/newsfirstlive-kannada/media/post_attachments/wp-content/uploads/2024/09/mangalore-Road-Accident.jpg)
ಮಂಗಳೂರು: ರಸ್ತೆ ಅಪಘಾತದಲ್ಲಿ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ತಲಪಾಡಿಯಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ನವವಿವಾಹಿತೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ರೆ, ಕಾರಿನಲ್ಲಿದ್ದ ಪತಿಯ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ದರ್ಶನ್ ರೀತಿ ಮದುವೆ ಆದ್ರೆ ತಪ್ಪೇನು? ಗಂಡನ ಡಿಮ್ಯಾಂಡ್‌ಗೆ ಹೆಂಡತಿ ಸಾವಿಗೆ ಶರಣು; ಆಗಿದ್ದೇನು?
ಕಳೆದ ಸೆಪ್ಟೆಂಬರ್ 5ರಂದು ಅನಿಶ್ ಕೃಷ್ಣ, ಮಾನಸ ಜೋಡಿ ದೇಂತಡ್ಕ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ನವದಂಪತಿ ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಹಾರಿ KSRTC ಬಸ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಕಾರಿನ ಬಳಿ ಓಡೋಡಿ ಬಂದ ಸ್ಥಳೀಯರು ನವದಂಪತಿ ನಜ್ಜುಗುಜ್ಜಾಗಿರೋದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ಸೈನೈಡ್ ಮಲ್ಲಿಕಾ ಅಕ್ಕ-ತಂಗಿಯರಾ ಇವ್ರು.. ಆಂಧ್ರದಲ್ಲಿ ನಾಲ್ವರ ಹ*ತ್ಯೆ; ಕಾಂಬೋಡಿಯಾಗೆ ಎಸ್ಕೇಪ್!
ನವದಂಪತಿ ಮದುವೆ ಕಾರ್ಯಕ್ರಮದ ವಿಚಾರವಾಗಿ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದರು. ವಾಪಸ್ ಮನೆಗೆ ಹೋಗುವ ವೇಳೆ ಈ ದುರಂತ ಘಟನೆ ನಡೆದಿದೆ.
ಅನಿಶ್ ಕೃಷ್ಣ ಅವರು ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ. ಗಂಡ, ಹೆಂಡತಿ ಇಬ್ಬರು ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಾರು ಅಪಘಾತದಲ್ಲಿ ಅನಿಶ್ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ