ನೀವು ಇಂದೇ ಮಾಡಬೇಕಾದ ಕೆಲಸ ಬಾಕಿ ಇದೆ.. ಯುವಕರು ಮಿಸ್​ ಮಾಡಲೇಬೇಡಿ..!

author-image
Ganesh
Updated On
ನೀವು ಇಂದೇ ಮಾಡಬೇಕಾದ ಕೆಲಸ ಬಾಕಿ ಇದೆ.. ಯುವಕರು ಮಿಸ್​ ಮಾಡಲೇಬೇಡಿ..!
Advertisment
  • 2024 ಮುಗಿಯಿತು.. ಬಂದೇ ಬಿಡ್ತು 2025
  • ನಿಮ್ಮ ಬದುಕಿನ ಉದ್ದಾರಕ್ಕಾಗಿ 2025 ಆಗಿರಲಿ
  • ದಿಟ್ಟ ಹೆಜ್ಜೆ, ನೇರ ಗುರಿಗಾಗಿ ಏನು ಮಾಡಬೇಕು..?

‘ನೋಡೋಣ ಇರು ಗುರೂ’ ಎಂದು ಹೇಳುತ್ತಿದ್ದ 2024 ಮುಗಿದಿದೆ. ನಾಳೆಯಿಂದ 2025!. ನಿಮ್ಮ ಉದ್ದಾರಕ್ಕಾಗಿ ಇಂದೇ ಮಾಡಬೇಕಾದ ಕೆಲಸಗಳು ಇಲ್ಲಿವೆ. ಮುಂದಿನ ವರ್ಷದಿಂದ ನಿಮ್ಮ ಯೋಜನೆಗಳು, ನಿಮ್ಮ ಕೆಲಸಗಳು ಹೇಗಿರಬೇಕು. ಯಾವ ಮಾರ್ಗದಲ್ಲಿ ನಡೆಯಬೇಕು. ನಿಮ್ಮ ಉದ್ದೇಶಿತ ಟಾರ್ಗೆಟ್ ರೀಚ್ ಆಗಲು ಈ ಕೆಳಗಿನ ಫ್ರೇಮ್ ವರ್ಕ್ ಮಾಡಿಕೊಳ್ಳಿ.

2024ರ ವಿಮರ್ಶೆ

2024ರಲ್ಲಿ ನಿಮ್ಮ ಬದುಕಲ್ಲಿ ನಡೆದ ವಿಚಾರಗಳನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಯಾವುದರಲ್ಲಿ ಸಕ್ಸಸ್ ಆಗಿದ್ದೀರಿ. ಎಲ್ಲಿ ಫೇಲ್ ಆಗಿದ್ದೀರಿ. ವೈಫಲ್ಯಕ್ಕೆ ಕಾರಣ ಏನು? ಸಿಕ್ಕಂತಹ ಒಂದೊಳ್ಳೆ ಅನುಭವ ಏನು? ನೀವು ಕಲಿತ ಪಾಠ ಏನು ಅನ್ನೋದನ್ನು ಮೆಲುಕು ಹಾಕಿ. ಸರಿ ತಪ್ಪುಗಳ ಬಗ್ಗೆ ಒರೆಗೆ ಹಚ್ಚಿ.

2025ರ ಗುರಿ

ಜೀವನದ ಗೋಲ್ ರೀಚ್ ಆಗಲು ಉತ್ತಮ ಡೈರೆಕ್ಷನ್ ಬೇಕೇಬೇಕು. 2025ರಲ್ಲಿ ನಿಮ್ಮ ಜೀವನವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅನ್ನೋದನ್ನು ಇವತ್ತೇ ನಿರ್ಧಾರ ಮಾಡಿ. ಜೊತೆಗೆ ಆ ಕುರಿತು ನೋಟ್ ಮಾಡಿಕೊಳ್ಳಿ. ನೀವು ಸಾಧಿಸಬಹುದಾದ ಗುರಿಗಳನ್ನು ವಿಂಗಡಿಸಿಕೊಳ್ಳಿ. ನಿಮ್ಮ ಸಾಧನೆಗೆ ಏನು ಮಾಡಬೇಕು ಅನ್ನೋದಕ್ಕೆ ಪ್ಲಾನ್ ರೂಪಿಸಿಕೊಳ್ಳಿ.

ಇದನ್ನೂ ಓದಿ:BIGG BOSS; ಅಮ್ಮನನ್ನು ತಬ್ಬಿಕೊಂಡು ಭವ್ಯ ಕಣ್ಣೀರು.. ತ್ರಿವಿಕ್ರಮ್ ಅತ್ತಿದ್ದು ಯಾಕೆ?

ದೀರ್ಘಾವಧಿಯ ಗುರಿಗಳ ಬಗ್ಗೆ ಯೋಚಿಸಿ..

ನಿಮ್ಮ ಗುರಿಗಳು ದೀರ್ಘಾವಧಿಯದ್ದಾಗಿರಲಿ. ದೂರದೃಷ್ಟಿಯ ಯೋಚನೆಯಿರಲಿ. ನೀವು ಎಲ್ಲಿ ಇರಲು ಬಯಸುತ್ತೀರಿ? ಯಾರೊಂದಿಗೆ ಇರಲಿ ಬಯಸುತ್ತೀರಿ? ನಿಮ್ಮ ದಿನಗಳನ್ನು ಹೇಗೆ ಕಳೆಯಲು ಬಯಸುತ್ತೀರಿ? ದೀರ್ಘಾವಧಿಯ ಯೋಜನೆಗಾಗಿ ನೀಲನಕ್ಷೆ ಮಾಡಿಕೊಳ್ಳಿ.

ಗುರಿಗಾಗಿ ಕ್ರಿಯಾ ಯೋಜನೆ (Action plan)

ಅಂದರೆ ನಿಮ್ಮ ಗುರಿಯನ್ನು ಸಾಧಿಸಲು ಏನು ಮಾಡಬೇಕು? ಹೇಗೆ ಮಾಡಬೇಕು? ಯಾವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬೇಕು? ಯಾವ ಡೆಡ್​ಲೈನ್​​ನಲ್ಲಿ ಮುಗಿಸಬೇಕು? ಪ್ರತಿ ಹಂತಕ್ಕೂ ಗಡುವು ಹಾಕಿಕೊಳ್ಳಿ. ಅದಕ್ಕೆ ಎದುರಾಗುವ ಸಂಪನ್ಮೂಲಗಳು, ಅಡತಡೆಗಳು, ನಿರೀಕ್ಷಿತ ಫಲಿತಾಂಶಗಳ ಬಗ್ಗೆ ಪ್ಲಾನ್ ಮಾಡಿ.

ಸಾಧನೆಗಳನ್ನು ಆನಂದಿಸಿ..

2024ರಲ್ಲಿ ನೀವು ಅನುಭವಿಸಿದ ಖುಷಿಯ ಕ್ಷಣ. ನೀವು ಸಾಧಿಸಿದ ಹೆಜ್ಜೆಗುರುತನ್ನು ಸೆಲೆಬ್ರೇಟ್ ಮಾಡಿ. ಇದಿಂದ ಹೊಸ ವರ್ಷಕ್ಕೆ ಕಾಲಿಡಲು ನಿಮಗೆ ಹೊಸ ಎನರ್ಜಿ ಸಿಗಲಿದೆ.

ಇದನ್ನೂ ಓದಿ:New Year ಆಚರಣೆಯ ವಿಶೇಷ ಸಂಗತಿಗಳು.. ಈ ವಿಚಾರಗಳು ನಿಮಗೆ ಗೊತ್ತಾ..?

publive-image

ಕೃತಜ್ಞತಾ ಭಾವ ಇರಲಿ

ಈ ವರ್ಷ ಪಡೆದ ಒಳ್ಳೆಯದು ಹಾಗೂ ಆಶೀರ್ವಾದವನ್ನು ಯಾರಿಗೆ ನೀಡಬೇಕು ಅಂತಾ ಮರು ಚಿಂತನೆ ಮಾಡಿ. ಉತ್ತಮ ಆರೋಗ್ಯ, ನಿಕಟ ಸ್ನೇಹಿತರು, ಉತ್ತಮ ಸಂಗಾತಿ, ಸಾಕು ಪ್ರಾಣಿಗಳು ಸೇರಿದಂತೆ ಯಾರಿಗೆಲ್ಲ ಕೃತಜ್ಞರಾಗಿರಬೇಕು ಅನ್ನೋದು ಇಂದೇ ಯೋಚಿಸಿ.

ಫೋನ್​​ನಲ್ಲಿ ಹೀಗೆ ಮಾಡಿ..

ನಿಮ್ಮ ಫೋನ್​ನಲ್ಲಿ ಇರುವ ಅನಗತ್ಯ ವಿಚಾರಗಳನ್ನು ತೆಗೆದುಹಾಕಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಒಳ್ಳೆಯ ವಿಚಾರಗಳನ್ನು ಉಳಿಸಿಕೊಳ್ಳಿ. ಉತ್ತಮ ಕ್ಷಣಗಳ ಫೋಟೋಗಳನ್ನು ಆಲ್ಬಂ ಮಾಡಿ. ಅದು ಮುಂದಿನ ವರ್ಷದ ಎಂಟ್ರಿಗೆ ಮತ್ತಷ್ಟು ಜೋಶ್ ನೀಡುತ್ತದೆ.

ಆತ್ಮೀಯರೊಂದಿಗೆ ಮಾತನಾಡಿ

ತುಂಬಾ ಪ್ರಿಯರಾಗಿರುವರ ಜೊತೆ ನಿರಂತರ ಸಂಪರ್ಕದಿಂದ ಇರಿ. ಆಪ್ತರೊಂದಿಗೆ ನಿಮಗೆ ಇಷ್ಟ ವಾದುದನ್ನು ಮಾತನಾಡಿ. 2024ರ ಕೊನೆಯ ದಿನವನ್ನು ನೆನಪಿಟ್ಟುಕೊಳ್ಳಲು ಬಳಸಿ. ಅತ್ಯಾಪ್ತರಿಗೆ ಕರೆ ಮಾಡಿ ಒಳ್ಳೆಯದನ್ನು ಹಂಚಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಮೆಸೇಜ್ ಕಳುಹಿಸಿ.

ಇದನ್ನೂ ಓದಿ:ಬಾಸಿಸಂ, ಮ್ಯಾಕ್ಸಿಸಂ ವಾರ್​ಗೆ ತೆರೆ ಎಳೆದ ಕಿಚ್ಚ ​; ಅಭಿಮಾನಿ ಪೋಸ್ಟ್​ ಬಗ್ಗೆ ಸ್ಪಷ್ಟನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment