Advertisment

ಅಬ್ಬಾ.. ಮಹಾಲಕ್ಷ್ಮಿ ಕೇಸ್​ನಲ್ಲಿ ರೋಚಕ ಟ್ವಿಸ್ಟ್​; 59 ಪೀಸ್, ಪೀಸ್‌ ಮಾಡಿದವನು ಅವನಲ್ಲ.. ಇವನೇ!

author-image
Veena Gangani
Updated On
ಮಹಾಲಕ್ಷ್ಮಿಯನ್ನು ಕ್ರೂರವಾಗಿ ಕೊಲ್ಲೋದಕ್ಕೆ ಇದೇ ಮುಖ್ಯ ಕಾರಣ.. ಕೊನೆಗೂ ಆ ರಹಸ್ಯ ಬಯಲು!
Advertisment
  • ಮಹಾಲಕ್ಷ್ಮಿಯನ್ನ ಕೊಂದು ಪರಾರಿಯಾಗಿರೋ ಆರೋಪಿ ಯಾರು?
  • ಮಹಾಲಕ್ಷ್ಮಿ ಜೊತೆಯಲ್ಲೇ ಕೆಲಸ ಮಾಡುತ್ತಿದ್ದನಂತೆ ಆ ಮಹಾ ಪಾಪಿ
  • ಮಲ್ಲೇಶ್ವರಂನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಾಲಕ್ಷ್ಮಿ

ಬೆಂಗಳೂರು: ಮಹಾಲಕ್ಷ್ಮಿಯ ಭೀಕರ ಹ*ತ್ಯೆ ಕೇಸ್​ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ವೈಯಾಲಿಕಾವಲ್​ ಪೊಲೀಸರು ಓರ್ವ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.  ಹೌದು, ಮಹಾಲಕ್ಷ್ಮಿ ಹೊಟ್ಟೆ ಹಾಗೂ ಎದೆಗೆ ಚಾಕುವಿನಿಂದ ಇರಿದು ಒಟ್ಟು 59 ಪೀಸ್​ಗಳನ್ನಾಗಿ ಮಾಡಿ ಫ್ರಿಡ್ಜ್​ನಲ್ಲಿ ಇಟ್ಟು ಎಸ್ಕೇಪ್​ ಆಗಿದ್ದ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ: ಮಹಾಲಕ್ಷ್ಮಿ ಮನೆ ಗೋಡೆ ಮೇಲೆ ಮೂವರ ಫಿಂಗರ್ ಪ್ರಿಂಟ್​​ ಪತ್ತೆ.. ಹೆಚ್ಚಾಯ್ತು ಅನುಮಾನ

publive-image

ಆದರೆ ಇದರ ಮಧ್ಯೆ ಪೊಲೀಸರು ಮುಕ್ತಿರಂಜನ್ ದಾಸ್ ಎಂಬಾತನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಮುಕ್ತಿಯೇ ಕೊಲೆಯ ಆರೋಪಿ ಆಗಿರಬಹುದಾ ಅಂತ ತನಿಖೆ ನಡೆಸುತ್ತಿದ್ದಾರೆ. ಇನ್ನು, ಮುಕ್ತಿರಂಜನ್ ದಾಸ್ ಅಲಿಯಾಸ್ ಮುಕ್ತಿ ಆಕೆಯ ಜೊತೆಯಲ್ಲೇ ಕೆಲಸ ಮಾಡುತ್ತಿದ್ದನಂತೆ. ಮಹಾಲಕ್ಷ್ಮಿ ಇದ್ದ ಟೀಮ್​ನ ಹೆಡ್ ಆಗಿದ್ದನಂತೆ. ಇದೇ ಮುಕ್ತಿ ತಮ್ಮನ ಜೊತೆಯಲ್ಲಿ ಹೆಬ್ಬಗೋಡಿಯಲ್ಲಿ ವಾಸವಿದ್ದನಂತೆ. ಅದೇ ಸ್ಟೋರ್​ನಲ್ಲಿ ಕೆಲಸ ಮಾಡ್ತಿದ್ದ ಮಹಾಲಕ್ಷ್ಮಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದನಂತೆ.

publive-image

ಸೆ.1ರಂದು ಮುಕ್ತಿ, ಮಹಾಲಕ್ಷ್ಮಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು, ಸೆ.2ರಂದು ಮಹಾಲಕ್ಷ್ಮಿ ಕೆಲಸಕ್ಕೆ ವಾರದ ರಜೆ ಪಡೆದಿದ್ದಳು. ನೆಲಮಂಗಲದ ತಾಯಿ ಮನೆಗೆ ಬರೋದಾಗಿಯೂ ಹೇಳಿದ್ದಳಂತೆ. ಆದ್ರೆ, 2ನೇ ತಾರೀಕು ಕುಟುಂಬಸ್ಥರ ಸಂಪರ್ಕಕ್ಕೂ ಸಿಕ್ಕಿರಲಿಲ್ಲವಂತೆ. ಸದ್ಯ ಮಹಾಲಕ್ಷ್ಮಿಯ ಕೊಲೆಯ ಹಿಂದೆ ಮುಕ್ತಿ ರಂಜನ್ ದಾಸ್ ಕೈವಾಡ ಇದೆಯಾ ಅಂತ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment