ಟೀಮ್ ಇಂಡಿಯಾದಲ್ಲಿ ಯಾರು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ವಾ?
ಡಕೌಟ್ ಆದ ಭಾರತ ತಂಡದ ಓಪನರ್, ನಾಯಕಿಯು ಆಡಲಿಲ್ಲ
ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿರುವ ನ್ಯೂಜಿಲೆಂಡ್
ಭಾರತದ ಮಹಿಳಾ ತಂಡದ ಜೊತೆಗಿನ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡ 76 ರನ್ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿವೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 50 ಓವರ್ಗಳ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ಸ್ ಆಗಿ ಕ್ರೀಸ್ಗೆ ಆಗಮಿಸಿದ ಸುಜಿ ಬೇಟ್ಸ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ ಉತ್ತಮ ಆರಂಭವನ್ನು ನೀಡಿದರು. ಸುಜಿ 58, ಜಾರ್ಜಿಯಾ 41 ರನ್ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇದರ ಜೊತೆಗೆ ಕ್ಯಾಪ್ಟನ್ ಸೋಫಿ ಡಿವೈನ್ 79, ಗ್ರೀನ್ 42 ರನ್ಗಳ ಕೊಡುಗೆಯಿಂದ ಕಿವೀಸ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ಗಳ ಟಾರ್ಗೆಟ್ ನೀಡಿದರು.
ಇದನ್ನೂ ಓದಿ: PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ
ಈ ಗುರಿ ಬೆನ್ನಟ್ಟಿದ ಭಾರತದ ಮಹಿಳಾ ತಂಡ ಆರಂಭದಲ್ಲಿ ದೊಡ್ಡ ಆಘಾತಕ್ಕೆ ಒಳಗಾಯಿತು. ಸ್ಮೃತಿ ಮಂಧಾನ ಡಕೌಟ್ ಆದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಯಿತು. ಇದರ ಬಳಿಕ ಶಫಾಲಿ ವರ್ಮಾ ಕೂಡ 11 ರನ್ಗೆ ಔಟ್ ಆದರು. ಇವರ ನಂತರ ಯಾಸ್ತಿಕಾ ಭಾಟಿಯಾ 12, ಕ್ಯಾಪ್ಟನ್ ಕೌರ್ 24, ಜೆಮಿಮಾ ರಾಡ್ರಿಗಸ್ 17 ಹೀಗೆ ಸಾಲು ಸಾಲಾಗಿ ಔಟ್ ಆಗುತ್ತ ಹೋದರು. ಹೀಗಾಗಿ ಟೀಮ್ ಇಂಡಿಯಾ 47 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 183 ರನ್ಗಳನ್ನ ಮಾತ್ರ ಗಳಿಸಿತು. ಇದರಿಂದ ನ್ಯೂಜಿಲೆಂಡ್ 76 ರನ್ಗಳಿಂದ ವಿಜಯ ಸಾಧಿಸಿ, ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ಇದನ್ನೂ ಓದಿ: ಚಾಂಪಿಯನ್ ತಂಡದ ಕ್ಯಾಪ್ಟನ್ಗೆ RCB ಗಾಳ.. ಶ್ರೇಯಸ್ ಅಯ್ಯರ್ ಖರೀದಿ ಮಾಡುತ್ತಾ ಫ್ರಾಂಚೈಸಿ?
ಇನ್ನೂ ಭಾರತದ ಪರ ರಾಧ ಯಾದವ್ ಅವರು 69 ರನ್ಗಳನ್ನ ನೀಡಿ 4 ವಿಕೆಟ್ಗಳನ್ನ ಪಡೆದರು. ದೀಪ್ತಿ ಶರ್ಮಾ 2 ವಿಕೆಟ್ ಪಡೆದರು. ನ್ಯೂಜಿಲೆಂಡ್ ಪರವಾಗಿ ಕೆರ್, ಈಡನ್ ಕಾರ್ಸನ್ ತಲಾ ಎರಡೇರಡು ವಿಕೆಟ್ ಪಡೆದರು. ಕ್ಯಾಪ್ಟನ್ ಸೋಫಿ, ಲೀ ತಹುಹು ತಲಾ ಮೂರು ವಿಕೆಟ್ ಕಬಳಿಸಿ ತಂಡವನ್ನ ಬೇಗ ದಡ ಸೇರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ