/newsfirstlive-kannada/media/post_attachments/wp-content/uploads/2025/03/Team-India-vs-NZ.jpg)
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ತಂಡ 252 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ವಿಲ್ ಯಂಗ್ ಮತ್ತು ರಾಚಿನ್ ರವೀಂದ್ರ ಓಪನಿಂಗ್ ಮಾಡಿದ್ರು. ವಿಲ್ ಯಂಗ್ 23 ಎಸೆತಗಳಲ್ಲಿ 2 ಫೋರ್ ಸಮೇತ 15 ರನ್ ಕಲೆ ಹಾಕಿದರು. ರಾಚಿನ್ ರವೀಂದ್ರ 29 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 37 ರನ್ ಸಿಡಿಸಿದರು. ಕೇನ್ ವಿಲಿಯಮ್ಸನ್ ಕೇವಲ 11 ರನ್ಗೆ ಔಟಾದ್ರು.
ಡ್ಯಾರಿಲ್ ಮಿಚೆಲ್ ಅರ್ಧಶತಕ
ಇನ್ನು, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಆಸರೆ ಆಗಿದ್ದು ಡ್ಯಾರಿಲ್ ಮಿಚೆಲ್. ಇವರು ತಾಳ್ಮೆಯ ಆಟವಾಡಿ 101 ಬಾಲ್ನಲ್ಲಿ 3 ಫೋರ್ ಸಮೇತ 63 ರನ್ ಚಚ್ಚಿದರು.
ಮತ್ತೊಂದೆಡೆ ಟಾಮ್ ಲೇಥಮ್ 14, ಗ್ಲೆನ್ ಫಿಲಿಪ್ಸ್ 1 ಸಿಕ್ಸರ್, 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ 8 ರನ್ಗೆ ಔಟಾದ್ರು.
ಬ್ರೇಸ್‌ವೆಲ್ ಸ್ಫೋಟಕ ಆಟ
ಮಿಚೆಲ್ ಬ್ರೇಸ್‌ವೆಲ್ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್ಗಳನ್ನು ಕಾಡಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಇವರು 40 ಎಸೆತಗಳಲ್ಲಿ 2 ಸಿಕ್ಸರ್, 3 ಫೋರ್ ಸಮೇತ 53 ರನ್ ಸಿಡಿಸಿದರು. ನ್ಯೂಜಿಲೆಂಡ್ ತಂಡ 50 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆ ಹಾಕಿದೆ.
ಇದನ್ನೂ ಓದಿ:ರೋಚಕ ಫೈನಲ್ ಪಂದ್ಯ; ನ್ಯೂಜಿಲೆಂಡ್ ವಿರುದ್ಧ ಬಲಿಷ್ಠ ಟೀಮ್ ಇಂಡಿಯಾ ಕಣಕ್ಕೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ