/newsfirstlive-kannada/media/post_attachments/wp-content/uploads/2025/01/NEW_TEAR.jpg)
ಹಳೆ ವರ್ಷವನ್ನ ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದ ಕರುನಾಡ ಜನತೆ ರಾತ್ರಿ ಹೊಸ ಪ್ರಪಂಚದಲ್ಲೇ ತೇಲಾಡಿದರು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನ ವೆಲ್​​ಕಮ್ ​ ಮಾಡಿದ ಜನ ಹಳೆ ವರ್ಷದ ಹಳೆ ನೆನಪುಗಳಿಗೆ ಗುಡ್​​ಬಾಯ್ ಹೇಳಿದರು.
ರಾಜ್ಯದೆಲ್ಲೆಡೆ ಸಂಭ್ರಮ, ಎಲ್ಲೆಲ್ಲೂ ಸಡಗರ, ಎಲ್ಲರದ್ದೂ ಸಖತ್ ಸ್ಟೆಪ್ಸ್​. ಕಾಲು ನಿಲ್ಲುತ್ತಿರಲಿಲ್ಲ. ಸಾಂಗ್ ಮುಗೀತಾ ಇಲ್ಲ. ಕಲರ್​ ಫುಲ್​​ ಲೈಟ್ಸ್​. ಜೋಶ್​ ಫುಲ್ ಸಾಂಗ್ಸ್​. ನ್ಯೂಇಯರ್​ಗೆ ಫುಲ್​ ಹ್ಯಾಪಿ ಹ್ಯಾಪಿ.
/newsfirstlive-kannada/media/post_attachments/wp-content/uploads/2025/01/NEW_TEAR_2025.jpg)
ಅದೇನ್​ ಜನಜಂಗುಳಿ, ಅದೇನ್ ಜೋಶ್​, ಹಳೇ ವರ್ಷವನ್ನ ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದ ಕರುನಾಡ ಜನತೆ ಹೊಸ ಪ್ರಪಂಚದಲ್ಲೇ ತೇಲಾಡಿದರು. ಕರಾವಳಿ ನಗರಿಯಿಂದ ಹಿಡಿದು ಅರಮನೆ ನಗರಿವರೆಗೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನ ಸ್ವಾಗತ​ ಮಾಡಿದ ಜನ ಹಳೆ ವರ್ಷಕ್ಕೆ ಬಾಯ್ ಹೇಳಿದರು.
ಅರಮನೆ ನಗರಿಯಲ್ಲಿ ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ!
ಅರಮನೆ ನಗರಿ ಮೈಸೂರಿನ ಜನ ಹೊಸ ವರ್ಷವನ್ನ ಅದ್ಧೂರಿಯಾಗಿ ಸ್ವಾಗತಿಸಿದರು. 2024ರ ಕೊನೆ ಸೂರ್ಯಾಸ್ತವನ್ನ ಕಣ್ತುಂಬಿಕೊಂಡ ಜನರು ಕತ್ತಲಾಗ್ತಿದ್ದಂತೆ ರಂಗು ರಂಗಿನ ಬೆಳಕಿನ ಮಧ್ಯೆ ರಂಗಪ್ರವೇಶ ಮಾಡಿದರು. ಕುಣಿದು ಕುಪ್ಪಳಿಸಿ ಎಂಜಾಯ್​ ಮಾಡಿದ ಕೇಕ್​ ಕತ್ತರಿಸಿ ಹೊಸ ವರ್ಷವನ್ನ ಸ್ವಾಗತಿಸಿದರು.
/newsfirstlive-kannada/media/post_attachments/wp-content/uploads/2024/12/NEW-YEAR-4.jpg)
ಕಡಲತಡಿಯಲ್ಲಿ ಹೊಸವರ್ಷದ ಕಲರ್​ ಫುಲ್​ ಕಲರವ!
ಕಡಲತಡಿ ಮಂಗಳೂರಿನಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸಖತ್​ ಸ್ಟೆಪ್ಸ್ ಹಾಕಿದ ಜನ ಸಮುದ್ರದ ಅಲೆಗಳಂತೆ ಹಾರುತ್ತಾ, ಏರುತ್ತಾ ಹಬ್ಬ ಮಾಡಿದರು. ರಾತ್ರಿ ಗಂಟೆ 12 ಆಗುತ್ತಿದ್ದಂತೆ ಕೇಕ್​ ಕತ್ತರಿಸಿ ಕೇಕೆ ಹಾಕಿದ ಜನ 2025ನ್ನ ರೆಡ್​ ಕಾರ್ಪೆಟ್​ ಹಾಸಿ ವೆಲ್​​ಕಮ್​​ ಮಾಡಿದರು.
ಹುಬ್ಬಳ್ಳಿಯಲ್ಲೂ ಹೊಸ ವರ್ಷದ ಸೆಲೆಬ್ರೇಷನ್​ ಹಾವಳಿ!
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲೂ ಹೊಸ ವರ್ಷದ ಸೆಲೆಬ್ರೇಷನ್​ ಹಾವಳಿ ಜೋರಾಗಿತ್ತು. ಹಾಡು, ಡ್ಯಾನ್ಸ್​ನೊಂದಿದೆ ಹೊಸ ವರ್ಷವನ್ನ ವೆಲ್ಕಮ್​ ಮಾಡಿದ ಜನ ರಾತ್ರಿ ಹೊಸ ಪ್ರಪಂಚದಲ್ಲೇ ಮಿಂದೆದ್ದರು. ಕಲರ್​ ಕಲರ್​ ಲೈಟ್​ಗಳ ಮಧ್ಯೆ ಮೈ ಬಳುಕುಸಿದ ಚೆಂದುಳ್ಳಿ ಚೆಲುವೆಯರು, ಚಂದ ಚಂದದ ಸ್ಟೆಪ್ಸ್​ ಹಾಕಿ, ಕೇಕ್​ ಕತ್ತರಿಸಿ ಸಂಭ್ರಮಿಸಿದರು.
/newsfirstlive-kannada/media/post_attachments/wp-content/uploads/2025/01/NEW_TEAR_2025_1.jpg)
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಡಗರ!
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಹೊಸ ವರ್ಷದ ಸಂಭ್ರಮ, ಸಡಗರ ಜೋರಾಗಿತ್ತು.. ಕುಣಿದು, ಕುಪ್ಪಳಿಸಿ ಹೊಸ ವರ್ಷಕ್ಕೆ ಕೇಕ್​ ಕತ್ತರಿಸಿ, ಹಾಯ್ ಹೇಳಿದರು.
ಬೆಳಗಾವಿ, ಹಾಸನದಲ್ಲೂ ಭರ್ಜರಿ ಡ್ಯಾನ್ಸ್​.. ಸಖತ್ ಸ್ಟೆಪ್ಸ್​!
ಹಾಸನದಲ್ಲೂ ಹೊಸ ವರ್ಷದ ಹೊನಲು ಹರಿದಿತ್ತು. ಕಳೆದ ರಾತ್ರಿ ರಾ.. ರಾ.. ರಕ್ಕಮ್ಮ ಅಂತ ರಗಡ್​ ಸ್ಟೆಪ್ಸ್​ ಹಾಕಿದ ಜನರು ಸಖತ್ ಎಂಜಾಯ್​ ಮಾಡಿದರು. ಎಲ್ಲರೂ ಸೇರಿ ಇಂದು ಎಣ್ಣೆ ಹಾಕುಮ ಸಾಂಗ್​​ಗೆ ಮಸ್ತ್​ ಮಜಾ ಮಾಡಿದರು. ಬೆಳಗಾವಿಯಲ್ಲೂ ಹೊಸ ವರ್ಷವನ್ನ ಭರ್ಜರಿಯಲ್ಲಿ ಸ್ವಾಗತಿಸಲಾಯಿತು. ಕಲರ್​ ಕಲರ್​ ಬಟ್ಟೆ ತೊಟ್ಟು, ಕಲರ್​ ಫುಲ್​ ಸಾಂಗ್​ಗೆ ಸ್ಟೆಪ್ಸ್​ ಹಾಕಿದ ಜನ ಫುಲ್​ ತ್ರಿಲ್ ತಗೊಂಡರು. ಉಡುಪಿಯಲ್ಲೂ ಹೊಸ ವರ್ಷವನ್ನ ಸಖತ್​ ಆಗಿ ಸ್ವಾಗತ ಮಾಡಿದರು.
ಹೊಸ ವರ್ಷದ ಹರುಷ ರಾಜ್ಯದ ದಶ ದಿಕ್ಕುಗಳಲ್ಲೂ ಜೋರಾಗಿತ್ತು. ಸುಸ್ತಾದ್ರೂ ಮಸ್ತ್​ ಮಸ್ತ್​ ಸ್ಟೆಪ್ಸ್​ ಹಾಕಿದ ಕರುನಾಡ ಜನರು ರಾತ್ರಿ ಹೊಸ ಲೋಕದಲ್ಲೇ ತೇಲಾಡಿದ್ದು ಮಾತ್ರ ನೆನಪಲ್ಲಿ ಉಳಿಯುವಂತದ್ದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us