/newsfirstlive-kannada/media/post_attachments/wp-content/uploads/2025/07/nimisha.jpg)
ಇನ್ನೂ 6 ದಿನದಲ್ಲಿ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಆಗಲಿದೆ. ಆದ್ರೆ ಕೊನೆ ಕ್ಷಣದಲ್ಲಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಯೆಮನ್ ದೇಶದಲ್ಲಿ ನಿಮಿಷಾ ಪ್ರಿಯರನ್ನು ಗಲ್ಲಿಗೇರಿಸುವುದರ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ನಿಮಿಷಾ ಪ್ರಿಯಾ ಪರವಾಗಿ ವಕೀಲ ಸುಭಾಶ್ ಚಂದ್ರನ್ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯೆಮನ್ ಸರ್ಕಾರ ಜುಲೈ 16ರಂದು ನಿಮಿಷಾ ಪ್ರಿಯರನ್ನು ಗಲ್ಲಿಗೇರಿಸಲು ನಿರ್ಧರಿಸಿದೆ. ಈ ಕೇಸ್ನ ಎಮರ್ಜೆನ್ಸಿಯ ಕಾರಣದಿಂದ ತುರ್ತಾಗಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ:ಹೆಣ್ಮಕ್ಕಳೇ ಹುಷಾರ್, ಬೆಂಗಳೂರಲ್ಲಿ ಇಂಥವರೂ ಇರುತ್ತಾರೆ ಎಚ್ಚರ..! ಅಸಲಿಗೆ ಈತ ಮಾಡಿದ್ದೇನು..?
ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ರಾಜತಾಂತ್ರಿಕ ಮಾರ್ಗಗಳ ಮೂಲಕ ಯತ್ನಿಸಬೇಕು. ಯೆಮನ್ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಸಂಧಾನ ಮಾತುಕತೆ ನಡೆಸಬೇಕು ಅಂತ ಮನವಿ ಮಾಡಿಕೊಳ್ಳಲಾಗಿದೆ. ಇನ್ನೂ ಅರ್ಜಿದಾರರ ವಾದ ಅಲಿಸಿದ ಬಳಿಕ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ. ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಆಫ್ ಇಂಡಿಯಾಗೆ ನೋಟೀಸ್ ನೀಡಿದೆ. ಈ ಕುರಿತು ಸುಪ್ರೀಂಕೋರ್ಟ್ ಸೋಮವಾರ ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.
ಏನಿದು ಪ್ರಕರಣ..?
ಅದು 2017ನೇ ವರ್ಷ. ಕೇರಳದ ಪಾಲಕ್ಡಾಡ್ ಜಿಲ್ಲೆಯ ನರ್ಸ್ ನಿಮಿಷಾ ಪ್ರಿಯಾ ಭಾರತಕ್ಕೆ ಬರ್ಬೇಕು ಅಂತಾ ಪಾಸ್‌ಪೋರ್ಟ್ ಹಿಟ್ಕೊಂಡ್ ಯೆಮೆನ್ ದೇಶದ ಏರ್‌ಪೋರ್ಟ್‌ಗೆ ಬರುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲಿಗೆ ಎಂಟ್ರಿಕೊಟ್ಟಿದ್ದ ಅಲ್ಲಿನ ಪೊಲೀಸರು ಅರೆಸ್ಟ್ ಮಾಡ್ಕೊಂಡ್ ಸ್ಟೇಷನ್‌ಗೆ ಕರೆದುಕೊಂಡು ಹೋಗ್ತಾರೆ. ಕಾರಣ, ಮರ್ಡರ್ ಕೇಸ್. ಅದು ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆ ಕೇಸ್. ಪ್ರಕರಣದಲ್ಲಿ ನಿಮಿಷಾ ಪ್ರಿಯಾ 2017 ರಲ್ಲಿಯೇ ಜೈಲು ಸೇರಿದ್ರು. ಅಲ್ಲಿಯ ಕೋರ್ಟ್‌ನಲ್ಲಿ ದೀರ್ಘಾವಧಿ ವಿಚಾರಣೆಯೂ ನಡೀತು. 2018ರಲ್ಲಿ ಕೊಲೆ ಅಪರಾಧಿ ಎಂದು ತೀರ್ಪು ನೀಡಲಾಗಿತ್ತು. ಅಂತಿವಾಗಿ 2023ರಲ್ಲಿ ಅಲ್ಲಿಯ ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆ ಪ್ರಕಟಿಸಿ ಬಿಟ್ತು. ಯೆಮೆನ್ ಪ್ರಜೆಯೊಬ್ಬರನ್ನು ಬೇರೆ ದೇಶದ ವ್ಯಕ್ತಿ ಹತ್ಯೆ ಮಾಡಿದ್ರೆ ಅಲ್ಲಿಯ ಕೋರ್ಟ್ ಮರಣದಂಡನೆ ನೀಡುತ್ತದೆ.
ಈ ಪ್ರಕರಣದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯಲು ಇದನ್ನೂ ಓದಿ: ಯೆಮೆನ್ನಲ್ಲಿ ಕೇರಳದ ಮಗಳಿಗೆ ಗಲ್ಲು.. ಕರುಳ ಕುಡಿ ಉಳಿಸಲು ತಾಯಿಂದ ರಕ್ತ ಹಣಕ್ಕಾಗಿ ಪರದಾಟ ಸಂಕಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ