newsfirstkannada.com

ಶ್ರಾವಣಿ ಸುಬ್ರಮಣ್ಯ ಸೀರಿಯಲ್​ಗೆ ಹೊಸ ವಿಲನ್ ಖಡಕ್​​ ಎಂಟ್ರಿ; ಯಾರು ಈ ಅಥರ್ವ್!

Share :

Published April 3, 2024 at 3:31pm

Update April 3, 2024 at 3:35pm

  ಗೌರಿ ಶಂಕರ, ರಜಿಯಾ ರಾಮ್ ಸೀರಿಯಲ್​ನಲ್ಲಿ ನಟನ ಅದ್ಭುತ ಅಭಿನಯ

  ಅಪ್ಪನ ಪ್ರೀತಿಗೆ ಹಂಬಲಿಸುತ್ತಿರೋ ಈ ಶ್ರಾವಣಿಗೆ ಇದೆಂಥಾ ಪರಿಸ್ಥಿತಿ!

  ಆಸ್ತಿ ಕಬಳಿಸೋಕೆ ಪ್ಲ್ಯಾನ್​ ಮಾಡ್ತಿರೋ ಅಮ್ಮನ ಕಿರಾತಕ ಮಗ ಯಾರು?

ಶ್ರಾವಣಿ ಸುಬ್ರಮಣ್ಯ ಸದ್ಯ ಟ್ರೆಂಡಿಂಗ್​ನಲ್ಲಿರೋ ಧಾರಾವಾಹಿ. ಅಪ್ಪನ ಪ್ರೀತಿಗೆ ಹಂಬಲಿಸುತ್ತಿರೋ ಶ್ರಾವಣಿ ಲೈಫ್​ಗೆ ಎಂಟ್ರಿ ಕೊಟ್ಟಿದ್ದಾನೆ ವಿಲನ್​. ಖಡಕ್​ ನೋಟ, ಶ್ರಾವಣಿಯನ್ನು ಪಡೆಯೋ ಹಂಬಲ, ತಮ್ಮನ ಆಸ್ತಿ ಕಬಳಿಸೋಕೆ ಪ್ಲ್ಯಾನ್​ ಮಾಡ್ತಿರೋ ಅಮ್ಮನ ಕಿರಾತಕ ಮಗ ಮದನ್​. ಅಷ್ಟಕ್ಕೂ ಹೀಗೆ ಖಡಕ್ ವಿಲನ್​ ಆಗಿ ಎಂಟ್ರಿ ಕೊಟ್ಟಿರೋ ಈ ಮದನ್​ ಪಾತ್ರ ಮಾಡ್ತಿರೋ ನಟನ ಹೆಸರು ಅಥರ್ವ್.

ಇದನ್ನೂ ಓದಿ: ಬರ್ತ್​​ಡೇ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಭೀಕರ ಅಪಘಾತ; ತಾಯಿ ಮಗು ಸಾವು

ಹೌದು, ಶ್ರಾವಣಿ ಲೈಫ್​ನಲ್ಲಿ ಕಳ್ಳಾಟ ಆಡುತ್ತಿರೋ ಮದನ್​ ಪಾತ್ರ ಮಾಡ್ತಿರೋದು ನಟ ಅಥರ್ವ್​. ತಮ್ಮ ಫಸ್ಟ್​ ಲುಕ್​ನಲ್ಲೇ ವೀಕ್ಷಕರ ಗಮನ ಸೆಳೆದಿರೋ ಕಲಾವಿದ ಇವರು. ಅಥರ್ವ್​ ಮೂತಹ ರಂಗಭೂಮಿ ಕಲಾವಿದ. ಮೊದಲು ಬಣ್ಣ ಹಚ್ಚಿದ್ದು ರಜಿಯಾ ರಾಮ್​ ಅನ್ನೋ ಧಾರಾವಾಹಿಗೆ. ನಾಯಕ ನಟನಾಗಿ ಲಾಂಚ್​ ಆದ ಅಥರ್ವ್​ ರಜಿಯಾ ರಾಮ್​ ಸೀರಿಯಲ್​ ಮುಕ್ತಾಯದ ನಂತರ ಕಾಲಿಟ್ಟಿದ್ದು ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಗೌರಿ ಶಂಕರ ಸೀರಿಯಲ್​ಗೆ. ಶಂಕರನ ಆಪ್ತ ಸ್ನೇಹಿತ ಮಂಜನ ಪಾತ್ರ ಮಾಡಿ ಗಮನ ಸೆಳೆದಿದ್ದರು.

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಶ್ರಾವಣಿ ಸುಬ್ರಮಣ್ಯ ಸೀರಿಯಲ್​ನಲ್ಲಿ ನೆಗೆಟಿವ್​ ಪಾತ್ರದ ಮೂಲಕ ಎಂಟ್ರಿಕೊಟ್ಟಿದ್ದಾರೆ. ಕಿರುಚಿತ್ರಗಳಲ್ಲೂ ಅಭಿನಯಿಸಿದ್ದು, ಹಲವು ಪಾತ್ರಗಳನ್ನ ನಿಭಾಯಿಸುದ್ರ ಮೂಲಕ ವೀಕ್ಷಕರ ಮನಸ್ಸು ಗೆಲ್ಲುತ್ತಿದ್ದಾರೆ ನಟ. ಶ್ರಾವಣಿಯನ್ನ ಅಪ್ಪ ಯಾಕೇ ಅಷ್ಟೊಂದು ದ್ವೇಷ ಮಾಡೋದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇದಕ್ಕೆಲ್ಲ ಆಸ್ತಿ ಕಬಳಿಸೋ ಕುತಂತ್ರ ಮಾಡ್ತಿರೋ ವಿಜಯಾಂಬಿಕಾ ಕಾರಣ. ಶ್ರಾವಣಿ ಹೆಸರಿಗೆ ಆಸ್ತಿ ಇರೋದ್ರಿಂದ ಅಪ್ಪ-ಮಗಳನ್ನ ದೂರ ಮಾಡೋಕೆ ಪ್ರತಿದಿನ ಹೊಸ ಹೊಸ ಪ್ಲ್ಯಾನ್​ ಮಾಡ್ತಿದ್ದಾಳೆ. ಇದು ಶ್ರಾವಣಿಗೆ ಗೊತ್ತಾಗೋ ಸಮಯ ಬರುತ್ತಾ? ಸದ್ಯದ ಮಹಾತಿರುವು ಇದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರಾವಣಿ ಸುಬ್ರಮಣ್ಯ ಸೀರಿಯಲ್​ಗೆ ಹೊಸ ವಿಲನ್ ಖಡಕ್​​ ಎಂಟ್ರಿ; ಯಾರು ಈ ಅಥರ್ವ್!

https://newsfirstlive.com/wp-content/uploads/2024/04/shravani-subramanya3.jpg

Load More