ರಾಮಾಚಾರಿ ಬಾಳಲ್ಲಿ ಮತ್ತೊಬ್ಬ ಹೀರೋಯಿನ್ ಎಂಟ್ರಿ.. ಚಾರುಗೆ ಶುರುವಾಯ್ತು ಆತಂಕ!

author-image
Veena Gangani
Updated On
ರಾಮಾಚಾರಿ ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯ ಹಂತದಲ್ಲಿದೆ ಟಾಪ್​ ಸೀರಿಯಲ್​..!
Advertisment
  • ಧಾರಾವಾಹಿ ಮುಕ್ತಾಯವಾಗುತ್ತಾ ಅನ್ನೋ ಡೌಟ್​​ನಲ್ಲಿದ್ದ ವೀಕ್ಷಕರು
  • ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ ರಾಮಾಚಾರಿ ಸೀರಿಯಲ್
  • ತಾನು ಮಾಡಿದ ತಪ್ಪು ಅರಿತು ಒಳ್ಳೆಯವಳಾಗಿದ್ದಾಳೆ ಅತ್ತಿಗೆ ವೈಶಾಖ

ರಾಮಾಚಾರಿ ಧಾರಾವಾಹಿಲ್ಲಿ ಹೊಸ ತಿರುವು ಪಡೆದುಕೊಳ್ತಿದೆ. ಧಾರಾವಾಹಿ ಮುಕ್ತಾಯವಾಗುತ್ತಾ ಅನ್ನೋ ಡೌಟ್​ನಲ್ಲಿದ್ದ ವೀಕ್ಷಕರಿಗೆ ಸರ್​ಪ್ರೈಸ್​ ನೀಡಿದೆ ತಂಡ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶುಭಲಕ್ಷ್ಮೀ; ಹುಡುಗ ಯಾರು?

publive-image

ಹೌದು, ನೆಗೆಟಿವ್​ ಆಗಿದ್ದ ವೈಶಾಖ, ತಾನು ಮಾಡಿದ ತಪ್ಪನ್ನ ಅರಿತು ಒಳ್ಳೆಯವಳಾಗಿದ್ದಾಳೆ. ಇತ್ತ ಚಾರು ಮೇಲೆ ಸೇಡು ತೀರಿಸಿಕೊಳ್ಳಲು ಬಂದಿದ್ದ ರುಕ್ಮಿಣಿ ಬಣ್ಣ ಬಯಲಾಗಿದೆ. ಇಲ್ಲಿ ಇದ್ರೆ ಕುಟುಂಬನ ಹಾಳು ಮಾಡ್ತಾಳೆ ಅಂತ ಕೃಷ್ಣ ರುಕ್ಕುನ ಕರ್ಕೊಂಡು ಮನೆ ಬಿಟ್ಟು ಹೋಗಿದ್ದಾನೆ.

publive-image

ಇದೇನು ಆಗುತ್ತಿದೆ ರಾಮಾಚಾರಿ ಧಾರಾವಾಹಿಯಲ್ಲಿ ಅನ್ನೋವಾಗಲೇ ಹೊಸ ಹೀರೋಯಿನ್ ಹಾಗೂ ಹೊಸ ಕುಟುಂಬ ಎಂಟ್ರಿ ಕೊಟ್ಟಿದೆ. ಸ್ಟಾರ್ಟಿಂಗ್​ನಲ್ಲಿದ್ದ ಚಾರು ರೀತಿಯಲ್ಲೇ ಹೊಸ ಪಾತ್ರ ಇದೆ. ಹಠಮಾರಿ ಹುಡುಗಿ, ಬೇಕು ಅಂದ್ರೇ ಬೇಕು ಅಷ್ಟೇ.

publive-image

ಅಪ್ಪ ಮಗಳಿಗೋಸ್ಕರ ಏನ್​ ಬೇಕಾದ್ರು ಮಾಡ್ತಾನೆ. ಇದು ಹೊಸ ಫ್ಯಾಮಿಲಿ ಪರಿಚರ​. ಮತ್ತೊಂದು ಕಡೆ ರಾಮಾಚಾರಿಗೆ ಎರಡು ಸುಳಿ ಇದೆ ಅನ್ನೋ ಹೊಸ ಬಾಂಬ್​ ಸಿಡಿಸಿದ್ದಾರೆ. ಇತ್ತ ಆ ಹಡುಗಿಗೆ ಆಕ್ಸಿಡಂಟ್​ ಆಗಿರುತ್ತೆ, ಆಕೆಯನ್ನು ರಾಮಾಚಾರಿ ಕಾಪಾಡ್ತಾನೆ.

ಇದರ ಅರ್ಥ ಈ ಹೊಸ ಹುಡುಗಿಗೆ ರಾಮಾಚಾರಿ ಮೇಲೆ ಲವ್​ ಆಗುತ್ತಾ? ರಾಮಾಚಾರಿನ ಪಡೆದುಕೊಳ್ಳೋ ಹಠ ಮೂಡುತ್ತಾ? ಚಾರು ಹೇಗೆ ಇದನ್ನೆಲ್ಲಾ ಫೇಸ್​ ಮಾಡ್ತಾಳೆ ಅನ್ನೋದೆ ಹೊಸ ಸ್ಟೋರಿ ಲೈನ್​. ಸದ್ಯ ರೋಚಕ ತಿರುವು ಪಡೆದುಕೊಂಡ ಸೀರಿಯಲ್​ ವೀಕ್ಷಕರು ಸಖತ್ ಥ್ರೀಲ್ ಆಗಿದ್ದಾರೆ. ಮುಂದೆ ಏನೆಲ್ಲಾ ಆಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment