/newsfirstlive-kannada/media/post_attachments/wp-content/uploads/2025/01/Kohli_Kane-williamson.jpg)
ಮುಂದಿನ ತಿಂಗಳು ನಡೆಯಲಿರೋ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಹೇಗಾದ್ರೂ ಮಾಡಿ ಈ ಮೆಗಾ ಟ್ರೋಫಿ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಸೇರಿ ಎಲ್ಲಾ ದೇಶಗಳು ಮಾಸ್ಟರ್ ಪ್ಲಾನ್ ಮಾಡಿಕೊಂಡಿವೆ. ಇದರ ಮಧ್ಯೆ ನ್ಯೂಜಿಲೆಂಡ್ ಕ್ರಿಕೆಟ್ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಬರೋಬ್ಬರಿ 8 ವರ್ಷಗಳ ನಂತರ ಮೆಗಾ ಟೂರ್ನಿಯಲ್ಲಿ ಮಿಂಚಲು ನ್ಯೂಜಿಲೆಂಡ್ ಸಜ್ಜಾಗಿದೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಕೇವಲ ಅನುಭವಿ ಆಟಗಾರರಿಗೆ ಮಾತ್ರವಲ್ಲ ಯುವಕರಿಗೆ ಮಣೆ ಹಾಕಲಾಗಿದೆ. ನ್ಯೂಜಿಲೆಂಡ್ ತಂಡವನ್ನು ಸ್ಟಾರ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಲೀಡ್ ಮಾಡಲಿದ್ದಾರೆ.
ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಬೆಂಚ್ ಕಾದಿದ್ದ ಬೆನ್ ಸಿಯರ್ಸ್ ಕಮ್ಬ್ಯಾಕ್ ಮಾಡಿದ್ದಾರೆ. ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ನಾಥನ್ ಸ್ಮಿತ್ ರೀತಿಯ ಹಿರಿಯ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ಕ್ಯಾಪ್ಟನ್
ನ್ಯೂಜಿಲೆಂಡ್ ತಂಡಕ್ಕೆ ಇತ್ತೀಚೆಗಷ್ಟೇ ವೈಟ್-ಬಾಲ್ ಕ್ಯಾಪ್ಟನ್ ಆಗಿ ಮಿಚೆಲ್ ಸ್ಯಾಂಟ್ನರ್ ನೇಮಕ ಆಗಿದ್ರು. ಮಿಚೆಲ್ ಸ್ಯಾಂಟ್ನರ್ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವನ್ನು ಐಸಿಸಿ ಟೂರ್ನಿಯಲ್ಲಿ ಲೀಡ್ ಮಾಡುತ್ತಿರುವುದು ವಿಶೇಷ. ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಕೂಡ ತಂಡದ ಭಾಗವಾಗಿದ್ದಾರೆ.
ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ಡಿವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಬೆನ್ ಸಿಯರ್ಸ್, ವಿಲ್ ಒಬ್ರಿಯೆನ್.
ಇದನ್ನೂ ಓದಿ:ಟೀಮ್ ಇಂಡಿಯಾಗೆ ದೊಡ್ಡ ಆಘಾತ; ಮಾಸ್ಟರ್ ಸ್ಟ್ರೋಕ್ ಕೊಟ್ಟ ಸ್ಟಾರ್ ವೇಗಿ ಬುಮ್ರಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ