ನೀಲಿ ಅಣಬೆಗಳ ಸಂರಕ್ಷಣೆಗೆ ಮುಂದಾದ ಅಧಿಕಾರಿಗಳು
ನೀಲಿ ಅಣಬೆಗಳಲ್ಲಿ ಕೆಲವು ತುಂಬಾ ವಿಷಕಾರಿ ಆಗಿವೆಯಂತೆ
ವೈವಿಧ್ಯತೆಗೆ ಹೆಸರುವಾಸಿ ಆಗಿರುವ ಕಾಘಜನಗರ ಅರಣ್ಯ
ತೆಲಂಗಾಣದ ಕಾಘಜ್ನಗರ (Kaghaznagar) ಅರಣ್ಯ ಪ್ರದೇಶದಲ್ಲಿ ಅಪರೂಪದ ನೀಲಿ ಅಣಬೆಗಳು (Blue mushroom: Entoloma hochstetteri) ಪತ್ತೆಯಾಗಿವೆ. ಬ್ಲೂ ಮಶ್ರೂಮ್ ನ್ಯೂಜಿಲೆಂಡ್ನಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ. ಬಹಳ ವರ್ಷಗಳ ಬಳಿಕ ಈ ನೀಲಿ ಅಣಬೆ ಭಾರತದಲ್ಲಿ ಪತ್ತೆಯಾಗಿರೋದು ಅಚ್ಚರಿಗೆ ಕಾರಣವಾಗಿದೆ.
ಅರಣ್ಯಾಧಿಕಾರಿ ವಿಜಯ್ ಈ ಬಗ್ಗೆ ಪ್ರತಿಕ್ರಿಯಿಸಿ, ಬೆಂಪಳ್ಳಿ ಅರಣ್ಯದಲ್ಲಿ ಅಪರೂಪದ ಅಣಬೆಗಳು ಕಂಡಿವೆ. ಮುಂಗಾರು ಮಳೆ ಶುರುವಾಗುತ್ತಿದ್ದಂತೆ ಭೂಮಿಯಿಂದ ಅಣಬೆಗಳು ಏಳುತ್ತವೆ. ಅಂತೆಯೇ, ಈ ಭಾಗದ ಅರಣ್ಯದಲ್ಲಿ ಬ್ಲೂ ಮಶ್ರೂಮ್ ಎದ್ದಿರೋದನ್ನು ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.
ನೀಲಿ ಅಣಬೆಗಳು ವಿಷಕಾರಿ
ಛತ್ರಿ ಆಕಾರದಲ್ಲಿ ಮೊಳಕೆ ಒಡೆದಿರುವ ಅಣಬೆಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ನಡೆದಿದೆ. ಭಾರತದಲ್ಲಿ ಮೊದಲ ಬಾರಿಗೆ 1989ರಲ್ಲಿ ಈ ಅಣಬೆಗಳನ್ನು ಪತ್ತೆ ಹಚ್ಚಲಾಗಿತ್ತು. ಒಡಿಶಾದ ಅರಣ್ಯ ಪ್ರದೇಶದಲ್ಲಿ ಪತ್ತೆ ಆಗಿದ್ದವು. ಇವುಗಳು ನ್ಯೂಜಿಲೆಂಡ್ನಲ್ಲಿ ಹೆಚ್ಚಾಗಿದ್ದು, ವಿವಿಧ ಪ್ರಭೇದದ ಅಣಬೆಗಳು ಅಲ್ಲಿ ಕಾಣಲು ಸಿಗುತ್ತವೆ. ನೀಲಿ ಬಣ್ಣದ ಕೆಲವು ಅಣಬೆಗಳು ವಿಷಕಾರಿಯಾಗಿದ್ದು, ಇಲ್ಲಿ ಪತ್ತೆಯಾಗಿರುವ ಅಣಬೆಯಲ್ಲಿ ವಿಷ ಅಡಗಿದ್ಯಾ ಅನ್ನೋದು ಇನ್ನೂ ತಿಳಿದುಬಂದಿಲ್ಲ.
ಕಾಘಜ್ನಗರ ಅರಣ್ಯ ಪ್ರದೇಶವು ವೈವಿಧ್ಯಮಯಕ್ಕೆ ಹೆಸರುವಾಸಿಯಾಗಿದೆ. 2022 ಜನವರಿಯಲ್ಲಿ Indian Muntjac (ಕುರಿ) ಪತ್ತೆಯಾಗಿತ್ತು. ಬರೋಬ್ಬರಿ 25 ವರ್ಷಗಳ ಬಳಿಕ ಬರ್ಕಿಂಗ್ ಡೀರ್ ಪತ್ತೆಯಾಗಿತ್ತು. ಡಿಸೆಂಬರ್ 2022ರ ಚಳಿಗಾಲದ ಸಂದರ್ಭದಲ್ಲಿ ಆಗ್ನೇಯ ಯೂರೋಪ್ ಮತ್ತು ಇರಾನ್ನಲ್ಲಿ ಕಾಣಸಿಗುವ ಕಪ್ಪು ತಲೆಯ ಬಂಟಿಂಗ್ ಬರ್ಡ್ ವಲಸೆ ಬಂದಿದ್ದವು.
2016 ಸೆಪ್ಟೆಂಬರ್ನಲ್ಲಿ ಅಪರೂಪದ ಪೇಂಟೆಡ್ ಫ್ರಾಗ್ (Uperodon taprobanicus) ಪತ್ತೆಯಾಗಿತ್ತು. ಬೆಜ್ಜೂರು ಅರಣ್ಯ ಪ್ರದೇಶದ ಮರವೊಂದರ ಮೇಲೆ ಈ ಅಪರೂಪದ ಕಪ್ಪೆ ಪತ್ತೆಯಾಗಿತ್ತು. ಇದು ಆ ಅರಣ್ಯ ಪ್ರದೇಶದ ವೈವಿದ್ಯತೆಯ ಶ್ರೀಮಂತಿಕೆಯನ್ನು ಹೆಚ್ಚಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ