Video
ಹೌದು, ಅಷ್ಟು ದೊಡ್ಡ ಮನೆಯಲ್ಲಿ ಜಯಂತ್ ಒಂಟಿಯಾಗಿದ್ದಾನೆ. ಆದ್ರೆ ಈ ಕಥೆಯಲ್ಲಿ ಮತ್ತೊಂದು ಪಾತ್ರ ಎಂಟ್ರಿ ಕೊಟ್ಟಿದೆ. ಸದ್ಯ ಒಂಟಿಯಾಗಿದ್ದ ಜಯಂತ್ ತನ್ನ ಮನೆಗೆ ಬಾಲ್ಯದಲ್ಲಿ ಆರೈಕೆ ಮಾಡಿದ್ದ ಶಾಂತಮ್ಮಳನ್ನು ಕೆಲಸ ಮಾಡಲು ಕರೆಸಿಕೊಂಡಿದ್ದಾನೆ. ಆದ್ರೆ ಜಯಂತ್ ಬಗ್ಗೆ ತಿಳಿದುಕೊಂಡಿರೋ ಶಾಂತಮ್ಮ ಮೊದಲು ಬರಲು ಹಿಂದೇಟು ಹಾಕಿದ್ದಳು. ಆದ್ರೆ ಜಯಂತ್ ಕೈತುಂಬಾ ಹಣ ಕೊಟ್ಟಿದ್ದರಿಂದ ಗಂಡನ ಒತ್ತಾಯದಿಂದ ಶಾಂತಮ್ಮ ಸೈಕೋ ಜೊತೆ ಮನೆ ಸೇರಿದ್ದಾಳೆ.
ಇನ್ನೂ, ಒಂದು ಕಡೆ ಜಾನು ಕುಟುಂಬಸ್ಥರು ಹಾಲು-ತುಪ್ಪ ಬಿಡುವ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆ ಜಯಂತ್ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಇದನ್ನೂ ನೋಡಿ ಶಾಂತಮ್ಮ ಮಾತಾಡಲು ಆಗದೇ ಶಾಕ್ನಲ್ಲಿ ನಿಂತುಕೊಂಡಿದ್ದಾಳೆ. ಆ ಮಗು ಜಾನೂ ಕೂಡ ಜಯಂತ್ನ ಈ ರೀತಿಯ ವರ್ತನೆಗೆ ಬೇಸರಗೊಂಡಿದ್ದಳು ಅಂತ ಮಾತಾಡಿಕೊಳ್ಳುತ್ತಿದ್ದಾಳೆ. ಅಲ್ಲದೇ ರಾತ್ರಿ ಮಲಗಿಕೊಂಡಿದ್ದ ಶಾಂತಮ್ಮನನ್ನು ಎಬ್ಬಿಸಿ ಬನ್ನಿ ಜಾನೂ ಬಳಿ ಹೋಗಿ ಬರೋಣ ಅಂತ ಕರೆದುಕೊಂಡು ಹೋಗಿದ್ದಾನೆ ಜಯಂತ್.
ಆದ್ರೆ ಅದೇ ಹೊತ್ತಿಗೆ ಜಾನು ತನ್ನ ತಾಯಿಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ನಾನು ಬದುಕಿರುವ ವಿಚಾರ ಎಲ್ಲರಿಗೂ ಗೊತ್ತಾಗುತ್ತಾ ಅಥವಾ ಜಾನುನನ್ನು ಸೈಕೋ ಜಯಂತ್ ನೋಡಿ ಬಿಡ್ತಾನಾ ಅಂತ ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಒಂದಆದ ಮೇಲೆ ಒಂದು ಬರುತ್ತಿರೋ ಸಂಚಿಕೆಗಳನ್ನು ನೋಡಿದ ವೀಕ್ಷಕರಂತೂ ಸಖತ್ ಥ್ರಿಲ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ