/newsfirstlive-kannada/media/post_attachments/wp-content/uploads/2025/07/BIHAR_WIFE_HUSBAND_NEW.jpg)
ಮೇಘಾಲಯದ ಹನಿಮೂನ್ ಮರ್ಡರ್ ಮಾದರಿಯಲ್ಲೇ ಬಿಹಾರದಲ್ಲಿ ಮತ್ತೊಂದು ಜೀವ ತೆಗೆಯಲಾಗಿದೆ. ಮದುವೆಯಾದ 45 ದಿನಕ್ಕೆ ಪತ್ನಿಯೇ ಗಂಡನನ್ನ ಮುಗಿಸಿದ್ದಾಳೆ. 25 ವರ್ಷದ ಯುವಕ ಪತ್ನಿಯಿಂದಲೇ ದುರಂತ ಅಂತ್ಯ ಕಂಡಿದ್ದಾನೆ. ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಮೇಘಾಲಯದ ಹನಿಮೂನ್ ಮರ್ಡರ್ ಮಾದರಿಯಲ್ಲೇ ಇದೆ.
ಗುಂಜಾ ದೇವಿ ಎಂಬ ಮಹಿಳೆಗೆ ಔರಂಗಾಬಾದ್ ಜಿಲ್ಲೆಯ ಪ್ರಿಯಾಂಶು ಜೊತೆ ವಿವಾಹವಾಗಿತ್ತು. ಆದರೇ, ಬಲವಂತವಾಗಿ ಈಕೆಯನ್ನು ಪ್ರಿಯಾಂಶು ಜೊತೆ ವಿವಾಹ ಮಾಡಲಾಗಿತ್ತು. ಗುಂಜಾದೇವಿ, ತನ್ನ ಸೋದರ ಮಾವ ಜೀವನ್ ಸಿಂಗ್ ಜೊತೆ ಅಕ್ರಮ ಸಂಬಂಧ ಇತ್ತು. ಆದರೇ, ತಂದೆ, ತಾಯಿಯ ಬಲವಂತಕ್ಕೆ ಪ್ರಿಯಾಂಶುವನ್ನು ಮದುವೆಯಾಗಿದ್ದಳು. ಆದರೇ ಮದುವೆಯಾದ 45 ದಿನದಲ್ಲೇ ಪತಿಯ ಪ್ರಾಣ ಪಕ್ಷಿ ಹಾರಿ ಹೋಗುವಂತೆ ಮಾಡಿದ್ದಾಳೆ. 20ರ ವಯಸ್ಸಿನ ಗುಂಜಾ ದೇವಿ, ತನ್ನ ಸೋದರ ಮಾವ ಜೀವನ ಸಿಂಗ್ ಜೊತೆ ಸೇರಿ ಇಬ್ಬರು ಶಾರ್ಪ್ ಶೂಟರ್​ಗಳಿಗೆ ದುಡ್ಡು ಕೊಟ್ಟು ಯುವಕನ ಜೀವ ತೆಗೆದಿದ್ದಾರೆ.
/newsfirstlive-kannada/media/post_attachments/wp-content/uploads/2025/07/BIHAR_WIFE_HUSBAND.jpg)
ಜೂನ್ 25 ರಂದು ಪ್ರಿಯಾಂಶು ತನ್ನ ಸೋದರಿಯನ್ನು ಭೇಟಿಯಾಗಿ ಮನೆಗೆ ಹಿಂತಿರುಗುತ್ತಿದ್ದ. ನವಿ ನಗರ ರೈಲ್ವೇ ಸ್ಟೇಷನ್ ತಲುಪಿದ ಬಳಿಕ ತನ್ನನ್ನು ಪಿಕಪ್ ಮಾಡಲು ಯಾರನ್ನಾದರೂ ಕಳಿಸುವಂತೆ ಪತ್ನಿ ಗುಂಜಾದೇವಿಗೆ ಹೇಳಿದ್ದ. ರೈಲ್ವೇ ಸ್ಟೇಷನ್​ನಿಂದ ಮನೆಗೆ ಹಿಂತಿರುಗುವಾಗ, ಇಬ್ಬರು ಗುಂಡು ಹಾರಿಸಿ ಪ್ರಿಯಾಂಶುವನ್ನು ಮುಗಿಸಿದ್ದಾರೆ. ಗುಂಜಾ ದೇವಿ ಹಾಗೂ ಆಕೆಯ ಸೋದರ ಮಾವ ಜೀವನ್ ಸಿಂಗ್ ಮಧ್ಯೆ ಅಫೇರ್ ಇತ್ತು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೇ, ಗುಂಜಾ ದೇವಿಯ ತಂದೆ, ತಾಯಿ ಮದುವೆಗೆ ಒಪ್ಪಿರಲಿಲ್ಲ. ಬಲವಂತವಾಗಿ ಬರ್ವಾನ್ ಗ್ರಾಮದ ಪ್ರಿಯಾಂಶು ಜೊತೆ ಮದುವೆ ಮಾಡಿಕೊಟ್ಟಿದ್ದರು.
ಶಾರ್ಪ್ ಶೂಟರ್ ಜೊತೆ ಮಾವ ಸಂಪರ್ಕ
ಗಂಡನ ಮುಗಿಸಿದ ಬಳಿಕ ಗುಂಜಾದೇವಿ ಪತಿಯ ಗ್ರಾಮವನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಳು. ಇದು ಪತಿಯ ಮನೆಯವರ ಅನುಮಾನಕ್ಕೆ ಕಾರಣವಾಗಿತ್ತು. ಪೊಲೀಸರು ಪತ್ನಿ ಗುಂಜಾದೇವಿಯ ಪೋನ್ ಕಾಲ್ ರೆಕಾರ್ಡ್ಸ್ ಅನ್ನು ಪರಿಶೀಲಿಸಿದಾಗ, ಈಕೆ, ತನ್ನ ಸೋದರ ಮಾವ ಜೀವನ್ ಸಿಂಗ್ ಜೊತೆ ನಿರಂತರ ಸಂಪರ್ಕದಲ್ಲಿರೋದು ಗೊತ್ತಾಯಿತು. ಜೀವನ್ ಸಿಂಗ್ ಪೋನ್ ಕಾಲ್ ರೆಕಾರ್ಡ್ಸ್ ಪರಿಶೀಲಿಸಿದಾಗ, ಶಾರ್ಪ್ ಶೂಟರ್ ಜೊತೆ ನಿರಂತರ ಸಂಪರ್ಕದಲ್ಲಿರೋದು ಗೊತ್ತಾಗಿದೆ.
ತನಿಖೆ ನಡೆಸಿದ ಪೊಲೀಸರು ಗುಂಜಾದೇವಿ ಹಾಗೂ ಇಬ್ಬರು ಶಾರ್ಪ್ ಶೂಟರ್​ಗಳನ್ನು ಬಂಧಿಸಿದ್ದಾರೆ. ಜೀವನ್ ಸಿಂಗ್ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೇಘಾಲದಲ್ಲಿ ರಾಜ ರಘವಂಶಿ ಮುಗಿಸಲು ಆತನ ಪತ್ನಿ ಸೋನಮ್ ಕೂಡ ಮೂವರು ಹಂತಕರ ಸಹಾಯ ಪಡೆದಿದ್ದಳು. ಇಲ್ಲೂ ಗುಂಜಾ ದೇವಿ ಇಬ್ಬರು ಶೂರ್ಪ್ ಶೂಟರ್​ಗಳ ಮೂಲಕ ಪತಿಯನ್ನು ಮುಗಿಸಿದ್ದಾಳೆ. ಈ ತಪ್ಪಿಗೆ ಈಗ ಜೈಲುಪಾಲಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us