IND vs NZ; ಕಿವೀಸ್​​ಗೆ 25 ರನ್​ಗಳ ಗೆಲುವು.. ಟೀಮ್ ಇಂಡಿಯಾ ವೈಟ್ ವಾಶ್

author-image
Bheemappa
Updated On
147 ರನ್​ ಟಾರ್ಗೆಟ್​ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!
Advertisment
  • ಮೂರನೇ ಟೆಸ್ಟ್​ನಲ್ಲಿ ಯಾವ ತಂಡದ ಬ್ಯಾಟರ್ ಸೆಂಚುರಿ ಸಿಡಿಸಲಿಲ್ಲ
  • ಸ್ಪಿನ್ನರ್​ಗಳ ಮುಂದೆ ಮಂಡಿಯೂರಿದ ಎರಡು ತಂಡದ ಬ್ಯಾಟ್ಸ್​ಮನ್ಸ್
  • ಅಲ್ಪ ಮೊತ್ತದ ಟಾರ್ಗೆಟ್​ ಮುಟ್ಟಲು ಹರಸಾಹಸ, ಭಾರತಕ್ಕೆ ಸೋಲು

ನ್ಯೂಜಿಲೆಂಡ್ ವಿರುದ್ಧದ ಕೊನೆ ಹಾಗೂ 3ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ 25 ರನ್​ಗಳಿಂದ ಸೋಲನುಭವಿಸಿದೆ. ಈ ಮೂಲಕ ಕಿವೀಸ್ ನಾಯಕ ಟಾಮ್ ಲಾಥಮ್ ತಂಡ ಸರಣಿಯನ್ನು 3-0 ದಿಂದ ಕ್ಲೀನ್ ಸ್ವೀಪ್ ಮಾಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್​ನ​ಲ್ಲಿ ಕಿವೀಸ್​ ನಾಯಕ ಲಾಥಮ್ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 235 ರನ್​ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 263 ರನ್​ಗಳಿಗೆ ಆಲೌಟ್ ಆಗಿತ್ತು. ಆದರೆ ಇನ್ನಿಂಗ್ಸ್​ನಲ್ಲಿ 28 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.

ಎರಡನೇ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ತಂಡದ ಬ್ಯಾಟರ್ಸ್​ ಬಹುಬೇಗನೇ ಆಟ ಮುಗಿಸಿದ್ದರು. ಭಾರತ ಪರ ಆರ್​.ಅಶ್ವಿನ್ ಹಾಗೂ ಜಡೇಜಾ ಅವರ ಆಕ್ರಮಣಕಾರಿ ಸ್ಪಿನ್ ಮುಂದೆ ಕಿವೀಸ್ ಪ್ಲೇಯರ್ಸ್​ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟರು. ಹೀಗಾಗಿ 2ನೇ ಇನ್ನಿಂಗ್ಸ್​ನಲ್ಲಿ ಕಿವೀಸ್​ ಕೇವಲ 174 ರನ್​ಗೆ ಎಲ್ಲ ವಿಕೆಟ್​ಗಳನ್ನ ಕಳೆದುಕೊಂಡಿತ್ತು. ಇದರಿಂದಾಗಿ 148 ರನ್​ಗಳ ಸಾಧರಣ ಮೊತ್ತದ ಟಾರ್ಗೆಟ್​ ಅನ್ನು ನ್ಯೂಜಿಲೆಂಡ್ ಭಾರತಕ್ಕೆ ನೀಡಿತ್ತು.

ಇದನ್ನೂ ಓದಿ:ನಿರ್ದೇಶಕ ಗುರುಪ್ರಸಾದ್ ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು..?

publive-image

ಈ ಗುರಿ ಬೆನ್ನತ್ತಿದ್ದ ರೋಹಿತ್ ಶರ್ಮಾ ಪಡೆ ಅಲ್ಪ ಮೊತ್ತಕ್ಕೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದೆ. ಓಪನರ್ಸ್​ ಜೈಸ್ವಾಲ್ 5, ರೋಹಿತ್ ಶರ್ಮಾ 11 ರನ್​ಗೆ ಪೆವಿಲಿಯನ್ ಸೇರಿದ್ದರು. ಬಳಿಕ ಕ್ರೀಸ್​ಗೆ ಬಂದ ಶುಭ್​ಮನ್ ಗಿಲ್ 1, ವಿರಾಟ್​ ಕೊಹ್ಲಿ 1, ಸರ್ಫರಾಜ್ 1 ರನ್​ಗೆ ಔಟ್ ಆಗಿರುವುದು ಭಾರತವನ್ನ ಸಂಕಷ್ಟಕ್ಕೆ ದೂಡಿತ್ತು. 2ನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 121 ರನ್​ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಸೋಲೋಪ್ಪಿಕೊಂಡಿದೆ.

ಇದನ್ನೂ ಓದಿ: IND vs NZ; ಟೀಮ್ ಇಂಡಿಯಾಕ್ಕೆ ತೀವ್ರ ಸಂಕಷ್ಟ.. ಕೊಹ್ಲಿ, ಗಿಲ್, ಸರ್ಫರಾಜ್ ಕೇವಲ 1 ರನ್​ಗೆ ಔಟ್

ರಿಷಬ್ ಪಂತ್ ಅವರು ಹಾಫ್​ಸೆಂಚುರಿ ಬಿಟ್ಟರೇ ಉಳಿದವರು ಯಾರೂ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ಭಾರತ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 121 ರನ್​ಗಳನ್ನು ಮಾತ್ರ ಗಳಿಸಿ, 25 ರನ್​ಗಳಿಂದ ಸೋಲೋಪ್ಪಿಕೊಂಡಿದೆ. ಇದರಿಂದ ಭಾರತ ಪ್ರವಾಸದಲ್ಲಿದ್ದ ನ್ಯೂಜಿಲೆಂಡ್ ಪಡೆ 3 ಟೆಸ್ಟ್​​ಗಳನ್ನು ಗೆದ್ದು ಕ್ಲೀನ್ ಸ್ವಿಪ್ ಮಾಡಿ ಇತಿಹಾಸ ಸೃಷ್ಟಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment