/newsfirstlive-kannada/media/post_attachments/wp-content/uploads/2025/07/shrthi.jpg)
ಬೆಂಗಳೂರು: ಕನ್ನಡ ಕಿರುತೆರೆಯ ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದ ನಟಿ ಮೇಲೆ ಖುದ್ದು ಪತಿಯೇ ಹಲ್ಲೆ ಮಾಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಕಿರುತೆರೆ ನಟಿ ಹಾಗೂ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದ ಶ್ರುತಿ ಮೇಲೆ ಪತಿಯೇ ಚಾಕುವಿನಿಂದ ಇರಿದು ಹಲ್ಲೆ ಮಾಡಿರೋ ಘಟನೆ ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್​ನಲ್ಲಿ ನಡೆದಿದೆ. ಮಂಜುಳ ಅಲಿಯಾಸ್​ ಶ್ರುತಿ ಚಾಕು ಇರಿತಕ್ಕೊಳಗಾದ ನಟಿ.
ಇದನ್ನೂ ಓದಿ:ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟೆ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!
ಇನ್ನೂ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮಂಜುಳಾ @ ಶ್ರುತಿ ಪತಿ ಅಮರೇಶ್​ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈಗ ನಟಿ ಮಂಜುಳಾ@ ಶ್ರುತಿ ವಿರುದ್ಧ ಪತಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಹನುಮಂತನಗರ ಪೊಲೀಸರ ವಿಚಾರಣೆ ವೇಳೆ ಪತಿ, 20 ವರ್ಷಗಳ ಹಿಂದೆ ಮದುವೆ ಆಗಿದ್ವಿ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀನಗರದಲ್ಲಿ ಮನೆಯನ್ನ ಲೀಸ್​ಗೆ ಹಾಕಿಕೊಂಡು ವಾಸಮಾಡ್ತಿದ್ವಿ. ಇಬ್ಬರು ಹೆಣ್ಣು ಮಕ್ಕಳಿಗೆ ಶೃತಿ ತಾಯಿ ಪ್ರೀತಿಯನ್ನ ಕೊಟ್ಟಿಲ್ಲ. ಮನೆ ಜವಾಬ್ದಾರಿಯನ್ನೆಲ್ಲ ನಾನೇ ನೋಡಿಕೊಳ್ತಿದ್ದೆ. ಶೂಟಿಂಗ್ ನೆಪದಲ್ಲಿ ಸರಿಯಾಗಿ ಮನೆಗೆ ಬಾರದೇ ಪಾರ್ಟಿ ಪಬ್ ಅಂತ ಸುತ್ತಾಡ್ತಿದ್ಲು. ಯಾರಿಗೂ ಹೇಳದೇ 15 ದಿನ ಪ್ರಯಾಗ್ ರಾಜ್​ಗೆ ಹೋಗಿದ್ಲು. ಇದೇ ವಿಚಾರಕ್ಕೆ ಈ ಹಿಂದೆನೂ ಗಲಾಟೆ ಆಗಿತ್ತು. ಗಂಡ ಮಕ್ಕಳಿದ್ರು ಅಣ್ಣನ ಜೊತೆ ಇರ್ತೀನಿ ಎಂದು ಗಲಾಟೆ ಮಾಡ್ತಿದ್ಲು. ಭೋಗ್ಯಕ್ಕಿದ್ದ ಮನೆಯನ್ನ ಖಾಲಿ ಮಾಡೋಣ ಅಂತಿದ್ಲು. ಇದೇ ವಿಚಾರಕ್ಕೆ ಜಗಳ ಆಯ್ತು ಎಂದು ಪತಿ ಅಮರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ