ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಪ್ರಾಣ ಬಿಟ್ಟ ನವವಧು.. ಕಾರಣವೇನು?

author-image
admin
Updated On
ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಪ್ರಾಣ ಬಿಟ್ಟ ನವವಧು.. ಕಾರಣವೇನು?
Advertisment
  • ಬೆಳಗಾವಿಯ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು
  • ಮದುವೆ ಹಿಂದಿನ ದಿನ ಅರಿಶಿನ ಹಚ್ಚುವ ಕಾರ್ಯಕ್ರಮ
  • ಬೆಳೆಗ್ಗೆ ಆದ್ರೆ ಹಸೆಮಣೆ ಏರಬೇಕಿದ್ದ ವಧು ಬಾವಿಗೆ ಹಾರಿದ್ದು ಯಾಕೆ?

ಮೈಗೆ ಅರಿಶಿನ ಹಚ್ಚಿ, ಮಧುವಣಗಿತ್ತಿಯಂತೆ ರೆಡಿ ಮಾಡಲು ಊರಿನವರೆಲ್ಲಾ ಸಿದ್ಧರಾಗಿದ್ದರು. ಇನ್ನೇನು ಬೆಳೆಗಾದರೆ ಹಸೆಮಣೆ ಏರಬೇಕಿದ್ದ ವಧು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. 24 ವಯಸ್ಸಿನ ಶೃತಿ ಶಂಕರ್ ಬುರುಡ ಎಂಬ ಯುವತಿಗೆ ಮೇ 25ಕ್ಕೆ ಬೆಳಗಾವಿಯ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು.

ಮದುವೆ ಹಿಂದಿನ ದಿನ ಅಂದ್ರೆ ಮೇ 24ನೇ ತಾರೀಖಿನಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು. ತನ್ನ ಸೊಸೆಯನ್ನಾಗಿ ಮಾಡಿಕೊಳ್ಳುವ ಅತ್ತೆ, ಕುರುಡು ಎಂದು ತಿಳಿದ ನಂತರ ವಧು ಅದೇ ರಾತ್ರಿ ಬಾವಿಗೆ ಜಿಗಿದಿದ್ದಾಳೆ. ರಾತ್ರಿ ಪೂರ್ತಿ ಶೃತಿಗಾಗಿ ಹುಡುಕಿದ ಮನೆಯವರಿಗೆ, ಬೆಳಗ್ಗೆ ಬಾವಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದೆ.

ಇದನ್ನೂ ಓದಿ: ಆಪರೇಷನ್​ ‘ಸಿಂಧೂರ’ ಲೋಗೋ ರೆಡಿ ಮಾಡಿದ್ದು ಯಾರು? ಕೊನೆಗೂ ಆ ರಹಸ್ಯ ರಿವೀಲ್‌! 

ಅತ್ತೆಗೆ ಕುರುಡಾದರೆ ಸಾವು ಯಾಕೆ?
ಶೃತಿಗೆ ತನ್ನ ಅತ್ತೆ ಕುರುಡು ಅನ್ನೋ ವಿಷಯ ಮದುವೆ ನಿಶ್ಚಯಕ್ಕೂ ಮುನ್ನವೇ ಗೊತ್ತಿದೆ. ಶೃತಿ ತಂದೆ ತಾಯಿ ಮೊದಲಿನಿಂದಲೂ ಅನಾರೋಗ್ಯದಿಂದ ಬಳಲುತ್ತಾ ಇದ್ದಿದ್ದರಿಂದ, ಅವರಿಬ್ಬರ ಸೇವೆಯನ್ನ ಶೃತಿನೇ ಮಾಡುತ್ತಿದ್ದಾಳಂತೆ.

ಈಗ ಕುರುಡು ಅತ್ತೆ ಸಿಕ್ಕಿದ್ದಾಳೆ. ಅತ್ತೆಯ ಮನೆಯಲ್ಲೂ ಕೂಡ ಅವರ ಆರೋಗ್ಯ ಸೇವೆ ಮಾಡಿಕೊಂಡೇ ಇರಬೇಕು ಅನ್ನೋದು ಶೃತಿಯ ಚಿಂತೆಯಾಗಿತ್ತು. ಈ ಮದುವೆ ಬೇಡ ಎಂದು ತಂದೆ ತಾಯಿ ಜೊತೆ ಕೇಳಿಕೊಂಡಿದ್ದಾಗ, ಶೃತಿ ತಂದೆ ತಾಯಿ ಮಗಳಿಗೆ ತಿಳಿ ಹೇಳಿದ್ದರಂತೆ. ನನ್ನ ಮಾತಿಗೆ ಬೆಲೆನೇ ಇಲ್ಲ, ಯಾರೂ ನನ್ನ ಅರ್ಥ ಮಾಡಿಕೊಳ್ಳುವವರೇ ಇಲ್ಲ ಎಂದು ಅರಿಶಿನ ಹಚ್ಚುವ ದಿನವೇ ಉಸಿರನ್ನು ಬಿಡುವ ನಿರ್ಧಾರ ಮಾಡಿಬಿಟ್ಟಿದ್ದಾಳೆ. ಚಿಕ್ಕೋಡಿ ತಾಲೂಕಿನ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment