ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಒಲಿದ ಅದೃಷ್ಟ; ಆ ನಟಿ ಎಂಟ್ರಿಗೆ ಎಲ್ಲವೂ ಬದಲು!

author-image
Veena Gangani
Updated On
ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಒಲಿದ ಅದೃಷ್ಟ; ಆ ನಟಿ ಎಂಟ್ರಿಗೆ ಎಲ್ಲವೂ ಬದಲು!
Advertisment
  • ಮುಕ್ತಾಯದ ನಿರೀಕ್ಷೆಯಲ್ಲಿದ್ದ ವೀಕ್ಷಕರಿಗೆ ಶಾಕ್​
  • ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಮರು ಜೀವ ತುಂಬಿದ ನಟಿ
  • ಮತ್ತೆ ಟೇಕ್​ ಆಫ್​ ಆದ ಪುಟ್ಟಕ್ಕನ ಮಕ್ಕಳು ಸೀರಿಯಲ್​ ಕತೆ

ಪುಟ್ಟಕ್ಕನ ಮಕ್ಕಳು ಕತೆ ಮತ್ತೆ ಟೇಕ್​ ಆಫ್​ ಆಗಿದೆ. ಮುಕ್ತಾಯ ಆಗುತ್ತಾ ಅಂತ ಅಂದುಕೊಂಡಿದ್ದ ಸ್ಟೋರಿಗೆ ಹೊಸ ಹುರುಪು ತಗೊಂಡು ಬಂದಿದೆ ಕಂಠಿ ಲವ್​ ಸೀನ್ಸ್​. ಅಳಿಯನಿಗೆ ಅತ್ತೆನೇ ಲವ್​ ಗುರೂ ಆಗಿರೋದು ಸಖತ್​ ಮಜಾ ಕೊಡ್ತದೆ. ಅಲ್ಲದೇ ಪುಟ್ಟಕ್ಕನ ಲವ್​ ಪಾಠ ವರ್ಕ್​ ಆಗಿದೆ.

ಇದನ್ನೂ ಓದಿ:ಇನ್​ಸ್ಟಾದಲ್ಲಿ ಪತ್ನಿ ಮದುವೆ ವಿಡಿಯೋ ನೋಡಿ ಶಾಕ್ ಆದ ಪತಿ.. ಒಂದೇ ವಾರದ ಪ್ರೀತಿಗೆ ಕೈ ಕೊಟ್ಟ ಮಹಿಳೆ!

publive-image

ಪುಟ್ಟಕ್ಕನ ಮಕ್ಕಳು ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಎಕ್ಸ್​ಪೆಕ್ಟೆಶನ್​ ಇದೆ. ಟಾಪ್​ ಲಿಸ್ಟ್​ನಲ್ಲಿದ್ದ ಸೀರಿಯಲ್​ಗೆ ಡಿಸಿ ಸ್ನೇಹಾ ಸಾವು ಹೊಡೆತ ಕೊಟ್ಟಿತು. ಸ್ನೇಹಾ ಪಾತ್ರ ಮಾಡ್ತಿದ್ದ ಸಂಜನಾ ಬುರ್ಲಿ ಅವರು ವಿದ್ಯಾಭ್ಯಾಸದ ಕಾರಣದಿಂದ ಪುಟ್ಟಕ್ಕನಿಂದ ಹೊರಬಂದಿದ್ದು ನಿಮಗೆಲ್ಲ ಗೊತ್ತಿರೋ ವಿಚಾರನೇ. ಆದ್ರೆ ಇಲ್ಲಿ ಒಂದ್​ ಎಡವಟ್ಟಾಗಿತ್ತು.

publive-image

ಸಾಮಾನ್ಯವಾಗಿ ಕಲಾವಿದರು ಧಾರಾವಾಹಿ ಬಿಡೋ ಪರಿಸ್ಥಿತಿ ಬಂದಾಗ, ಪಾತ್ರಕ್ಕೆ ಹೊಸ ಕಲಾವಿದರನ್ನ ತರ್ತಾರೆ. ಆದರಿಲ್ಲಿ ಪುಟ್ಟಕ್ಕನ ತಂಡ ಸ್ವಲ್ಪ ವಿಭಿನ್ನವಾಗಿ ಯೋಚಿಸಿತು. ಸ್ನೇಹಾ ಪಾತ್ರನ ರಿಪ್ಲೇಸ್​ ಮಾಡೋದು ಬೇಡ. ಹೊಸ ಪಾತ್ರ ಸೃಷ್ಟಿಸಿ ಅದಕ್ಕೆ ಸ್ನೇಹಾ ಅಂತ ಹೆಸರು ಇಡೋಣ ಅಂತ ನಿರ್ಧಾರ ಮಾಡಿ ಹೊಸ ಟ್ರ್ಯಾಕ್​ ಓಪನ್​ ಮಾಡಿದ್ರು. ಡಿಸಿ ಸ್ನೇಹಾ ಹಾರ್ಟ್​ನ ಈ ಸಾಮನ್ಯ ಹುಡುಗಿಗೆ ಕಸಿ ಮಾಡಿಸಿ ಆ ಹೃದಯದ ಸುತ್ತ ಕತೆ ಹೆಣೆಯೋಕೆ ಶುರು ಮಾಡಿತ್ತು ತಂಡ.

publive-image

ಹೊಸ ಸ್ನೇಹಾ ಪಾತ್ರದಲ್ಲಿ ಅಪೂರ್ವ ನಾಗರಾಜ್​ ಕ್ಲಿಕ್​ ಆಗಲಿಲ್ಲ. ಪಾತ್ರ ನಿರ್ವಹಣೆ ಚಂದ ಇದ್ರೂ ಕಂಠಿ ಸ್ನೇಹಾ ಕೆಮೆಸ್ಟ್ರೀ ವರ್ಕೌಟ್​ ಆಗ್ಲಿಲ್ಲ. ಈ ನಡುವೆ ಸಹನಾ ಪಾತ್ರ ಹೈಲೈಟ್. ಕಾಳಿ ಸಹನಾ ಸ್ನೇಹ, ಫಾರೀನ್​ ಲುಕ್ ಹುಡುಗ ಮಾಕ್ಸಿ ಸ್ಟೋರಿ ಒಂದ್​ ಮಟ್ಟಿಗೆ ಧಾರಾವಾಹಿಗೆ ಜೀವ ತುಂಬಿತು. ಆದ್ರೇ ಮುಖ್ಯವಾಗಿ ಕಂಠಿ-ಸ್ನೇಹಾ ಯಾಕೋ ವರ್ಕೌಟ್​ ಆಗ್ತಿಲ್ಲ, ಇನ್ನೇನು ಧಾರಾವಾಹಿನೇ ಮುಕ್ತಾಯ ಆಗ್ಬಿಡುತ್ತೆ ಅನ್ನೋ ಟಾಕ್​ ಶುರುವಾಗಿತ್ತು. ವೀಕ್ಷಕರನ್ನ ಹೇಗೆ ಹಿಡಿದಿಡೋದು ಎಂಬ ಯೋಚನೆಯಲ್ಲಿದ್ದ ನಿರ್ದೇಶಕರಿಗೆ ಸಿಕ್ಕ ಐಡಿಯಾ ಸ್ನೇಹಾ ಪಾತ್ರಕ್ಕೆ ಇನ್ನು ಸ್ವಲ್ಪ ರಗಡ್​ ಆಗಿರೋ ಕಲಾವಿದೆಯನ್ನ ತರ್ಬೇಕು ಅಂತ. ಆಗ ಎಂಟ್ರಿ ಕೊಟ್ಟಿದ್ದೇ ನಟಿ ವಿದ್ಯಾರಾಜ್​.

publive-image

ನೆಗೆಟಿವ್​ ಶೇಡ್ ಪಾತ್ರ ಮಾಡ್ತಿದ್ದ ವಿದ್ಯಾ, ಪುಟ್ಟಕ್ಕನ ಮೂಲಕ ಪೂರ್ಣ ಪ್ರಮಾಣದ ನಾಯಕಿ ಆಗಿ ಲಾಂಚ್ ಆದ್ರು. ಇಲ್ಲಿಂದ ಪುಟ್ಟಕ್ಕನ ಸ್ಟೋರಿಗೆ ಫ್ರೇಶ್​ನೆಸ್​ ಬಂದಿದೆ. ಕಂಠಿ-ಸ್ನೇಹಾ ಕೆಮಿಸ್ಟ್ರಿ ವರ್ಕೌಟ್​ ಆಗ್ತಿದೆ. ಜೊತೆಗೆ ಪುಟ್ಟಕ್ಕ ಪ್ರೀತಿ ಪಾಠ ಕಚಗುಳಿ ಇಡ್ತಿವೆ. ಸದ್ಯ ಸ್ಟೋರಿಲಿ ಕಂಠಿ ಸ್ನೇಹಾಗೆ ಪ್ರಪೋಸ್​ ಮಾಡೋಕೆ ತಯಾರಾಗ್ತಿದ್ದಾನೆ. ಪುಟ್ಟಕ್ಕ ಸ್ನೇಹಾಗೆ ಯಾವ ರೀತಿ ಪ್ರೇಮ ನಿವೇದನೆ ಮಾಡ್ಬೇಕು ಅಂತ ಅಳಿಯನಿಗೆ ಪಾಠ ಮಾಡ್ತಿದ್ದಾಳೆ. ಪ್ರೋಮೋ ಅಂತೂ ಸೂಪರ್ ಆಗಿ ಬಂದಿದೆ.

publive-image

ಅತ್ತೆ-ಅಳಿಯನ ರಿಹರ್ಸಲ್​ ಮುಗಿದ ನಂತರ,  ಝಗಮಗಿಸೋ ಲೈಟ್ ನಡುವೆ ಸ್ನೇಹಾಗೆ ಪ್ರೇಮ ನಿವೇದನೆ ಮಾಡಿದ್ದಾನೆ ಕಂಠಿ. ಆ ದೃಶ್ಯದ ಚಿತ್ರೀಕರಣ ನಿನ್ನೆಯಷ್ಟೇ ಮುಗಿದಿದ್ದು, ಇನ್ನು ಕೆಲ ದಿನಗಳಲ್ಲಿ ವೀಕ್ಷಕರ ಮುಂದೆ ಈ ಚಂದದ ದೃಶ್ಯ ಬರಲಿದೆ. ಸ್ನೇಹಾ ಕಂಠಿನ ಒಪ್ಪಿಕೊಳ್ತಾಳಾ? ಆದ್ರೆ ಮುಂದೆ ವೀಕ್ಷಕರಿಗೆ ಮಹಾ ಟ್ವಿಸ್ಟ್​ ಎದುರಾಗೋದು ಪಕ್ಕಾ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment