ಓಪನಿಂಗ್​ ಮೊದಲ ದಿನವೇ ಮುದ್ದು ಸೊಸೆ ಸೀರಿಯಲ್​ನಲ್ಲಿ ಮೆಗಾ ಟ್ವಿಸ್ಟ್; ಏನದು?

author-image
Veena Gangani
Updated On
ಓಪನಿಂಗ್​ ಮೊದಲ ದಿನವೇ ಮುದ್ದು ಸೊಸೆ ಸೀರಿಯಲ್​ನಲ್ಲಿ ಮೆಗಾ ಟ್ವಿಸ್ಟ್; ಏನದು?
Advertisment
  • ವಿದ್ಯಾಗೆ ವಿದ್ಯೆ ಅನ್ನೋದು ಕನಸಾಗಿಯೇ ಉಳಿಯುತ್ತಾ?
  • ಜೊತೆ ಜೊತೆಯಲಿ ಸೀರಿಯಲ್ ಮೂಲಕ ನಟಿ ಫೇಮಸ್​
  • ಜೊತೆ ಜೊತೆಯಲಿ ಧಾರಾವಾಹಿ ಬಳಿಕ ಮತ್ತೆ ಅಭಿನಯ

ಕಲರ್ಸ್​ ಕನ್ನಡ ವಾಹಿನಿಯ ಬಹು ನಿರೀಕ್ಷಿತ ಧಾರಾವಾಹಿ ಮುದ್ದು ಸೊಸೆ. ತ್ರಿವಿಕ್ರಮ್​ ಹಾಗೂ ಪ್ರತಿಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಸಂಚಿಕೆ ಪ್ರಸಾರ ಕಂಡಿದೆ. ಧಾರಾವಾಹಿ ಒಪನಿಂಗ್​ನಲ್ಲೇ ನಟಿ, ನಿರ್ಮಾಪಕಿ ಮೇಘಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್​ ಫೋಟೋಸ್!

publive-image

ಅವರೇ ಪಾತ್ರಗಳನ್ನ ಪರಿಚಯ ಮಾಡಿಕೊಡ್ತಾ ಹೋಗ್ತಾರೆ. ಚನ್ನಪಟ್ಟಣ ಸುತ್ತಮುತ್ತದ ಗೆದ್ದೆ, ತೋಟಗಳಲ್ಲಿ ಶೂಟಿಂಗ್​ ನಡೆದಿದೆ. ಪ್ರಕೃತಿ ಮಡಿಲಲ್ಲಿ ಮಂಡ್ಯ ಗತ್ತಲ್ಲಿ ತ್ರಿವಿಕ್ರಮ್​ ಪಾತ್ರ ತೆರೆದುಕೊಳ್ಳುತ್ತೆ. ನಾಯಕನ ಕುಟುಂಬ ಊರಿಗೆ ನ್ಯಾಯ ಹೇಳೋ ದೊಡ್ಡಮನೆ. ಭದ್ರೇಗೌಡನಿಗೆ ಅಪ್ಪ ಶಿವರಾಮೇಗೌಡನೇ ಪ್ರಪಂಚ. ಹೆಣ್ಮಕ್ಕಳ ಓದಿಗೆ ಪ್ರಾಮುಖ್ಯತೆ ಕೊಡ್ತಿದ್ದ ಶಿವರಾಮೇಗೌಡನಿಗೆ ಮಗಳು ಪ್ರೀತಿ ಮಾಡಿ ಕದ್ದು ಮದುವೆ ಆಗಿರೋ ಸುದ್ದಿ ಆಘಾತ ತರುತ್ತೆ.

publive-image

ಅಲ್ಲಿಂದ ಕಾಲೇಜು ಮೆಟ್ಟಿಲು ಹತ್ತಿದ ಹೆಣ್ಮಕ್ಕಳೆಲ್ಲಾ ಕೆಟ್ಟವ್ರು ಅನ್ನೋ ಭಾವನೆ ಶುರುವಾಗಿ ಬಿಡುತ್ತೆ. ವಿದ್ಯ ಬಗ್ಗೆ ಅರಿವೇ ಇಲ್ಲದ ಮಗ ಭದ್ರೇಗೌಡನಿಗೆ ಕಮ್ಮಿ ಓದಿರೋ ಮುದ್ದು ಹುಡುಗಿನ ಹುಡುಕೋದೇ ಅಪ್ಪನ ಆಸೆ, ಮಗನಿಗೆ ಅಪ್ಪ ಎಲೆಕ್ಷನ್​ನಲ್ಲಿ ಗೆದ್ದು ಬೀಗ್ಬೇಕು ಅನ್ನೋ ಕನಸು. ಇನ್ನೂ, ನಾಯಕಿ ವಿದ್ಯಾಗೆ ಡಾಕ್ಟರ್​ ಆಗೋ ಕನಸು.

publive-image

ಅಪ್ಪ ಕುಡಿತಕ್ಕೆ ದಾಸನಾಗಿರ್ತಾನೆ. ಇಬ್ಬರೂ ಹೆಣ್ಮಕ್ಕಳ ಭವಿಷ್ಯನ ಪಣಕ್ಕಿಟ್ಟು ಮೋಜು, ಮಸ್ತಿಯಲ್ಲೇ ಮೂಳಗಿರ್ತಾನೆ. ಜಾಣೆ ಆಗಿರೋ ವಿದ್ಯಾಗೆ ವಿದ್ಯೆ ಅನ್ನೋದು ಕನಸಾಗಿಯೇ ಉಳಿಯುತ್ತಾ? ಇಲ್ಲ ಎಲ್ಲವನ್ನ ಮೀರಿ ಡಾಕ್ಟರ್​ ಆಗ್ತಾಳಾ ಅನ್ನೋದೇ ಸ್ಟೋರಿ ಲೈನ್​. ಮೊದಲ ಸಂಚಿಕೆ ಭರವಸೆ ಮೂಡಿಸಿದೆ. ನಾಯಕ, ನಾಯಕಿಗೆ ಮಂಡ್ಯ ಭಾಷೆ ಕೊಂಚ ಕಷ್ಟ ಅನ್ಸುತ್ತೆ. ಈ ಕೊರತೆನ ಪೋಷಕ ಪಾತ್ರಗಳು ತೂಗಿಸಿಕೊಂಡು ಹೋಗ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment