ಕೊಳೆತು ನಾರುತ್ತಿದ್ದ ಶ್ವಾನದ ಜತೆ ವಾಸವಿದ್ದ ಕೇಸ್​ಗೆ ಟ್ವಿಸ್ಟ್.. ಸತ್ತ ಮೇಲು ಬದುಕಲಿ ಎಂದು ಪೂಜೆ ಮಾಡಿದ್ಳಂತೆ ಮಹಿಳೆ!

author-image
Veena Gangani
Updated On
ಕೊಳೆತು ನಾರುತ್ತಿದ್ದ ಶ್ವಾನದ ಜತೆ ವಾಸವಿದ್ದ ಕೇಸ್​ಗೆ ಟ್ವಿಸ್ಟ್.. ಸತ್ತ ಮೇಲು ಬದುಕಲಿ ಎಂದು ಪೂಜೆ ಮಾಡಿದ್ಳಂತೆ ಮಹಿಳೆ!
Advertisment
  • ಮಹದೇವಪುರ ಶ್ವಾನ ಹತ್ಯೆ ಕೇಸ್​ಗೆ ಮತ್ತೊಂದು ಟ್ವಿಸ್ಟ್​
  • ಜೀವಬಿಟ್ಟು ಶ್ವಾನ ಬದುಕಲಿ ಅಂತ ಮಹಿಳೆ ಪೂಜೆ
  • ಶ್ವಾನದ ಜೊತೆ ಅನ್ಯೋನ್ಯವಾಗಿದ್ದಳಂತೆ ಈ ಮಹಿಳೆ

ಬೆಂಗಳೂರು: ಮಹದೇವಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಮಹಿಳೆಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಜೀವ ಬಿಟ್ಟಿರೋ ನಾಯಿ ಮೃತದೇಹದ ಜೊತೆ ವಾಸ ಮಾಡಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕೊಳೆತು ನಾರುತ್ತಿದ್ದ ನಾಯಿ ಜತೆ ಮಹಿಳೆ ವಾಸ.. ಪ್ರಾಣಿ ಪ್ರಿಯರಿಗೆ ನಡುಕ ಹುಟ್ಟಿಸುವ ಸ್ಟೋರಿ ಇದು!

publive-image

ಇದೀಗ ಈ ಕೇಸ್​ಗೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಶ್ವಾನ ಜೀವಬಿಟ್ಟು ನಾಲ್ಕು ದಿನ ಕಳೆದರು ಬದುಕಲಿ ಎಂದು ಪೂಜೆ ಮಾಡಿದ್ದಳಂತೆ ಮಹಿಳೆ. ಅದರ ಮುಂದೆ ಶಿವನ ಫೋಟೋ ಇಟ್ಟು ಶ್ವಾನ ಬದುಕಲಿ ಎಂದು ಪೂಜೆ ಮಾಡಿದ್ದಳಂತೆ.

publive-image

ಪ.ಬಂಗಾಳ ಮೂಲದ ತ್ರಿಪರ್ಣಾ 2021ರಲ್ಲಿ ಖಾಸಗಿ ಕಂಪನಿ ಶುರುಮಾಡಿದ್ರು. ಆದ್ರೆ ಕಂಪನಿಯಲ್ಲಿ ‌ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ರು‌. ಬಿಸ್ನೆಸ್ ಲಾಸ್ ನಂತರ ಮಾನಸಿಕವಾಗಿ ನೊಂದು ಫ್ಲ್ಯಾಟ್‌ನಲ್ಲಿ ಶ್ವಾನದೊಂದಿಗೆ ವಾಸವಿದ್ರು. ಶ್ವಾನದ ಜೊತೆ ಅನ್ಯೋನ್ಯವಾಗಿ ಬೆರೆತು ಜನಸಾಮಾನ್ಯರ ಜೊತೆ ಅಷ್ಟಾಗಿ ಸೇರುತ್ತಿರಲಿಲ್ಲ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಶ್ವಾನ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿತ್ತು. ಹೀಗಾಗಿ ತ್ರಿಪರ್ಣಾ‌‌ ಶ್ವಾನ ಬದುಕಲಿ ಎಂದು ದೇವರ ಫೋಟೋ ಇಟ್ಟು ಪೂಜೆ ಮಾಡಿದ್ದಳಂತೆ. ಶ್ವಾನ ಸತ್ತ ನಂತರ ಕೊಳೆತು ಇಡೀ ಅಪಾರ್ಟ್ಮೆಂಟ್​ಗೆ ದರ್ವಾಸನೆ ಹರಡಿತ್ತು. ನಂತರ ಪಕ್ಕದ ಫ್ಲ್ಯಾಟ್​ನವರು ಬಿಬಿಎಂಪಿ ಮತ್ತು ಪೊಲೀಸರಿಗೆ‌ ದೂರು ನೀಡಿದ್ದರು. ಹೀಗಾಗಿ ಸ್ಥಳಕ್ಕೆ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಬಂದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment