/newsfirstlive-kannada/media/post_attachments/wp-content/uploads/2024/11/IND-vs-NZ-Tim.jpg)
ನ್ಯೂಜಿಲೆಂಡ್ ತಂಡದ ಮಾಜಿ ಕ್ಯಾಪ್ಟನ್ ರೈಟ್ ಹ್ಯಾಂಡ್ ಸ್ಟಾರ್ ಬೌಲರ್ ಟಿಮ್ ಸೌಥಿ. ಇವರು ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದಾರೆ. ತವರಿನಲ್ಲಿ ನಡೆಯಲಿರೋ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಂತರ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಕೊನೆಗೊಳಿಸುವೆ ಎಂದಿದ್ದಾರೆ.
ನವೆಂಬರ್ 28ನೇ ತಾರೀಕಿನಿಂದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಟಿಮ್ ಸೌಥಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಡಿಸೆಂಬರ್ 14ಕ್ಕೆ ಆಡಲಿದ್ದಾರೆ. ಕೊನೆಯ ಟೆಸ್ಟ್ ಪಂದ್ಯ ಡಿಸೆಂಬರ್ 14-18ರ ನಡುವೆ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ನಡೆಯಲಿದೆ.
ಟಿಮ್ ಸೌಥಿ ಕ್ರಿಕೆಟ್ ಸಾಧನೆ
ಇನ್ನು, ಸ್ಟಾರ್ ಬೌಲರ್ ಟಿಮ್ ಸೌಥಿ ತಮ್ಮ ಕ್ರಿಕೆಟ್ ಕರಿಯರ್ನಲ್ಲೇ ಒಟ್ಟು 1124 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ತಂಡದ ಪರ 104 ಟೆಸ್ಟ್ ಪಂದ್ಯ ಆಡಿದ್ದು, 385 ವಿಕೆಟ್ ತೆಗೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕಿವೀಸ್ ಪರ ಅತಿಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಟಿಮ್ ಸೌಥಿ 104 ಟೆಸ್ಟ್, 161 ಏಕದಿನ ಮತ್ತು 125 ಟಿ20 ಪಂದ್ಯ ಆಡಿದ್ದಾರೆ. ಮೂರು ಮಾದರಿ ಕ್ರಿಕೆಟ್ನಲ್ಲೂ 770 ವಿಕೆಟ್ ಪಡೆದಿದ್ದಾರೆ.
ಮೂರು ಮಾದರಿಯಲ್ಲೂ ಅಮೋಘ ಪ್ರದರ್ಶನ
ಟಿಮ್ ಸೌಥಿ ಕಿವೀಸ್ ಪರ 3 ಮಾದರಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕೇವಲ ಒಂದು ಸೀರೀಸ್ ಮಾತ್ರ ಆಡಲಿದ್ದಾರೆ. ಒಂದು ವೇಳೆ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ಗೆ ಹೋದರೆ ಜೂನ್ನಲ್ಲಿ ನಡೆಯಲಿರೋ ಕೊನೆ ಪಂದ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ಮೋದಿಯೇ ಸ್ಫೂರ್ತಿ, ನಾವು ವಾರಕ್ಕೆ 70 ಗಂಟೆ ಕೆಲಸ ಮಾಡಲೇಬೇಕು’- ಇನ್ಫೋಸಿಸ್ ನಾರಾಯಣ ಮೂರ್ತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ