/newsfirstlive-kannada/media/post_attachments/wp-content/uploads/2025/06/gold-suresh2.jpg)
ರಾಯಚೂರು: ಕೇಬಲ್ ಚಾನೆಲ್ ಸೆಟಪ್ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬ ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ಮೇಲೆ ಆರೋಪ ಮಾಡಿದ್ದಾರೆ. ಅಲ್ಲದೇ ಗೋಲ್ಡ್ ಸುರೇಶ್ ವಿರುದ್ಧ ದೂರು ದಾಖಲು ಮಾಡೋದಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ‘ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’.. ವಂಚನೆ ಆರೋಪದ ಬೆನ್ನಲ್ಲೇ ಗೋಲ್ಡ್ ಸುರೇಶ್ ಗರಂ
ಹೌದು, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮೈನುದ್ದಿನ್ ಎಂಬ ಯುವಕನ ಜೊತೆ ಗೋಲ್ಡ್ ಸುರೇಶ್ ಬರೋಬ್ಬರಿ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ. ಸ್ಟುಡಿಯೋ ನಿರ್ಮಾಣ ಹಾಗೂ ಉಪಕರಣಗಳ ಖರೀದಿಗೆ ಸಂಬಂಧಿಸಿ 2017ರಲ್ಲೇ ಗೋಲ್ಡ್ ಸುರೇಶ್ ಜೊತೆ 14 ಲಕ್ಷ ರೂ.ಗೆ ಒಪ್ಪಂದ (ಅಗ್ರಿಮೆಂಟ್) ಮಾಡಲಾಗಿತ್ತಂತೆ. ಇದರ ಭಾಗವಾಗಿ ಪ್ರಾರಂಭದಲ್ಲಿ 4 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ನಂತರ ಹಂತ ಹಂತವಾಗಿ 7 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮೈನುದ್ದಿನ್ ಆರೋಪಿಸಿದ್ದಾರೆ. ಆದರೆ, ಕೆಲಸವನ್ನು ಅರ್ಧಕ್ಕೆ ಬಿಟ್ಟು, ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ ಅಂತಾ ಕಿಡಿಕಾರಿದ್ದಾರೆ.
ಇನ್ನೂ, ಈ ಬಗ್ಗೆ ನಿನ್ನೆ ಗೋಲ್ಡ್ ಸುರೇಶ್ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದರು. ಆ ವೇಳೆ 2017ರಲ್ಲಿಯೇ ನಾನು ಆ ವ್ಯಕ್ತಿಗೆ ಪಡೆದ ಹಣ ವಾಪಸ್ ನೀಡಿದ್ದೇನೆ. ಈಗ ನನ್ನ ಬಳಿ ಹಣವಿದೆ ಅನ್ನೋ ಕಾರಣಕ್ಕೆ ಆರೋಪ ಮಾಡಿದ್ದಾನೆ. ನಾನು ಉದ್ಯಮಿಯಾಗಿ ಬೆಳೆದಿರುವ ಕಾರಣ ವಿನಾಕಾರಣ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ಸಾಲವನ್ನೆಲ್ಲಾ ನಾನು ಮರು ಪಾವತಿ ಮಾಡಿದ್ದೇನೆ. ಯಾವುದೇ ರೀತಿಯ ಬಾಕಿ ಹಣವನ್ನ ನಾನು ಉಳಿಸಿಕೊಂಡಿಲ್ಲ. ಸುಳ್ಳು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದರು.
ಇದನ್ನೂ ಓದಿ: ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪ.. ಏನದು?
ಇದೀಗ ಗೋಲ್ಡ್ ಸುರೇಶ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಮೈನುದ್ದೀನ್ ಹೇಳುತ್ತಿದ್ದಾರೆ. ನಮ್ಮಿಂದ ಪಡೆದ 7,50,000ದಲ್ಲಿ ಕೇವಲ 2,50,000 ಹಣ ಕೊಟ್ಟಿದ್ದಾರೆ. ಉಳಿದ ಹಣ ಕೇಳಿದ್ರೆ ಯಾವ ಹಣವೂ ಕೊಡೋದಿಲ್ಲ ಅತ್ತಿದ್ದಾರೆ. ಫರ್ನಿಚರ್ಗಾಗಿ ಖರ್ಚು ಮಾಡಿದ್ದೇನೆ ಎಂದು ನಿನ್ನೆ ಹೇಳಿದ್ದಾರೆ. ಆದ್ರೆ, ಇನ್ನುಳಿದ ಐದು ಲಕ್ಷದ ಕೇಳಿದ್ರೆ ಫರ್ನಿಚರ್ ಮಾಡಿದ್ದೀವಿ ಅಂತ ಹೇಳ್ತಿದ್ದಾರೆ. ಆದ್ರೆ ಐದು ಲಕ್ಷದ ಕೆಲಸ ಗೋಲ್ಡ್ ಸುರೇಶ್ ಮಾಡಿಲ್ಲ ಎಂದು ಮೈನುದ್ದೀನ್ ದೂರು ನೀಡಲು ಮುಂದಾಗಿದ್ದಾರೆ. ಒಟ್ಟು 17 ಲಕ್ಷಕ್ಕೆ ಸೆಟಪ್ ಮಾಡಿಕೊಡುವುದಾಗಿ ಹೇಳಿ ಏಳೂವರೆ ಲಕ್ಷ ಹಣ ಪಡೆದಿದ್ದಾರೆ. ಮುಂಗಡವಾಗಿ 7,50,000 ಪಡೆದು ಅರೆಬರೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಲ್ಲದೇ ಗೋಲ್ಡ್ ಸುರೇಶ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ