/newsfirstlive-kannada/media/post_attachments/wp-content/uploads/2024/12/NEW-YEAR-CELEBRATION.jpg)
ಹೊಸ ವರ್ಷದ ಸಂಭ್ರಮಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಇನ್ನು ಹೊಸ ವರ್ಷವನ್ನ ಆಚರಿಸುವುದಕ್ಕೆ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಂಡ ಗೋವಾದತ್ತ ಲಕ್ಷಗಟ್ಟಲೇ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಗೋವಾದ ಕಡಲ ತೀರಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
/newsfirstlive-kannada/media/post_attachments/wp-content/uploads/2024/12/NEW-YEAR-GOA.jpg)
ಹೊಸ ವರ್ಷ ಆಚರಣೆಗೆ ಕೆಲವೇ ದಿನಗಳ ಬಾಕಿ
ಹೊಸ ವರ್ಷ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. 2025ರ ಹೊಸ ಸಂವತ್ಸರವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಇನ್ನು ಭಾರತದಲ್ಲೂ ಸೆಲೆಬ್ರೇಷನ್​ನ ಹಾಟ್​ಸ್ಪಾಟ್​ ಪ್ರವಾಸಿ ತಾಣಗಳು ಝಗಮಗಿಸುತ್ತಿವೆ. ಅದರಲ್ಲೂ ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಖ್ಯಾತಿ ಪಡೆದಿರುವ ಗೋವಾದಲ್ಲಿ ನ್ಯೂ ಇಯರ್​ ಸೆಲೆಬ್ರೇಷನ್​ ಮಾಡಲು ದೇಶದ ನಾನಾ ಭಾಗಗಳಿಂದ ಲಕ್ಷಗಟ್ಟಲೇ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.
ಕ್ರಿಸ್ ಮಸ್ ರಜೆ, ಹೊಸ ವರ್ಷ ಹಿನ್ನೆಲೆ ಈಗಾಗಲೇ ಗೋವಾದ ಪ್ರಮುಖ ಕಡಲ ತೀರದತ್ತ ಲಕ್ಷಗಟ್ಟಲೇ ಪ್ರವಾಸಿಗರು ಆಗಮಿಸಿದ್ದಾರೆ. ಇದರಿಂದ ಗೋವಾದ ಪ್ರಮುಖ ಕಡಲ ತೀರಗಳು ಪ್ರವಾಸಿಗರಿಂದ ತುಂಬಿ ಹೋಗಿವೆ. ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರೇ ಕಾಣಿಸಿಕೊಳ್ಳುತ್ತಿದ್ದು ಗೋವಾ ಸಂಪೂರ್ಣ ಕಲರ್ ಮಯವಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ ಘೋರ ದುರಂತ.. ಇಂದು ಉಸಿರು ನಿಲ್ಲಿಸಿದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ
ಇನ್ನು ರಾಜ್ಯದ ಗಡಿಭಾಗವಾಗಿರುವ ಕಾನಕೋನ ಕಡಲ ತೀರದಲ್ಲೂ ಹೊಷ ವರ್ಷದ ಸೆಲೆಬ್ರೇಷನ್​ಗೆ ಸಿದ್ಧತೆ ಜೋರಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ರೂಮ್​ಗಳನ್ನು ಬುಕ್ ಮಾಡಿಕೊಂಡು ಕಾಯ್ತಿದ್ದಾರೆ. ಕಡಲ ತೀರದಲ್ಲಿ ಹೊಸ ವರ್ಷಾಚರಣೆಯನ್ನ ವಿಭಿನ್ನವಾಗಿ ಆಚರಿಸಲಿದ್ದು, ಇದನ್ನ ನೋಡಲೆಂದು ಹಲವು ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ಲೈಫ್​ಗಾರ್ಡ್​ ಸಿಬ್ಬಂದಿಯನ್ನು ಕಡಲ ತೀರದಲ್ಲಿ ಹೆಚ್ಚಿಸಲಾಗಿದೆ.
/newsfirstlive-kannada/media/post_attachments/wp-content/uploads/2024/12/NEW-YEAR-CELEBRATION-2.jpg)
ಹೊಸ ವರ್ಷಕ್ಕೆ ಖುಷಿ ಸುದ್ದಿ ಕೊಟ್ಟ ನಮ್ಮ ಮೆಟ್ರೋ
ಇನ್ನು ನ್ಯೂ ಇಯರ್​ ಸ್ವಾಗತಕ್ಕೆ ಸಿಲಿಕಾನ್​ ಸಿಟಿ ಕೂಡ ರೆಡಿಯಾಗ್ತಿದೆ. ಸೆಲೆಬ್ರೇಷನ್​ನ ಹಾಟ್​ಸ್ಟಾಟ್​ ಆದ ಎಂ.ಜಿ.ರೋಡ್​. ಬ್ರಿಗೇಡ್​ ರೋಡ್​ನಲ್ಲಿ ಡಿಸೆಂಬರ್​ 31ರ ಸಂಭ್ರಮಾಚರಣೆ ಮಾಡಲು ಯುವ ಸಮೂಹ ಹರಿದು ಬರಲಿದೆ.. ಹೀಗೆ ಸಂಭ್ರಮಾಚರಣೆಗೆ ಬರುವ ಜನರಿಗೆ ಸಮಸ್ಯೆ ಆಗದಿರಲೆಂದು ನಮ್ಮ ಮೆಟ್ರೋ ಗುಡ್​ ನ್ಯೂಸ್​ ಕೊಟ್ಟಿದೆ.
ಇದನ್ನೂ ಓದಿ:ಆಸ್ಪತ್ರೆಗೆ ಆರಾಮಾಗಿ ಬಂದ ಮಹಿಳೆ ಬದುಕಲಿಲ್ಲ.. ಹಾವೇರಿಯಲ್ಲಿ ದಾರುಣ ಘಟನೆ; ಆಗಿದ್ದೇನು?
ಡಿಸೆಂಬರ್ 31ರ ರಾತ್ರಿ ಮೆಟ್ರೋ ಸಂಚಾರ ಸಮಯ ವಿಸ್ತರಣೆ ಮಾಡಲಾಗಿದೆ. ಜನವರಿ 1 ನಸುಕಿನ ಜಾವ 2 ಗಂಟೆವರೆಗೂ ಮೆಟ್ರೋ ಸಂಚಾರ ಇರಲಿದೆ. ಜ.1 ರಂದು ನಸುಕಿನ ಜಾವ 2 ಗಂಟೆಗೆ ಎಲ್ಲಾ ಟರ್ಮಿನಲ್​ನಿಂದ ಕೊನೆ ಮೆಟ್ರೋ ಸಂಚಾರ ಮಾಡಲಿದೆ. ಜನವರೊ 1 ನಸುಕಿನ ಜಾವ 2.40ಕ್ಕೆ ಮೆಜೆಸ್ಟಿಕ್​​ನಿಂದ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಹೊರಡಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/NEW-YEAR-GOA-1.jpg)
ಡಿ.31ರ ರಾತ್ರಿ 11ಕ್ಕೆ ಎಂ.ಜಿ.ರೋಡ್ ಮೆಟ್ರೋ ಸ್ಟೇಷನ್​ ಕ್ಲೋಸ್
ಡಿಸೆಂಬರ್​ 31ರಂದು ಸೆಲೆಬ್ರೇಷನ್​ ಮಾಡಲು ಎಂ.ಜಿ.ರೋಡ್​ಗೆ ಬರೋ ಪ್ಲಾನ್​ನಲ್ಲಿ ಇರುವವ ಇನ್ನೊಂದು ಅಂಶವನ್ನು ಗಮನಿಸಲೇ ಬೇಕು.. ಡಿಸೆಂಬರ್​ 31ರ ರಾತ್ರಿ ಜನದಟ್ಟಣೆ ಜಾಸ್ತಿ ಇರುವ ಕಾರಣ ಡಿಸೆಂಬರ್​ 31ರ ರಾತ್ರಿ 11 ಗಂಟೆಗೆ ಎಂ.ಜಿ.ರೋಡ್​ ಮೆಟ್ರೋ ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್ ಕ್ಲೋಸ್ ಎರಡನ್ನೂ ಕ್ಲೋಸ್​ ಮಾಡಲಿದ್ದಾರೆ. ಹೀಗಾಗಿ ಪ್ರಯಾಣಿಕರು ಟ್ರಿನಿಟಿ ಅಥವಾ ಕಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಬಳಸಬಹುದು ಎಂದು ತಿಳಿಸಿದೆ. ಹೊಸ ವರ್ಷಾಚರಣೆಗೆ ಸಿಲಿಕಾನ್​ ಸಿಟಿ ಮತ್ತು ಕಡಲ ತೀರದ ನಗರಗಳು ಸಕಲ ರೀತಿ ಸಜ್ಜಾಗಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us