/newsfirstlive-kannada/media/post_attachments/wp-content/uploads/2025/02/ramachari4.jpg)
ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಫೇವರೆಟ್ ಆಗಿ ಉಳಿದುಕೊಂಡಿದೆ ರಾಮಾಚಾರಿ ಸೀರಿಯಲ್. ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಟಿಆರ್ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಧನಂಜಯ-ಧನ್ಯತಾ ಮದುವೆ; ಪ್ರೀತಿಯ ಗೆಳೆಯ ಡಾಲಿಗೆ ವಸಿಷ್ಠ ಸಿಂಹ ಕೊಟ್ಟ ಗಿಫ್ಟ್ ಏನು?
ಇದೇ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ ನಟಿ ಮೌನ ಗುಡ್ಡೆಮನೆ. ಆದರೆ ಇದರ ಮಧ್ಯೆ ಸೀರಿಯಲ್ನಲ್ಲಿ ಯಾರು ಊಹಿಸಲಾರದ ಟ್ವಿಸ್ಟ್ ಒಂದು ಎದುರಾಗಿದೆ. ಫೈಟ್ ಸೀನ್ಗಳು ಹೀರೋಗಳಿಗೆ ಮಾತ್ರ ಸೀಮಿತ ಅನ್ನೋ ಕಾಲ ಯಾವಾಗಲೋ ಹೋಯ್ತು. ಹೀರೋಯಿನ್ಸ್ ನಾವು ಯಾರಿಗೂ ಕಮ್ಮಿ ಇಲ್ಲಂತ ನಿಲ್ಲೋ ಕಾಲ ಇದು. ಸೀರೆಲೆ ನಾಯಾ ನಾಜುಕಾಗಿ ಕಾಣೋ ಚಾರು.. ಸಹನಾ ರೌಡಿಗಳ ಬೆವರಿಳಿಸಿರೋ ಆಕ್ಷನ್ಗೆ ಬರ್ಲಿ ಶಿಳ್ಳೆ ಚಪ್ಪಾಳೆ.
ಆ್ಯಕ್ಷನ್ ದೃಶ್ಯಗಳನ್ನು ಹುಡುಗಿರು ಮಾಡ್ತಾರೋ ಅನ್ನೋ ಮಾತೇ ಇಲ್ಲ. ಮಾಡೇ ಮಾಡ್ತಾರೆ ಅನ್ನೋದಕ್ಕೆ ಅದೇಷ್ಟೋ ಎಕ್ಸಾಂಪಲ್ ಇದೆ. ಸ್ಪೆಷಲಿ ಧಾರಾವಾಹಿಗಳಲ್ಲಿ ಫೈಟ್ ಸೀನ್ಗಳನ್ನು ಕಂಪೋಸ್ ಮಾಡೋದೇ ಒಂದು ಸಹಾಸ. ಅಂತಹದರಲ್ಲಿ ಇತ್ತೀಚೆಗೆ ಹೀರೋಯಿನ್ಗೋಸ್ಕರ ಆಕ್ಷನ್ ಸೀನ್ಗಳನ್ನ ಚಿತ್ರೀಕರಣ ಮಾಡ್ತಿರೋದು ಜಸ್ಟ್ ವಾವ್ ಎನ್ನುವಂತಿದೆ.
ಪುಟ್ಟಕ್ಕನ ಮಕ್ಕಳು ಸಹನಾ ಸಹನೆಗೆ ಮತ್ತೊಂದು ಹೆಸರು ಎನ್ನುವಂತಿರೋ ಪಾತ್ರ. ಇತ್ತೀಚೆಗೆ ಸಹನಾ ರೆಬಲ್ ಆಗಿದ್ದಾಳೆ. ಕ್ಲಾಸ್ಗೂ ಸೈ.. ಮಾಸ್ಗೂ ಜೈ ಅಂತಿದ್ದಾಳೆ. ತನ್ನ ಹಿಂದೆ ಸುತ್ತುತ್ತಿರೋ ಕಾಳಿ ರೌಡಿಗಳ ಕೈಲಿ ಸಿಕ್ಕಿಹಾಕಿಕೊಂಡಿರುತ್ತಾನೆ. ಸಹನೆ ಕಳೆದುಕೊಂಡ ಸಹಾನಾ ಕಳ್ಳರ ಚಳಿ ಬಿಡಿಸಿದ್ದಳು.
ಇನ್ನೂ, ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಅಂಬಿಕಾ ಪಾತ್ರದ ಕೆಲಸ ಸಿಕ್ಕಾಪಟ್ಟೆ ಇದೆ. ಆ್ಯಕ್ಷನ್ ಜೊತೆಗೆ ಮಿರಾಕಲ್ ಮಾಡೋ ಪಾತ್ರ ಇದು. ಈ ಪಾತ್ರ ನೀತಾ ಅಶೋಕ್ ಸಖತ್ ಆಗಿ ನಿಭಾಯಿಸ್ತಿದ್ದಾರೆ. ಫೈಟ್.. ಸಾಹಸ ದೃಶ್ಯಗಳಿಗೆ ಡೊಂಟ್ ಕೇರ್ ಎಂದು ಜಬರ್ದಸ್ತ್ ಆಗಿ ಪಾತ್ರ ಕಟ್ಟಿಕೊಡ್ತಿದ್ದಾರೆ.
ಈಗ ರಾಮಾಚಾರಿ ಚಾರು ಸರದಿ. ಚಾರು ಗೊತ್ತಲ್ಲ. ಮೊದಲೇ ರೌಡಿ ಬೇಬಿ. ರಾಮಾಚಾರಿ, ಕಿಟ್ಟಿನ ಮೀರಿಸುವಷ್ಟು ಸಹಾಸ ಮಾಡೊ ಚಲುವೆ. ನಾದಿನಿ ಶ್ರುತಿ ಬದುಕನ್ನ ಕಾಪಾಡೋಕೆ ಫೀಲ್ಡ್ಗೆ ಇಳಿದ್ದಾಳೆ ಚಾರು. ನಾನು ಗೃಹಿಣಿ.. ಕೆಣಕಿದ್ರೇ ಮಾತ್ರ ಪಕ್ಕಾ ಪೊಗರು ಇಳಿಸೋ ಪರೋಡಿ ಬೇಬಿ ಎಂತಿದ್ದಾಳೆ ಚಾರು. ಚಾರಿ ವೈಫ್ ಅದ್ಮೇಲೆ ಇಷ್ಟು ಆ್ಯಕ್ಷನ್ ಇಲ್ಲ ಅಂದ್ರೇ ಹೇಗೆ ಹೇಳಿ ಅಂತ ಫ್ಯಾನ್ಸ್ ಚಾರುಗೆ ಫಿದಾ ಆಗಿದ್ದಾರೆ. ಒಟ್ಟಿನಲ್ಲಿ ಅಳೋಕೆ ರೆಡಿ, ಅಳಸೋಕೆ ಡಬಲ್ ರೆಡಿ ಅಂತ ಹೀರೋಯನ್ಸ್ ಭರ್ಜರಿಯಾಗಿ ಸಾಹಸ ದೃಶ್ಯಗಳಲ್ಲಿ ಗುದ್ದಾಡಿ ಒದ್ದಾಡಿರೋದು ಮಹಿಳಾ ವೀಕ್ಷಕರ ದಿಲ್ ಕದಿಯೋದರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ