ವಿಶ್ವಕಪ್​​ನಲ್ಲಿ ಧೋನಿನ ರನೌಟ್ ಮಾಡಿದ್ದ ಮಾರ್ಟಿನ್ ಗಪ್ಟಿಲ್ ಕ್ರಿಕೆಟ್​ಗೆ ವಿದಾಯ

author-image
Bheemappa
Updated On
ವಿಶ್ವಕಪ್​​ನಲ್ಲಿ ಧೋನಿನ ರನೌಟ್ ಮಾಡಿದ್ದ ಮಾರ್ಟಿನ್ ಗಪ್ಟಿಲ್ ಕ್ರಿಕೆಟ್​ಗೆ ವಿದಾಯ
Advertisment
  • ಭಾರತೀಯರು ಮರೆಯದ ಪಂದ್ಯ ವಿಶ್ವಕಪ್ ಸೆಮಿಫೈನಲ್ ಮ್ಯಾಚ್
  • ಒಂದೇ ಒಂದು ಎಸೆತದಿಂದ ಭಾರತದ ಫೈನಲ್ ಕನಸು ಕಮರಿತ್ತು
  • ಏಕದಿನ ಪಂದ್ಯದಲ್ಲಿ 2ನೇ ಅತಿ ಹೆಚ್ಚು ರನ್​ ಗಳಿಸಿರುವ ಮಾರ್ಟಿನ್

2019ರ ವಿಶ್ವಕಪ್​ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಎಂಎಸ್​ ಧೋನಿ ಅವರನ್ನ ರನೌಟ್ ಮಾಡಿದ್ದ ನ್ಯೂಜಿಲೆಂಡ್​ ತಂಡ ಪ್ಲೇಯರ್ ಮಾರ್ಟಿನ್ ಗಪ್ಟಿಲ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮಾರ್ಟಿನ್ ಗಪ್ಟಿಲ್ ಅವರು ತಮ್ಮ 38ನೇ ವಯಸ್ಸಿನಲ್ಲಿ ಟಿ20 ಮಾದರಿ ಬಿಟ್ಟು ಉಳಿದ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ.

ನ್ಯೂಜಿಲೆಂಡ್​ ತಂಡದ ಹಿರಿಯ ಆಟಗಾರರಾಗಿರುವ ಮಾರ್ಟಿನ್ ಗಪ್ಟಿಲ್ ಅವರು ಟಿ20 ಒಂದನ್ನು ಬಿಟ್ಟು ಅಂತರರಾಷ್ಟ್ರೀಯ ಏಕದಿನ, ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 2009ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಅಮೋಘ ಸೆಂಚುರಿ ಸಿಡಿಸಿದ್ದ ಗಪ್ಟಿಲ್ 135 ಎಸೆತಗಳಲ್ಲಿ 122 ರನ್​ಗಳನ್ನು ಗಳಿಸಿದ್ದರು. ಇದಾದ ಬಳಿಕ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದರು.

ಇದನ್ನೂ ಓದಿ: ಬೂಮ್ರಾ ಇಂಜುರಿ, ಭಾರತಕ್ಕೆ ದೊಡ್ಡ ಎಫೆಕ್ಟ್​.. ಮ್ಯಾನೇಜ್​ಮೆಂಟ್ ವಿರುದ್ಧ ಮಾಜಿ ಕ್ರಿಕೆಟರ್ ಗರಂ

ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದವರ ಪೈಕಿ ಗಪ್ಟಿಲ್ ದ್ವಿತಿಯ ಸ್ಥಾನದಲ್ಲಿದ್ದಾರೆ. 2015ರಲ್ಲಿ ಏಕದಿನ ಪಂದ್ಯದಲ್ಲಿ ಕೇವಲ 163 ಬಾಲ್​ಗೆ 237 ರನ್​ ಗಳಿಸಿ ರೋಹಿತ್ ಶರ್ಮಾ ನಂತರದ ಸ್ಥಾನ ಪಡೆದಿದ್ದಾರೆ. ರೋಹಿತ್ ಏಕದಿನ ಪಂದ್ಯದಲ್ಲಿ 261 ರನ್​ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

publive-image

ಇವರು ಕೊನೆಯದಾಗಿ 2022ರ ಅಕ್ಟೋಬರ್​ನಲ್ಲಿ ಆಡಿದ್ದರು. ಆ ಬಳಿಕ ಕಿವೀಸ್​ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ತಮ್ಮ 14 ವರ್ಷದ ಕ್ರಿಕೆಟ್​ ಜೀವನಕ್ಕೆ ಸದ್ಯ ಫುಲ್​​ಸ್ಟಾಪ್ ಇಟ್ಟಿದ್ದಾರೆ. 198 ಏಕದಿನ ಪಂದ್ಯಗಳನ್ನ ಆಡಿರುವ ಗಪ್ಟಿಲ್ 7,346 ರನ್​ಗಳನ್ನು ಗಳಿಸಿದ್ದಾರೆ. ಕಿವೀಸ್ ತಂಡದಲ್ಲೇ ಇದುವರೆಗೂ ಟಿ20 ಕ್ರಿಕೆಟ್​ನಲ್ಲಿ ಗಪ್ಟಿಲ್ ಅತಿ ಹೆಚ್ಚು ರನ್ ಗಳಿಸಿದ್ದಾರೆ. 122 ಪಂದ್ಯಗಳಲ್ಲಿ 3,531 ರನ್​ ಬಾರಿಸಿದ್ದಾರೆ. ಇನ್ನು 47 ಟೆಸ್ಟ್​ ಪಂದ್ಯಗಳಲ್ಲಿ 2,586 ರನ್​ಗಳನ್ನು ಗಳಿಸಿದ್ದಾರೆ 2009ರಿಂದ 2016ರ ವರೆಗೆ ಮಾತ್ರ ಇವರು ಟೆಸ್ಟ್​ ಆಡಿದ್ದರು.

ಭಾರತವನ್ನು ಸೋಲಿಸಿದ್ದ ಮಾರ್ಟಿನ್ ಗಪ್ಟಲ್ 

ಮಾರ್ಟಿನ್ ಗಪ್ಟಲ್ ಅವರು 2019ರ ವಿಶ್ವಕಪ್​ ಟೂರ್ನಿಯ ನ್ಯೂಜಿಲೆಂಡ್​ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್​ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದವು. ಈ ವೇಳೆ ಮೊದಲ ಬ್ಯಾಟಿಂಗ್ ಮಾಡಿದ್ದ ಕಿವೀಸ್ 50 ಓವರ್​ಗಳಲ್ಲಿ 240 ರನ್​ಗಳ ಟಾರ್ಗೆಟ್ ನೀಡುತ್ತು. ಈ ಟಾರ್ಗೆಟ್ ಬೆನ್ನು ಹತ್ತಿದ್ದ ಟೀಮ್ ಇಂಡಿಯಾ 215 ರನ್​ ಗಳಿಸಿರುವಾಗ ಕ್ರೀಸ್​ನಲ್ಲಿ ಧೋನಿ, ಭುವನೇಶ್ವರ್ ಆಡುತ್ತಿದ್ದರು. ಭಾರತ ಗೆಲ್ಲಲು 10 ಬಾಲ್​ಗೆ 25 ರನ್​ ಬೇಕಿದ್ದವು. ಇನ್ನು 3 ವಿಕೆಟ್​ಗಳಿದ್ದವು.

ಆದರೆ ಈ ವೇಳೆ ಧೋನಿ ಹೊಡೆದ ಬಾಲ್ ಲೆಗ್​ಸೈಡ್​ ಸ್ಲಿಪ್​ನಲ್ಲಿ ಸ್ವಲ್ಪ ದೂರ ಹೋಗಿತ್ತು. ಆಗ ಎರಡು ರನ್​ಗಾಗಿ ಧೋನಿ, ಭುವನೇಶ್ವರ್ ಓಡುತ್ತಿರುವಾಗ, ಗಪ್ಟಿಲ್ ಅಷ್ಟೇ ವೇಗದಲ್ಲಿ ಬಂದು ಬಾಲ್ ಅನ್ನು ನೇರವಾಗಿ ವಿಕೆಟ್​ಗೆ ಎಸೆದರು. ಇದರಿಂದ ಧೋನಿ ಔಟ್ ಆಗಿ ಹೊರ ನಡೆದರು. ಗಪ್ಟಲ್ ಅವರ ಈ ಒಂದು ಎಸೆತದಿಂದ ಭಾರತ ಸೆಮಿಫೈನಲ್​ ಪಂದ್ಯದಲ್ಲಿ 18 ರನ್​ಗಳಿಂದ ಸೋಲುಂಡಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment