ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ವಾಪಸ್​ ಆದ್ರಾ ಸಂಜನಾ ಬುರ್ಲಿ? ಪ್ರೋಮೋದಲ್ಲಿ ಇರೋದ್ಯಾರು..?

author-image
Veena Gangani
Updated On
ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ವಾಪಸ್​ ಆದ್ರಾ ಸಂಜನಾ ಬುರ್ಲಿ? ಪ್ರೋಮೋದಲ್ಲಿ ಇರೋದ್ಯಾರು..?
Advertisment
  • ಸಂಜನಾ ಬುರ್ಲಿ ಮತ್ತೆ ವಾಪಸ್​ ಬಂದೇಬಿಟ್ರಾ ಏನಿದು..?
  • ಹೊಸ ಹೊಸ ತಿರುವು ಪಡೆದುಕೊಳ್ತಿದೆ ಪುಟ್ಟಕ್ಕನ ಮಕ್ಕಳು
  • ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದವರಿಗೆ ಮತ್ತೆ ಶಾಕ್​!

ಪುಟ್ಟಕ್ಕನ ಮಕ್ಕಳು ಕತೆ ಮತ್ತೆ ಟೇಕ್​ ಆಫ್​ ಆಗಿದೆ. ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದ ಸ್ಟೋರಿಗೆ ಹೊಸ ಹುರುಪು ತಗೊಂಡು ಬಂದಿದೆ​. ಮೊನ್ನೆಯಷ್ಟೇ ಸಾವಿರದ ಸಂಚಿಕೆ ಪೂರೈಸಿತ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿ.

publive-image

ಅಶ್ವಿನಿ ನಕ್ಷತ್ರ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿ ಕೊಡೆಗೆ ನೀಡಿರೋ ಆರೂರು ಜಗದೀಶ್​ ಅವರ ನಿರ್ಮಾಣದಲ್ಲಿ ಮೂಡಿ ಬರ್ತಿರೋ ಪುಟ್ಟಕ್ಕನ ಮಕ್ಕಳು ಕೂಡ ದಾಖಲೆಯ ಮೈಲಿಗಲ್ಲು ಸಾಧಿಸಿತ್ತು. ಆದ್ರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಸ್ನೇಹಾ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ನಟಿ ಸಂಜನಾ ಬುರ್ಲಿ.

ಇದನ್ನೂ ಓದಿ:ಇಂದಿನಿಂದ ರೈಲು ಪ್ರಯಾಣವೂ ದುಬಾರಿ.. ಐದು ವರ್ಷಗಳ ನಂತರ ಟಿಕೆಟ್​​ ರೇಟ್ ಹೆಚ್ಚಳ..

publive-image

ಇದೀಗ ಮತ್ತೆ ಸೀರಿಯಲ್​ಗೆ ವಾಪಸ್​ ಆದ ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ. ಹೌದು, ಜೀ ಕನ್ನಡ ರಿಲೀಸ್ ಮಾಡಿದ ಪ್ರೋಮೋದಲ್ಲಿ ಸ್ನೇಹಾ ಆತ್ಮ ಓಡಾಡುತ್ತಿದೆ. ಅಲ್ಲದೇ ಡಿಸಿ ಮೇಡಮ್ಮ ಸತ್ತು ಹೀಗಿದ್ರೂ ಆಕೆ ಆತ್ಮ ಓಡಾಡುತ್ತಿದೆ. ಅನ್ಯಾಯ ಮಾಡಿದವರನ್ನು ಸರಿ ಪಡಿಸಲು ಸ್ನೇಹಾ ಆತ್ಮದ ರೂಪದಲ್ಲಿ ಕಾಣಿಸಿಕೊಂಡಿದ್ದಾಳು. ಆದ್ರೇ ರಿಲೀಸ್ ಆದ ಪ್ರೋಮೋ ನೊಡಿ ವೀಕ್ಷಕರು ಮತ್ತೆ ನಟಿ ಸಂಜನಾ ಬುರ್ಲಿ ಸೀರಿಯಲ್​ಗೆ ವಾಪಸ್​ ಆದ್ರಾ ಅಂತ ಕನ್ಫ್ಯೂಸ್ ಆಗಿದ್ದಾರೆ. ಹೀಗಾಗಿ ಇದಾದ ಬಳಿಕ ಮತ್ತೆ ಸ್ನೇಹಾಳ ಆತ್ಮದ ರೂಪದಲ್ಲಿ ಬಂದಿದ್ದು ಯಾರು ಅಂತ ತಂಡ ರಿವೀಲ್​ ಮಾಡಿದೆ.

ರಿಲೀಸ್​ ಆದ ಮತ್ತೊಂದು ಪ್ರೋಮೋದಲ್ಲಿ ಸ್ನೇಹಾಳ ಮುಖವಾಡ ಹಾಕಿಕೊಂಡು ರಾಜಿ ಎಂಟ್ರಿ ಕೊಟ್ಟಿ ಕೊಟ್ಟು ಶಾಕ್​ ನೀಡಿದ್ದಾಳೆ. ಸದ್ಯ ಮುಂದಿನ ದಿನಗಳಲ್ಲಿ ಸ್ನೇಹಾಳ ಮುಖವಾಡ ಧರಿಸಿ ರಾಜಿ ಏನೆಲ್ಲಾ ಮಾಡ್ತಾಳೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment