ಕಿವೀಸ್ ಎದುರಾದ್ರೆ ನರ್ವಸ್​.. ಭಾರತಕ್ಕೆ ಬದ್ಧವೈರಿ ನ್ಯೂಜಿಲೆಂಡ್, ಎಷ್ಟು ಪಂದ್ಯ ಸೋಲಿಸಿದೆ ಗೊತ್ತಾ?​

author-image
Bheemappa
Updated On
ವೀರ ಯೋಧರಿಗೆ ಸಲಾಂ ಎಂದ ಕ್ರಿಕೆಟಿಗರು.. ಕೊಹ್ಲಿ, KL ರಾಹುಲ್ ಸೇರಿ ಸ್ಟಾರ್ ಆಟಗಾರರು ಏನಂದ್ರು?
Advertisment
  • ಇಲ್ಲಿವರೆಗೆ ಎಷ್ಟು ಸಲ ಕಿವೀಸ್​, ಭಾರತ ತಂಡನ ಮನೆಗೆ ಕಳಿಸಿದೆ?
  • ಪ್ರತಿ ಟೂರ್ನಿಗಳಲ್ಲಿ ಭಾರತವನ್ನು ಕಾಡುವ ನ್ಯೂಜಿಲೆಂಡ್​ ಟೀಮ್
  • ಧೋನಿ, ವಿರಾಟ್​ ಕೊಹ್ಲಿಗೂ ಚೆಳ್ಳೆಹಣ್ಣು ತಿನ್ನಿಸಿದ್ದ ನ್ಯೂಜಿಲೆಂಡ್​

ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಮುಂದಿರೋದು, ಸದ್ಯ ಎರಡೇ 2 ಸವಾಲ್. ಒಂದು ಕಿವೀಸ್, ಮತ್ತೊಂದು ಸೆಮೀಸ್. ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾಕ್ಕೆ ನ್ಯೂಜಿಲೆಂಡ್ ತಂಡ, ವಿಲನ್ ಆಗಿ ಕಾಡಿದೆ. ಹಾಗಾಗಿ ರೋಹಿತ್ ಪಡೆ ನಾಕೌಟ್​​​ ಮ್ಯಾಚ್​​ಗೂ ಮುನ್ನ, ಕಿವೀಸ್​​ಗೆ ಕಿಕ್ ಕೊಡೋಕೆ ರೆಡಿ ಆಗಿದೆ. ಆದ್ರೆ ಅದು ಅಷ್ಟು ಸುಲಭಾನಾ?.

ದುಬೈನಲ್ಲಿ ಬದ್ಧವೈರಿ ಪಾಕ್ ತಂಡವನ್ನ ಬಗ್ಗುಬಡಿದ ಟೀಮ್ ಇಂಡಿಯಾಕ್ಕೆ, ಇದೀಗ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. 25 ವರ್ಷಗಳ ದ್ವೇಷ, ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪಾಲಿನ ವಿಲನ್. ಸೈಲೆಂಟ್​ ಆಗೇ ಯುದ್ಧ ಗೆಲ್ಲುವ ನ್ಯೂಜಿಲೆಂಡ್, ಚಾಂಪಿಯನ್ಸ್​ ಟ್ರೋಫಿಯಲ್ಲಿ ಮೆನ್-ಇನ್​-ಬ್ಲೂ ಪಡೆಗೆ, ಮತ್ತೆ ಶಾಕ್ ಕೊಡಲು ರೆಡಿಯಾಗಿದೆ.

publive-image

2021, ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಸೋಲು

ಇಂಗ್ಲೆಂಡ್​​ನ ಸೌತ್​ಹ್ಯಾಂಪ್ಟನ್​​ನಲ್ಲಿ ನಡೆದ ಚೊಚ್ಚಲ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ ನ್ಯೂಜಿಲೆಂಡ್, ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾವನ್ನ 8 ವಿಕೆಟ್​​ಗಳಿಂದ ಸೋಲಿಸಿತ್ತು.

2019, ಏಕದಿನ ವಿಶ್ವಕಪ್​​ ಸೆಮಿಫೈನಲ್​​​​​​​ ಸೋಲು

ಮ್ಯಾಂಚೆಸ್ಟರ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್​​ನಲ್ಲಿ ಟೀಮ್ ಇಂಡಿಯಾ, 18 ರನ್​ಗಳಿಂದ ಕಿವೀಸ್​​ಗೆ ಶರಣಾಗಿತ್ತು. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು.

2021, T20 ವಿಶ್ವಕಪ್​ ಗ್ರೂಪ್​​ ಸ್ಟೇಜ್​ನಲ್ಲಿ ಸೋಲು

2021ರ ಟಿ20 ವಿಶ್ವಕಪ್​ನಲ್ಲಿ ದುಬೈ ಇಂಟರ್​​ ನ್ಯಾಷನಲ್ ಸ್ಟೇಡಿಯಮ್​ನಲ್ಲಿ ಟೀಮ್ ಇಂಡಿಯಾ, ಗ್ರೂಪ್​​ ಸ್ಟೇಜ್​​ನಲ್ಲೇ ಟೂರ್ನಿಯಿಂದ ನಿರ್ಗಮಿಸಿತು. ಬ್ಲ್ಯಾಕ್​​ ಕ್ಯಾಪ್ಸ್​ ಆರ್ಭಟಕ್ಕೆ ಬೆಚ್ಚಿಬಿದ್ದ ವಿರಾಟ್ ಕೊಹ್ಲಿ ಪಡೆ, 8 ವಿಕೆಟ್​​ಗಳ ಹೀನಾಯ ಸೋಲು ಅನುಭವಿಸಿತು.

2016 ಮತ್ತು 2007 T20 ವರ್ಲ್ಡ್​ಕಪ್​ನಲ್ಲಿ ಸೋಲು

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಎರಡು ಟಿ-ಟ್ವೆಂಟಿ ವಿಶ್ವಕಪ್​​ಗಳಲ್ಲಿ ಕಿವೀಸ್​​ ವಿರುದ್ಧ ಸೋಲು ಅನುಭವಿಸಿದೆ. 2016 ನಾಗ್ಪುರದಲ್ಲಿ ನಡೆದ ಸೂಪರ್ 10 ಸ್ಟೇಜ್ ಮತ್ತು 2007ರಲ್ಲಿ ಜೋಹಾನ್ಸ್​ಬರ್ಗ್​ನಲ್ಲಿ ನಡೆದ ಗ್ರೂಪ್​ ಸ್ಟೇಜ್​​ನಲ್ಲಿ ಧೋನಿ ಬಾಯ್ಸ್​, ಕಿವೀಸ್ ವಿರುದ್ಧ ಕಂಗಾಲ್ ಆಗಿದ್ದರು.

ನೈರೋಬಿ, ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲು

ಕೀನ್ಯಾದ ನೈರೋಬಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್​​ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್​ ವಿರುದ್ಧ 4 ವಿಕೆಟ್​ಗಳ ಸೋಲು ಅನುಭವಿಸಿತು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. 

ಇದನ್ನೂ ಓದಿ:ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡೋದು ಡೌಟ್; ಬದಲಿ ಆಟಗಾರ ಯಾರು?

publive-image

ಒಟ್ಟು 16 ಐಸಿಸಿ ಟೂರ್ನಿಗಳಲ್ಲಿ ಮುಖಾಮುಖಿ

  • 11 ಬಾರಿ ಏಕದಿನ ವಿಶ್ವಕಪ್​ ಪಂದ್ಯಗಳಲ್ಲಿ ಸೋಲು
  • 3 ಬಾರಿ T20 ವಿಶ್ವಕಪ್ ಪಂದ್ಯಗಳಲ್ಲಿ ಸೋಲು
  • 1 ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲು
  • 1 ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಸೋಲು

ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯಾ ಮಾತ್ರ ವಿಲನ್ ಅಲ್ಲ, ನ್ಯೂಜಿಲೆಂಡ್ ಸಹ ಭಾರತ ಬದ್ಧವೈರಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment