Advertisment

ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ನೋ ಎಂಟ್ರಿ; ರಾಜ್ಯಾದ್ಯಂತ ಹೇಗಿದೆ ಪೊಲೀಸ್ ಬಂದೋಬಸ್ತ್?

author-image
Gopal Kulkarni
Updated On
ಕಾವೇರಿ ತೀರದಲ್ಲಿ ಹೊಸ ವರ್ಷಾಚರಣೆಗೆ ನೋ ಎಂಟ್ರಿ; ರಾಜ್ಯಾದ್ಯಂತ ಹೇಗಿದೆ ಪೊಲೀಸ್ ಬಂದೋಬಸ್ತ್?
Advertisment
  • ಕಾವೇರಿ ತೀರದಲ್ಲಿ ನ್ಯೂಇಯರ್​ ಪ್ಲಾನ್​ ಇದ್ರೆ ಎಚ್ಚರ.. ಎಚ್ಚರ!
  • ಕಾಫಿನಾಡಲ್ಲೂ ಹೊಸ ವರ್ಷಾಚರಣೆಗೆ ‘ಮಾರ್ಗಸೂಚಿ’ ಬಿಡುಗಡೆ!
  • ಹೊಸವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ನೀಡಲಾಗಿದೆ ಅವಕಾಶ!

ಹೊಸವರ್ಷಾಚರಣೆಗೆ ಕೌಂಟ್​ಡೌನ್​ ಶುರುವಾಗಿದೆ. ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳೋದೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ.. ರಾಜ್ಯದ ಹಲವು ಭಾಗಗಳಲ್ಲಿ ಅಲರ್ಟ್​ ಆಗಿರೋ ಆರಕ್ಷಕರು ಕಟ್ಟುನಿಟ್ಟಿನ ರೂಲ್ಸ್​ಗಳನ್ನ ಜಾರಿಗೆ ತಂದಿದ್ದಾರೆ.

Advertisment

ಹೊಸ ವರುಷ,  ಹೊಸ ಹರುಷ.. ಹೊಸ ಕನಸು ಕಳೆಗಟ್ಟೋಕೆ ಕೌಂಟ್​ ಡೌನ್​ ಶುರುವಾಗಿದೆ. 2024ಕ್ಕೆ ಬಾಯ್​ ಹೇಳಿ 2025ಕ್ಕೆ ಹಾಯ್​ ಹೇಳೋ ಸಮಯ ಸನ್ನಿಹಿತವಾಗ್ತಿದೆ. ನ್ಯೂ ಇಯರ್​ ಆಚರಣೆ ಹಿನ್ನೆಲೆ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹೊಸ ವರ್ಷದ ಹೊನಲಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.

publive-image

ಕಾವೇರಿ ತೀರದಲ್ಲಿ ನ್ಯೂಇಯರ್​ ಪ್ಲಾನ್​ ಇದ್ರೆ ಎಚ್ಚರ.. ಎಚ್ಚರ!
ಇವತ್ತು ಕಾವೇರಿ ನದಿ ತಟದಲ್ಲಿ ನ್ಯೂಇಯರ್ ಪಾರ್ಟಿ ಮಾಡ್ತೀವಿ, ನದಿಗಿಳಿದು ಮೋಜು ಮಸ್ತಿ ಮಾಡ್ತೀನಿ ಅಂತ ಆಸೆ ಇಟ್ಕೊಂಡಿದ್ರೆ ಅದನ್ನ ಈಗಲೇ ಬಿಟ್ಟುಬಿಡಿ. ಹೊಸವರ್ಷಾಚರಣೆ ಅಂತ ಕೆಲವರು ಕಾವೇರಿ ನದಿ ತೀರದಲ್ಲಿ ಹುಚ್ಚಾಟ ಮಾಡ್ತಾರೆ ಅಂತ ನದಿ ತೀರದಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ರಾತ್ರಿ 8 ಗಂಟೆವರೆಗೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರು, ಬಲಮುರಿ, ಎಡಮುರಿ, ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶ ಹಾಗೂ ಕಾವೇರಿ ತೀರದಲ್ಲಿ ನಿಷೇಧಾಜ್ಞೆ ಜಾರಿ ಇದೆ.. ರೂಲ್ಸ್​ ಬ್ರೇಕ್​ ಮಾಡಿದ್ರೆ ಶಿಕ್ಷೆ ಫಿಕ್ಸ್​ ಅಂತ ಮಂಡ್ಯ ಎಸ್​ಪಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಹೊಸ ವರ್ಷ ಸ್ವಾಗತಕ್ಕೆ ಸಜ್ಜಾದ ಸಿಲಿಕಾನ್ ಸಿಟಿ; ಪೊಲೀಸ್ ಇಲಾಖೆಯ ತಯಾರಿ ಹೇಗಿದೆ?

Advertisment

publive-image

ಕಾಫಿನಾಡಲ್ಲೂ ಹೊಸ ವರ್ಷಾಚರಣೆಗೆ ‘ಮಾರ್ಗಸೂಚಿ’!
ಕಾಫಿನಾಡು ಚಿಕ್ಕಮಗಳೂರಿನಲ್ಲಿ ನ್ಯೂಇಯರ್​​ ಸೆಲೆಬ್ರೇಷನ್​ಗಾಗಿ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಪೊಲೀಸರು ಅಲರ್ಟ್​ ಆಗಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6ರವರೆಗೆ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ರೇವ್ ಪಾರ್ಟಿ ರೀತಿಯ ಕಾರ್ಯಕ್ರಮ ಮಾಡಿದ್ರೆ ಆಯೋಜಕರ ಮೇಲು ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.. ರಾತ್ರಿ 10ರ ನಂತರ ಔಟ್ ಡೋರ್ ಡಿಜೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.. ಕುಡಿದು ವಾಹನ ಚಾಲನೆ, ವೀಲ್ಹಿಂಗ್ ಮಾಡೋರ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ. ಆದಾಯಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ ಸಿ.ಎಲ್. 5 ಲೈಸೆನ್ಸ್‌ ಕೊಟ್ಟಿದ್ದು, ಸಿಎಲ್ 5 ಲೈಸನ್ಸ್ ಪಡೆದವರು ಸಿಸಿ ಕ್ಯಾಮರಾ ಹಾಕೋದು ಕಡ್ಡಾಯವಾಗಿದೆ.

publive-image

ಹೊಸವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ಅವಕಾಶ!
ಹೊಸವರ್ಷದ ಹಿನ್ನೆಲೆ ಶಿವಮೊಗ್ಗದ ವಿಶ್ವವಿಖ್ಯಾತ ಜೋಗ ಜಲಪಾತವನ್ನ ಹೊರಗಡೆಯಿಂದ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ.. ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಕಳೆದ 3 ತಿಂಗಳಿಂದ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಜೋಗದ ಮಹಾದ್ವಾರದಿಂದ 50 ಮೀಟರ್ ದೂರದಲ್ಲಿ ನಿಂತು ಜಲಪಾತದ ರಮಣೀಯ ದೃಶ್ಯವನ್ನ ಸವಿಯಬಹುದಾಗಿದೆ.. ಇನ್ನೂ ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶ, ನಾಮದಚಿಲುಮೆ, ಮಂದರಗಿರಿ ಬೆಟ್ಟ ಸೇರಿ ಹಲವು ಕಡೆ ಪ್ರವೇಶ ನಿರ್ಬಂಧ ಹೇರಲಾಗಿದೆ.. ಇಂದು ರಾತ್ರಿ 8 ಗಂಟೆಯಿಂದ, ಜನವರಿ 2ರ ಬೆಳಗ್ಗೆ 8 ಗಂಟೆವರೆಗೂ ನಿರ್ಬಂಧ ಇರಲಿದೆ. ಹೊಸ ವರ್ಷಾಚರಣೆ ಅಂತ ಹದ್ದು ಮೀರಿ ವರ್ತಿಸಿದರೆ ಶಿಕ್ಷೆ ಫಿಕ್ಸ್​ ಅಂತ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್.ಕೆ ವೆಂಕಟ್ ಎಚ್ಚರಿಕೆ ನೀಡಿದ್ದಾರೆ.

publive-image

ಹೊಸ ವರ್ಷದ ಆಚರಣೆಗೆ ವಿರೋಧಿಸಿ ಪ್ರತಿಭಟನೆ!
ಹೊಸವರ್ಷಾಚರಣೆ ಇಡೀ ದೇಶವೇ ಸಿದ್ಧವಾಗಿದೆ. ಆದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ನ್ಯೂಇಯರ್​ ಸೆಲೆಬ್ರೇಷನ್​ಗೆ ವಿರೋಧ ಕೇಳಿ ಬಂದಿದೆ. ಮಹಾಲಿಂಗಪೂರದಲ್ಲಿ ವಿಶ್ವ ಹಿಂದೂ ಪರಿಷತ್ & ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ನಾನೊಬ್ಬ ಹಿಂದೂ, ನಮ್ಮದು ಯುಗಾದಿ ಹೊಸ ವರ್ಷ ಎಂದು ಘೋಷಣೆ ಕೂಗಿ ಬ್ರಿಟಿಷರ ಹೊಸವರ್ಷಾಚರಣೆ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.

Advertisment

ಅದೇನೆ ಇರಲಿ, 2024ಕ್ಕೆ ಗುಡ್​ ಬೈ ಹೇಳಿ 2025ಕ್ಕೆ ಹಾಯ್​ ಹೇಳಲು ಇಡೀ ವಿಶ್ವವೇ ಸಜ್ಜಾಗಿದೆ. ಆದ್ರೆ ಸಂಭ್ರಮಾಚರಣೆ ಹೆಸರಲ್ಲಿ ಹುಚ್ಚಾಟವಾಡದೇ ಹೊಸ ವರ್ಷವನ್ನು ಬರಮಾಡಿಕೊಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment