ನದಿಗೆ ತಳ್ಳಿದ ಕೇಸ್​​​ಗೆ ಮತ್ತೊಂದು ಟ್ವಿಸ್ಟ್.. ಗದ್ದೆಮ್ಮಳ ಕಾಲುಂಗುರ, ತಾಳಿ ವಾಪಸ್ ಪಡೆದ ತಾತಪ್ಪ ಕುಟುಂಬ..!

author-image
Veena Gangani
Updated On
ನದಿಗೆ ತಳ್ಳಿದ ಕೇಸ್​​​ಗೆ ಮತ್ತೊಂದು ಟ್ವಿಸ್ಟ್.. ಗದ್ದೆಮ್ಮಳ ಕಾಲುಂಗುರ, ತಾಳಿ ವಾಪಸ್ ಪಡೆದ ತಾತಪ್ಪ ಕುಟುಂಬ..!
Advertisment
  • ಬ್ಯಾರೇಜ್​ನ ತಡೆಗೋಡೆ ದಾಟಿ ನಿಂತಿದ್ದ ತಾತಪ್ಪನ ತಳ್ಳಿದ ಪ್ರಕರಣ
  • ಮದುವೆಯಾದ ಕೆಲವೇ ತಿಂಗಳಲ್ಲಿ ಮುರಿದು ಬಿದ್ದ ಇಬ್ಬರ ದಾಂಪತ್ಯ
  • ಬಾಂಡ್ ಬರೆಸಿಕೊಂಡು ಇಬ್ಬರನ್ನು ದೂರ ಮಾಡುತ್ತಿರೋ ಕುಟುಂಬ

ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ ಬಳಿ ಹೆಂಡತಿಯೇ ಗಂಡನನ್ನು ನದಿಗೆ ತಳ್ಳಿದ ಆರೋಪಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಇದೀಗ ಮದುವೆಯಾದ ಕೆಲವೇ ತಿಂಗಳಲ್ಲಿ ಈ ಇಬ್ಬರ ದಾಂಪತ್ಯ ಮುರಿದು ಬಿದ್ದಿದೆ. ಹೌದು, 18-04-2025ರಂದು ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿತ್ತು.

publive-image

ಆದ್ರೆ, ಇದೀಗ ಈ ಜೋಡಿ ದೂರ ಆಗಿದೆ. ಹೀಗಾಗಿ ಪತಿ ತಾತಪ್ಪ ಹಾಗೂ ಪತ್ನಿ ಗದ್ದೆಮ್ಮ ಎರಡೂ ಕುಟುಂಬಸ್ಥರು ಮದುವೆಗೆ ನೀಡಿದ್ದ ಉಡುಗೊರೆ ವಾಪಾಸ್ ನೀಡಲಾಗಿದೆ. ಮದುವೆ ಸಮಯದಲ್ಲಿ ವಧುವಿಗೆ ನೀಡಲಾಗಿದ್ದ ತಾಳಿ ಹಾಗೂ ಕಾಲುಂಗುರವನ್ನು ತಾತಪ್ಪ ವಾಪಸ್​ ಪಡೆದುಕೊಂಡಿದ್ದಾರೆ. ತಾತಪ್ಪ ಕುಟುಂಬಸ್ಥರು ಯಾದಗಿರಿಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮಕ್ಕೆ ತೆರಳಿದ್ದ ಕಾರಣದಿಂದ ಗ್ರಾಮಸ್ಥರು, ಹಿರಿಯರ ಸಮ್ಮುಖದಲ್ಲಿ ಇತ್ಯರ್ಥವಾಗಿದೆ. ಮದುವೆಯಲ್ಲಿ ಹೆಣ್ಣಿಗೆ ನೀಡಲಾಗಿದ್ದ ಸಾಮಗ್ರಿ, ಹಾಗೂ ಗಂಡಿಗೆ ಹೆಣ್ಣಿನ ಮನೆಯವರು ನೀಡಿದ್ದ ಸಾಮಾನುಗಳು ವಾಪಾಸ್ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!

ಸದ್ಯ ಪತಿಯಿಂದ ಪತ್ನಿ ವಿಚ್ಛೇದನಕ್ಕಾಗಿ ಎರಡು ಕುಟುಂಬದವರಿಂದ ಸಹಿ ಮಾಡಿಸಿಕೊಳ್ಳಲಾಗಿದೆ. ಎರಡು ಕುಟುಂಬಸ್ಥರು ಮಾತುಕತೆ ಮೂಲಕ ಸಂಬಂಧ ಮುರಿದಿಕೊಂಡಿದ್ದಾರೆ. ಅಲ್ಲದೇ ತಾತಪ್ಪ ರಾಯಚೂರು ಎಸ್.ಪಿ ಪುಟ್ಟಮಾದಯ್ಯ ಅವರನ್ನು ಭೇಟಿ ಮಾಡಿ ಬಾಂಡ್ ಪೇಪರ್ ತೋರಿಸಿದ್ದಾರೆ. ಎರಡು ಕುಟುಂಬಸ್ಥರಿಂದ ಬಾಂಡ್ ಮೇಲೆ ಬರೆಸಿಕೊಂಡು ಇಬ್ಬರನ್ನು ಪರಸ್ಪರ ದೂರ ಮಾಡುತ್ತಿದ್ದಾರೆ.

ಈ ಆರೋಪದ ಬಗ್ಗೆ ಪತ್ನಿ ಗದ್ದಮ್ಮ ಹೇಳಿದ್ದೇನು..?

ಸ್ವಾಮಿ ನಾನು ತಳ್ಳಿಲ್ಲ. ಅದೇಗೆ ಬಿದ್ದಿದಾದ್ನೋ ಗೊತ್ತಿಲ್ಲ. ತಾನೇ ಬಿದ್ದು ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾನೆ. ಅಲ್ಲಮ್ಮ ಗಂಡ ಹೆಂಡ್ತಿ ಇಬ್ಬರು ಊರಿಗೆ ಹೊರಟವು ಆ ಬ್ರಿಡ್ಜ್ ಮೇಲೆ ನಿಂತಿದ್ಯಾಕೆ ಅಂದ್ರೆ.. ಸಾರ್​ ಪ್ಲೇಸ್ ಚೆನ್ನಾಗಿತ್ತು. ಸ್ವಲ್ಪ ಹೊತ್ತು ನಿಂತು, ನೋಡಿ ಹೋಗೋಣ ಅಂದುಕೊಂಡಿದ್ವಿ.. ಆದ್ರೆ, ಫೋಟೋ ತೆಗಿ ಅಂತೇಳಿ ನಿಂತವನು ಕಣ್ಣು ಮುಚ್ಚಿ ಬಿಡುವುದರಲ್ಲಿ ಬಿದ್ದೋಗಿದ್ದ. ಗಂಡ ಬಿದ್ದಿದ್ದು ನೋಡಿ ನಾನು ನದಿಗೆ ಹಾರೋಕೆ ಹೋಗಿದ್ದೆ. ಆದ್ರೆ ಅಲ್ಲಿ ಕಾಪಾಡೋಕೆ ಬಂದವರು ನನ್ನ ಬಿಡ್ಲಿಲ್ಲ. ಆಮೇಲೆ  ನನ್ನ ಗಂಡ ಹಂಗೆಲ್ಲ ಆರೋಪ ಮಾಡಿದ್ದಾನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment