newsfirstkannada.com

ಚನ್ನಗಿರಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವಿನ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಆದಿಲ್‌ನ ಹೊಡೆದು ಸಾಯಿಸಿದ್ದಾ?

Share :

Published May 25, 2024 at 5:46pm

Update May 25, 2024 at 5:48pm

    ನಿನ್ನೆ ಲೋ ಬಿಪಿಯಿಂದ ಆದಿಲ್​ ಸತ್ತಿರಬಹುದು ಎಂದು ಹೇಳಿದ್ದ ತಂದೆ

    ಇಂದು ಲೋ ಬಿಪಿ ಇರುವುದು ನನಗೆ ನನ್ನ ಮಗನಿಗೆ ಇರಲಿಲ್ಲ ಎಂದು ಸ್ಪಷ್ಟನೆ

    ಆದಿಲ್​ಗೆ ಮೂರ್ಚೆ ರೋಗ ಇತ್ತು ಇದು ಲಾಕಪ್ ಡೆತ್ ಅಲ್ಲ- ಸಿಎಂ ಸಿದ್ದರಾಮಯ್ಯ

ದಾವಣಗೆರೆ: ಚನ್ನಗಿರಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆದಿಲ್‌ ಸಾವಿನ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ. ನಿನ್ನೆ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆಯ ಬಳಿ ನಡೆದಿರೋ ಘಟನೆಯ ದೃಶ್ಯಗಳು ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯನ್ನೇ ನೆನಪಿಸಿದೆ. ನಿನ್ನೆವರೆಗೂ ಇದೊಂದು ಅಸಹಜ ಸಾವು ಎಂದಿದ್ದ ಆರೋಪಿ ಆದಿಲ್ ತಂದೆ ಖಲೀಮುಲ್ಲಾ ಅವರು ಇದೀಗ ಯೂಟರ್ನ್‌ ಹೊಡೆದಿದ್ದಾರೆ.

ಆರೋಪಿ ಆದಿಲ್ ತಂದೆ ಖಲೀಮುಲ್ಲಾ ಅವರು ನನ್ನ ಮಗನ ಹೊಡೆದೇ ಸಾಯಿಸಿದ್ದಾರೆ. ನಿನ್ನೆ ನಾನು ಗಾಬರಿಯಲ್ಲಿ ಲೋ ಬಿಪಿಯಿಂದ ಆದಿಲ್​ ಸತ್ತಿರಬಹುದು ಎಂದು ಹೇಳಿದ್ದೆ. ಲೋ ಬಿಪಿ ಇರುವುದು ನನಗೆ. ನನ್ನ ಮಗನಿಗೆ ಲೋ ಬಿಪಿ ಇರಲಿಲ್ಲ. ನನ್ನ ಮಗನ ಸಾವಿನ ಬಗ್ಗೆ ನನಗೆ ಅನುಮಾನವಿದೆ ಎಂಬ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ನಡುರಾತ್ರಿ ಉಡುಪಿಯಲ್ಲಿ ಗರುಡ ಗ್ಯಾಂಗ್ ಭಯಾನಕ ಹೊಡೆದಾಟ; ಯಾರಿವರು? ಅಸಲಿಗೆ ಆಗಿದ್ದೇನು? 

ನಿನ್ನೆ ರಾತ್ರಿಯಿಂದ ನಿದ್ದೆ ಇಲ್ಲದೆ ನನಗೆ ಬಿಪಿ ಜಾಸ್ತಿಯಾಗಿ ನಾನು ಏನೇನೋ ಮಾತನಾಡಿದೆ. ನನಗೆ ಬಿಪಿ ಲೋ ಇದೆ ಅಂತ ಪದೇ ಪದೇ ಹೇಳುವಾಗ ನನ್ನ ಮಗನಿಗೆ ಎಂದು ಹೇಳಿದ್ದೇನೆ ಅಷ್ಟೇ. ನನ್ನ ಮಗನ ಸಾವಿನ ಬಗ್ಗೆ ಹಾಗೂ ಪೊಲೀಸರ ಮೇಲೆ ನನಗೆ ಅನುಮಾನ ಇದೆ. ಆದಿಲ್‌ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಚನ್ನಗಿರಿ ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದರು. ಆದಿಲ್​ಗೆ ಮೂರ್ಚೆ ರೋಗ ಇತ್ತು. ಇದು ಲಾಕಪ್ ಡೆತ್ ಅಲ್ಲ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದಿದ್ದರು. ಎಫ್ಐಆರ್ ಇಲ್ಲದೆ ಆರೋಪಿಯನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಹೀಗಾಗಿ ಡಿವೈಎಸ್​ಪಿ ಮತ್ತು ಇನ್ಸ್​ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚನ್ನಗಿರಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವಿನ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಆದಿಲ್‌ನ ಹೊಡೆದು ಸಾಯಿಸಿದ್ದಾ?

https://newsfirstlive.com/wp-content/uploads/2024/05/DVG-Channagiri-Police-Station.jpg

Load More