/newsfirstlive-kannada/media/post_attachments/wp-content/uploads/2025/03/marriage-case4.jpg)
ಬೆಂಗಳೂರು: ಹೈಫೈ ಕಾರ್ಪೋರೇಟ್ ಹೆಂಡತಿಯೊಬ್ಬಳು ಮದುವೆ ಬೇಕು, ಆದ್ರೆ ಸಂಸಾರ ಬೇಡ, ನನ್ನನ್ನು ಮುಟ್ಟಬೇಡ, ನನ್ನ ಬ್ಯೂಟಿ ಹಾಳಾಗತ್ತೆ ಎಂದು ಕಾಟ ಕೊಡುತ್ತಿದ್ದಾಳೆ ಅಂತ ಪತಿ ಆರೋಪಿಸಿದ್ದರು. ಈಗ ಹೈಫೈ ಹೆಂಡತಿ ಕೇಸ್‌ಗೆ ಹೊಸ ಟ್ವಿಸ್ಟ್‌ವೊಂದು ಸಿಕ್ಕಿದೆ.
ಇದನ್ನೂ ಓದಿ:ಮದುವೆ ಆದ್ಮೇಲೆ ಮುಟ್ಟಬೇಡ, ಬ್ಯೂಟಿ ಹಾಳಾಗುತ್ತೆ.. ಬೆಂಗಳೂರಲ್ಲಿ ಹೆಂಡತಿ ಡಿಮ್ಯಾಂಡ್‌ಗೆ ಸುಸ್ತಾದ ಗಂಡ!
ಇದೀಗ ಪತ್ನಿಯೇ ಪತಿ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀಕಾಂತ್ ಪತ್ನಿ, ಅವರೇ ನನಗೆ ಹೊಡಿಯೋದು, ಬಡಿಯೋದು ಮಾಡಿದ್ದಾರೆ. ಸೊಸೆ ಅಂದ್ರೆ ಕೆಲಸದವಳು ಅನ್ಕೊಂಡಿದ್ರು. ವೈಯಾಲಿಕವಲ್ ಠಾಣೆಯಲ್ಲಿ ಈ ಹಿಂದೆ ದೂರು ಕೊಟ್ಟಿದ್ದೆ. ವರದಕ್ಷಿಣೆ ವಿಚಾರಕ್ಕೂ ಕಿರುಕುಳ ಕೊಟ್ಟಿದ್ದಾರೆ. ಅವರ ತಾಯಿ ಬೆಡ್ ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡು, ಡೈವರ್ಸ್ ತಕೋ ಅಂತಾರೆ. ಜೋಕು ಮಾಡೋದನ್ನೂ ವಿಡಿಯೋ ಮಾಡಿದ್ದಾರೆ. ಎಡಿಟ್ ಮಾಡಿ ವಿಡಿಯೋ ಕೊಟ್ಟಿದ್ದಾರೆ. ಸರಿಯಾಗಿ ಊಟ ಕೂಡ ಕೊಡ್ತಿರ್ಲಿಲ್ಲ. ಮನೆಗೆ ಸರಿಯಾಗಿ ಸಾಮಾನು ತರ್ತಿರ್ಲಿಲ್ಲ ಇನ್ನು 5 ಸಾವಿರ ಕೊಡ್ತಾರಾ? ಮಕ್ಕಳನ್ನು ಮಾಡಿಬಿಡು, ಅವಳು ಎಲ್ಲೂ ಹೋಗಲ್ಲ ಅಂತ ಅವರ ಅಣ್ಣ ಹೇಳಿಕೊಟ್ಟಿದ್ದಾರೆ. ಯಾವ ಧೈರ್ಯದ ಮೇಲೆ ನಾನು ಮಕ್ಕಳು ಮಾಡಿಕೊಳ್ಳಲಿ. ಅವರ ಮನೆಯವರೇ ದಿನಾಲೂ ಕಿರುಕುಳ ಕೊಟ್ಟಿದ್ದಾರೆ. ಇಡಿ ಫ್ಯಾಮಿಲಿ ಟಾರ್ಚರ್ ಕೊಡೋಕೆ ಶುರು ಮಾಡಿದ್ರು. ನಂತರ ಮನೆ ಬಿಟ್ಟು ಅಮ್ಮನ ಮನೆಗೆ ಹೋಗಿದ್ದೆ, ಮತ್ತೆ ಬಂದೆ. ಡೈವರ್ಸ್ ಮುಚ್ಯೂಲ್ ತಕೊಳೋನಾ ಅನ್ಕೊಂಡೆ, ಆದರೆ ನಮ್ಮ ತಂದೆ ತಾಯಿ ಕಷ್ಟ ಪಟ್ಟು ಮದುವೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಕೇಳಿದ್ದೇನೆ.
ಏನಿದು ಪ್ರಕರಣ?
ತನ್ನ ಹೆಂಡತಿ ಪ್ರತಿದಿನ ಕೊಡುವ ಕಾಟಕ್ಕೆ ಬೆಸತ್ತು ಆಕೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಪತಿ ಶ್ರೀಕಾಂತ್. ಎರಡು ವರ್ಷಗಳ ಹಿಂದೆ ಶ್ರೀಕಾಂತ್ ಮದುವೆಯಾಗಿದ್ದರು. 2 ವರ್ಷಗಳು ಕಳೆದರು ಹೆಂಡತಿ ಸಂಸಾರ ನಡೆಸಲು ನೋ ಅಂತಿದ್ದಳಂತೆ. ನನ್ನ ಮುಟ್ಟ ಬೇಡ, ಬ್ಯೂಟಿ ಹಾಳಾಗುತ್ತೆ, ನನಗಿವಾಗ ಮಕ್ಕಳು ಬೇಡ, ದತ್ತು ಮಕ್ಕಳನ್ನ ಸಾಕೋಣ, 60 ವರ್ಷದ ನಂತರ ಮಕ್ಕಳನ್ನ ಮಾಡಿಕೊಳ್ಳೋಣ ಅಂತಿದ್ದಳಂತೆ ಪತ್ನಿ. ಅಲ್ಲದೇ ಡಿವೋರ್ಸ್ ಕೊಡು ಇಲ್ಲ ಅಂದ್ರೆ 45 ಲಕ್ಷ ರೂಪಾಯಿ ಕೊಡು ಅಂತ ಡಿಮ್ಯಾಂಡ್ ಮಾಡುತ್ತಿದ್ದಳಂತೆ. ಬಲವಂತವಾಗಿ ಮುಟ್ಟಿದ್ರೆ ಡೆತ್ ನೋಟ್ ಬರೆದಿಟ್ಟು ಸಾಯ್ತೀನಿ ಅಂತ ಗಂಡನನ್ನೇ ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳಂತೆ ಪತ್ನಿ. ಈಗಾಗಲೇ ಮದುವೆಗೆ ಲಕ್ಷಾಂತರ ಖರ್ಚು ಮಾಡಿ ಒಡವೆ ಮಾಡಿಸಿ ಕೊಟ್ಟಿದ್ದರಂತೆ. ಆದ್ರೆ ತಾಳಿ, ಕಾಲುಂಗುರ ಹಾಕಲ್ಲ ಅಂತ ಹೆಂಡತಿ ಹೇಳುತ್ತಾಳೆ. ಆಕೆಯ ನಡುವಳಿಕೆಯಿಂದ ಬೇಸತ್ತು ಹೋಗಿರುವ ಶ್ರೀಕಾಂತ್ ಇತ್ತ ಮದುವೆಯ ಖುಷಿಯು ಇಲ್ಲದೇ, ಖರ್ಚು ಮಾಡಿದ ಹಣವು ಇಲ್ಲದೇ ಕಂಗಾಲಾಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ