ರಿಕ್ಕಿ ರೈ ಪ್ರಕರಣಕ್ಕೆ ಟ್ವಿಸ್ಟ್.. ಕಾರು ಚಾಲಕ ನೀಡಿದ ದೂರಿನಲ್ಲಿ ಏನಿದೆ..?

author-image
Veena Gangani
Updated On
ಮಲತಾಯಿ ಮಸಲತ್ತು? ಮುತ್ತಪ್ಪ ರೈ 2ನೇ ಪತ್ನಿ ಮೇಲೆ ಅನುಮಾನ ಯಾಕೆ? ಅಸಲಿಗೆ ಆಗಿದ್ದೇನು?
Advertisment
  • ಕಳೆದ 2 ದಿನಗಳ ಹಿಂದಷ್ಟೇ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ರಿಕ್ಕಿ ರೈ
  • ಬಿಡದಿಯ ಮುತ್ತಪ್ಪ ರೈ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದ ಪುತ್ರ ರಿಕ್ಕಿ ರೈ
  • ಶೂಟೌಟ್ ಮಾಡಿರೋ ಸ್ಥಳದಲ್ಲಿ ಸಿಮ್ ಇಲ್ಲದ ಕೀಪ್ಯಾಡ್ ಫೋನ್​ ಪತ್ತೆ

ಬೆಂಗಳೂರು: ಕಳೆದ 2 ದಿನಗಳ ಹಿಂದಷ್ಟೇ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಆಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸಕ್ಕೆ ಆಗಮಿಸಿದ್ದ ರಿಕ್ಕಿ  ಮೇಲೆ ಮಧ್ಯರಾತ್ರಿ 12.50ರ ಸುಮಾರಿಗೆ ಆಗಂತುಕರು ಫೈರ್ ಮಾಡಿದ್ದಾರೆ. ಸದ್ಯ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಭಯಾನಕ ಗುಂಡಿನ ದಾಳಿ

publive-image

ಇದೀಗ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಕೇಸ್​ಗೆ ಟ್ವಿಸ್ಟ್​ವೊಂದು ಎದುರಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜ್ ದೂರಿನನ್ವಯ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅದು ಕೂಡ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ, ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

publive-image

ಬಸವರಾಜು ಸುಮಾರು ನಾಲ್ಕೈದು ವರ್ಷಗಳಿಂದ ರಿಕ್ಕಿ ರೈ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬಸವರಾಜು ಅವರ ಬಳಿ ಹಲವಾರು ಭಾರೀ ನನಗೆ ಜೀವ ಬೆದರಿಕೆ ಇದೆ ಅಂತ ರಿಕ್ಕಿ ರೈ ತಿಳಿಸಿದ್ದರಂತೆ. ಬೆಂಗಳೂರಿನ ಸದಾಶಿವನಗರ ಹಾಗೂ ಬಿಡದಿಯ ಫಾರಂ ಹೌಸ್​ನಲ್ಲಿ ರಿಕ್ಕಿ ಅವರು ವಾಸವಾಗಿದ್ದರು. ರಿಕ್ಕಿ ರೈ ಅವರ ಬೆಂಗಳೂರಿನ ನಿವಾಸದಿಂದ 6 ಗಂಟೆಗೆ ಬಿಟ್ಟು 7.30ರ ಸಮಯಲ್ಲಿ ಬಿಡದಿಯ ಮನೆಗೆ ಬಂದಿದ್ರು. ಬಳಿಕ ವಿಶ್ರಾಂತಿ ಪಡೆದಿದ್ದು, ರಾತ್ರಿ 11 ಗಂಟೆಗೆ ಬೆಂಗಳೂರಿನ ನಿವಾಸಕ್ಕೆ ಹೊರಬೇಕು ಅಂಥ ರಿಕ್ಕಿ ತಿಳಿದ್ದರಂತೆ.

ಅದರಂತೆ ಕಪ್ಪು ಬಣ್ಣದ ಕೆಎ 53 ಎಂಸಿ 7128 ನಂಬರ್​ನ ಫಾರ್ಚೂನರ್ ಕಾರಿನಲ್ಲಿ ರಿಕ್ಕಿ ರೈ, ಡ್ರೈವರ್ ಬಸವರಾಜ್ ಹಾಗೂ ಬಾಡಿ ಗಾರ್ ರಾಜ್ ಪಾಲ್ ಹೊರಟಿದ್ದರಂತೆ. ಮನೆಯಿಂದ ಸ್ವಲ್ಪ ದೂರ ಹೋದಾಗ ಟಫ್ ಅಂಥ ಶಬ್ಧ ಬಂದಿದೆ. ಸ್ವಲ್ಪ ಮುಂದೆ ಹೋಗಿ ಟಯರ್ ಎಲ್ಲಾ ಪರಿಶೀಲನೆ ಮಾಡಿದ್ವಿ, ಎಲ್ಲವೂ ಸರಿಯಾಗಿತ್ತು. ಬಳಿಕ ರೇಲ್ವೇ ಕ್ರಾಸ್​ವರೆಗೂ ಹೋಗ್ತಿದ್ದ ವೇಳೆ ಪರ್ಸ್ ಮರೆತಿರೋದಾಗಿ ರಿಕ್ಕಿ ಹೇಳಿದ್ರು. ಮತ್ತೇ ಬಿಡದಿಯ ಮನೆಗೆ ವಾಪಾಸ್ ಬಂದು ಮತ್ತೆ 12.50ಕ್ಕೆ ಬಿಡದಿಯಿಂದ ಬೆಂಗಳೂರಿಗೆ ಹೊರಟಿದ್ದರು.

publive-image

ಬಳಿಕ ಮೊದಲೇ ಸೌಂಡ್ ಕೇಳಿದ್ದ ಜಾಗದಲ್ಲಿ ಫೈರಿಂಗ್ ಆಗಿದೆ. ಏಕಾಏಕಿ ಗುಂಡು ಹಾಕಿಸಿದ ಪರಿಣಾಮ ಡ್ರೈವರ್ ಬಚಾವ್ ಆಗಿದ್ದಾರೆ. ಅದು ಮಿಸ್ ಆಗಿ ರಿಕ್ಕಿ ರೈ ಅವರ ಮೂಗು ಹಾಗೂ ಬಲ ತೋಳಿಗೆ ಫೈರಿಂಗ್ ಆಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ರಿಕ್ಕಿ ರೈ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment