newsfirstkannada.com

ಈ ವೈರಸ್​​ ಬಂದ್ರೆ 100% ಸಾವು; ಇದು ಕೊರೋನಾಗಿಂತ ಡೇಂಜರ್​​; ನೀವು ಓದಲೇಬೇಕಾದ ಸ್ಟೋರಿ!

Share :

Published January 18, 2024 at 10:32pm

    ಮತ್ತೊಂದು ಕೊರೊನಾ ರೂಪಾಂತರಿ ಸೃಷ್ಟಿ

    ಹೊಸ ರೂಪಾಂತರಿಗೆ ಜನ್ಮ ಕೊಟ್ಟ ಚೀನಾ!

    ನೇರವಾಗಿ ಮೆದುಳು, ಕಣ್ಣಿಗೆ ವೈರಸ್​ ದಾಳಿ

ಬೆಂಗಳೂರು: ಕೊರೊನಾ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕಿಲ್ಲರ್​ ವೈರಸ್​. ಹೊಸ ಹೊಸ ರೂಪತಾಳುತ್ತ ಮನುಕುಲದ ರಕ್ತವನ್ನ ಹೀರಿದ ಸೋಂಕು. ಈ ರಕ್ಕಸ ವೈರಸ್​ ಸೃಷ್ಟಿಕರ್ತ ಚೀನಾ, ಇದೀಗ ಮತ್ತೆ ಹೊಸದೊಂದು ಕೊರೊನಾ ರೂಪಾಂತರಿಗೆ ಜನ್ಮ ಕೊಟ್ಟಿದೆಯಂತೆ. ಅದು ಕೋವಿಡ್​-19ಗಿಂತ ಅಪಾಯಕಾರಿ, ಸಾವು ಕಟ್ಟಿಟ್ಟಬುತ್ತಿ.

ಕೋವಿಡ್​ -19.. ಅಬ್ಬಾ ಈ ಹೆಸ್ರು ಕೇಳಿದ್ರೆ ನಿದ್ದೆಯಲ್ಲೂ ಬೆವತು ಹೋಗುವಷ್ಟು ಭಯ.. ಮನೆಯಿಂದ ಹೊರಬಾರದಂತ ಪರಿಸ್ಥಿತಿ.. ನಮ್ಮವರನ್ನೂ ಮುಟ್ಟದಂತ ಅಸಹಾಯಕತೆ.. ನೋಡ ನೋಡ್ತಿದಂತೆ ಈ ಮಾರಿ ಅಟ್ಟಹಾಸಕ್ಕೆ ಲಕ್ಷಾಂತರ ಮಂದಿ ಉಸಿರು ಚೆಲ್ಲಿದ್ರೂ, ಇದೀಗ ಮತ್ತದೇ ಆತಂಕ.. ಅದೇ ಭಯ.. ಕಾರಣ ಮತ್ತದೇ ಚೀನಾ.

ಮತ್ತೊಂದು ರೂಪಾಂತರಿ ವೈರಸ್​ ಸೃಷ್ಟಿ ಮಾಡಿರುವ ಚೀನಾ
ನೇರವಾಗಿ ಮೆದುಳು ಮತ್ತು ಕಣ್ಣಿಗೆ ದಾಳಿ, 100% ಸಾವು ಪಕ್ಕಾ

ಕಿಲ್ಲರ್​ ಕೊರೊನಾ ಸೃಷ್ಟಿಕರ್ತ ಚೀನಾ, ಇದೀಗ ಮತ್ತೊಂದು ಹೊಸ ಕೊರೊನಾ ರೂಪಾಂತರಿಗೆ ಜನ್ಮವಿತ್ತಿದೆಯಂತೆ. ನೇರವಾಗಿ ಮೆದುಳಿಗೆ ದಾಳಿ ಇಡೋ GX-P2V ಈ ಹೊಸ ವೈರಸ್​ ಜೀವ ಹಿರೋದು ಪಕ್ಕಾ. ಈಗಾಗ್ಲೇ ಈ ವೈರಸ್​ ಬಗ್ಗೆ ಸಂಶೋಧನೆಯು ಆಗಿದೆಯಂತೆ. ಇಲಿಗಳ ಮೇಲೆ ಪ್ರಯೋಗ ಮಾಡಿದ್ದು, ಅದು ಕೂಡ ಯಶಸ್ವಿಯಾಗಿದೆಯಂತೆ.. ಪ್ರಯೋಗಕ್ಕೆ ಒಳಪಟ್ಟ ಇಲಿಗಳು ಕೇವಲ 8 ದಿನದಲ್ಲಿ ಸಾವಿಗೀಡಾಗಿದೆಯಂತೆ.. ಅಷ್ಟೇ ಅಲ್ಲ ಮನುಷ್ಯರಿಗೂ ಈ ವೈರಸ್‌ ಸೋಂಕು ತಗುಲಿದ್ರೆ ಶೇ.100ರ ವರೆಗೂ ಸಾವಿನ ಪ್ರಮಾಣ ಸಂಭವಿಸೋ ಸಾಧ್ಯತೆಯೂ ಇದೆ.

ಸೇನಾ ಪ್ರಯೋಗಾಲಯದಲ್ಲಿ ಪ್ರಯೋಗ

ಇನ್ನೂ, ಈ ವೈರಸ್​ ಕೂಡ ಚೀನಾದ ಲ್ಯಾಬ್​ನಿಂದಲೇ ಜನ್ಮ ತಾಳಿದೆ. ಚೀನಾ ಸೇನೆಗೆ ಸಂಬಂಧಿತ ಪ್ರಯೋಗಾಲಯದ ವಿಜ್ಞಾನಿಗಳು ಹೊಸ ರೂಪಾಂತರಿಯ ಪ್ರಯೋಗ ಮಾಡಿದ್ದಾರೆ.. ವೈರಸ್‌ನ ಹರಡುವಿಕೆ ತಡೆ ಬಗ್ಗೆ ಯಾವುದೇ ಕ್ರಮಗಳನ್ನ ಕೈಗೊಳ್ಳದೇ ಪ್ರಯೋಗ ಮಾಡಿದ್ದಾರಂತೆ. ಇದ್ರಿಂದ ಹೊಸ ವೈರಸ್​ ಹರಡಿದ್ರೆ ಏನ್‌ ಗತಿ ಅನ್ನೋ ಆತಂಕ ಹೆಚ್ಚಾಗಿದೆ.

ಮತ್ತೆ ಚೀನಾದ ಹುಚ್ಚಾಟ.. ಜಾಗತಿಕ ಮಟ್ಟದಲ್ಲಿ ಆತಂಕ
ಜಗತ್ತಲ್ಲಿ ಮತ್ತೊಂದು ಪೆಂಡಮಿಕ್​ ಉಂಟಾಗುವ ಭೀತಿ

ಕೋವಿಡ್​-19ರಿಂದ ಇಡೀ ವಿಶ್ವವೇ ನಲುಗಿ ಹೋಗಿತ್ತು.. ಈಗಷ್ಟೇ ಅದರಿಂದ ನಿಧಾನವಾಗಿ ಚೇತರಿಸಿಕೊಳ್ತಿದ್ದು, ಈ ಬೆನ್ನಲ್ಲೇ ಮತ್ತೆ ಚೀನಾ ಹೊಸ ರೂಪಾಂತರಿ ಮೂಲಕ ಹುಚ್ಚಾಟ ಆಡ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ. ಅಷ್ಟೇ ಅಲ್ಲ, ಜಗತ್ತಲ್ಲಿ ಮತ್ತೊಂದು ಪೆಂಡಮಿಕ್‌ ಉಂಟಾಗುವ ಭೀತಿ ಎದುರಾಗಿದೆ.

ಒಟ್ನಲ್ಲಿ, ಚೀನಾ ಸೃಷ್ಟಿ ಮಾಡಿರೋ ಹೊಸ ರೂಪಾಂತರಿ ಕಿಲ್ಲರ್​ ಕೊರೊನಾಗಿಂತ ಡೇಂಜರ್​ ಅಂತೆ. ಇದೇನಾದ್ರೂ ದೇಹ ಹೊಕ್ಕಿದ್ರೆ, ಸಾವು ಸಂಭವಿಸೋ ಸಾಧ್ಯೆಯೇ ಹೆಚ್ಚಾಗಿದ್ದು, ಮನುಕುಲಕ್ಕೆ ಮತ್ತೊಂದು ಕಂಟಕ ಎದುರಾಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವೈರಸ್​​ ಬಂದ್ರೆ 100% ಸಾವು; ಇದು ಕೊರೋನಾಗಿಂತ ಡೇಂಜರ್​​; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2023/12/Covid-19-1.jpg

Load More