/newsfirstlive-kannada/media/post_attachments/wp-content/uploads/2025/06/INDORE.jpg)
ಇಂದೋರ್ ಉದ್ಯಮಿ ರಾಜಾ ರಘುವಂಶಿ ಪ್ರಕರಣದಲ್ಲಿ ಆಘಾತಕಾರಿ ಸಂಗತಿಗಳು ಬಹಿರಂಗವಾಗುತ್ತಿವೆ. ಯಾವ ಌಕ್ಷನ್ ಸಿನಿಮಾಗೂ ಕಮ್ಮಿ ಇಲ್ಲ ರೀತಿ ಇದೆ.. ಆರೋಪಗಳ ಪ್ಲಾನಿಂಗ್.. ಆರೋಪಿಗಳು ನೀಡ್ತಿರೋ ಸ್ಫೊಟಕ ಹೇಳಿಕೆಗಳಿಗೆ ತನಿಖಾಧಿಕಾರಿಗಳು ಸುಸ್ತಾಗಿದ್ದಾರೆ.
ಟ್ರಕ್ಕಿಂಗ್.. ಪಾರ್ಕಿಂಗ್.. ಕೊಲೆಯಾದ ಜಾಗದಲ್ಲಿ ತನಿಖೆ
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ರೋಚಕ ತನಿಖೆ ಮುಂದುವರೆದಿದೆ. ಹತ್ಯೆ ಮಾಡುವಾಗ ಆರೋಪಿಗಳು ಇಟ್ಟ ಹೆಜ್ಜೆಗಳನ್ನ ರೀಕ್ರಿಯೆಟ್ ಮಾಡೋ ಪ್ರಕ್ರಿಯೆಯನ್ನ ಎಸ್ಐಟಿ ಅಧಿಕಾರಿಗಳು ಮಾಡಿದ್ದಾರೆ. ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣವನ್ನ ಮರುಸೃಷ್ಟಿ ಮಾಡಲು ನಿನ್ನೆ ಆರೋಪಿಗಳಾದ ಸೋನಮ್ ಮತ್ತು ಮೂವರನ್ನ ಘಟನಾ ಸ್ಥಳಕ್ಕೆ ಕರೆತಂದು ಮಹಜರು ಮಾಡಿ. ಕೊಲೆ ಸೀನ್ ರೀ-ಕ್ರಿಯೆಟ್ ಮಾಡಿದ್ದಾರೆ.
ಇದನ್ನೂ ಓದಿ: ಲವರ್ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?
ರಘುವಂಶಿಗೆ ಬಳಸಿದ್ದು ಒಂದಲ್ಲ.. ಎರಡು ಆಯುಧ
ಆರೋಪಿಗಳು ದಾಳಿಯ ಸಮಯದಲ್ಲಿ ಶಸ್ತ್ರಾಸ್ತ್ರಗಳನ್ನ ಹೇಗೆ ಬಳಸಿದ್ರು ಎಂಬುದನ್ನ ಮರು ಪ್ರದರ್ಶಿಸಿದ್ದಾರೆ. ಕೆಲವು ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ಒಂದು ಮಚ್ಚು ಸಿಕ್ಕಿದ್ದು, ಮತ್ತೊಂದು ಮಚ್ಚನ್ನ ಇನ್ನೂ ಪತ್ತೆಹಚ್ಚಲಾಗಿಲ್ಲ.
ರಘುವಂಶಿಯ ಹಿಂದೆ ನಿಂತಿದ್ದ ಪತ್ನಿ ಸೋನಮ್ ಆರೋಪಿ ವಿಶಾಲ್ಗೆ ಸಿಗ್ನಲ್ ಕೊಟ್ಟಿದ್ದು, ಕಣ್ಣಿನಲ್ಲೇ ಸನ್ನೆ ಮಾಡಿದ್ಲು. ಸೋನಮ್ ಸಿಗ್ನಲ್ ಕೊಡ್ತಿದ್ದ ಹಾಗೆ ಏಕಾಏಕಿ ವಿಶಾಲ್ ಹಲ್ಲೆ ಮಾಡಿದ್ದ. ನಂತರ ಆನಂದ್ ಎರಡನೇ ಏಟು ಹೊಡೆದ್ದಾನೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಆರ್ಭಟ.. ನದಿ ಪಾತ್ರದ ಜನರಿಗೆ ಎಚ್ಚರ ಎಚ್ಚರ..
ಕೊನೆಯ ಹೊಡೆತವನ್ನ ಆಕಾಶ್ನದ್ದಾಗಿದೆ. ಇಷ್ಟೆಲ್ಲಾ ಹಲ್ಲೆಗಳು ನಡೆದ ವೇಳೆ ಪತ್ನಿ ಸೋನಮ್ ಅಲ್ಲೇ ಇದ್ದು ನೋಡ್ತಾ ನಿಂತಿದ್ದಳಂತೆ.. ರಘುವಂಶಿ ಪ್ರಾಣ ಹೋದ ಬಳಿಕ ಹಂತಕರು ದೇಹವನ್ನು ಎತ್ತಿ ಕಮರಿಗೆ ಎಸೆದು ಅಲ್ಲಿಂದ ಮನೆಗಳಿಗೆ ಬಂದಿದ್ದಾರೆ.
ಸ್ಥಳ ಮಹಜರು ವೇಳೆ ಆರೋಪಿಗಳು ನೀಡಿದ ಹೇಳಿಕೆ.. ಸಂಚಿನ ವಿವರಣೆ.. ಸ್ಪಾಟ್ನಲ್ಲಿ ಸಿಕ್ಕ ಸಾಕ್ಷ್ಯಗಳು.. ಎಲ್ಲವನ್ನ ಸಂಗ್ರಹಿಸಿರೋ ಅಧಿಕಾರಿಗೆ ತ್ರಿಕೋನ ಪ್ರೇಮಕಥನದ ಅನುಮಾನವೂ ಮೂಡಿದೆ ಇಂದು ಆರೋಪಿಗಳ ಕಸ್ಟಡಿ ಟೈಂ ಕೂಡ ಮುಗಿಯಲಿದೆ. ಮತ್ತಷ್ಟು ತನಿಖೆ ಮಾಡುವುದಕ್ಕೆ ಎಸ್ಐಟಿ ಅಧಿಕಾರಿಗಳು ಮತ್ತೆ ಅಪ್ಲಿಕೇಷನ್ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿ: ಶರಣಾಗಲು ಇರಾನ್ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ