ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO

author-image
admin
Updated On
ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ  ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO
Advertisment
  • ರೆಸಾರ್ಟ್‌ನಲ್ಲಿ ಮಲಗಿದ್ದ ನವಜೋಡಿಗಳು ಕೊಚ್ಚಿ ಹೋಗಿದ್ದಾರೆ
  • ಬೆಂಗಳೂರಿನ ಏರ್‌ಪೋರ್ಟ್‌ನಿಂದ ವಯನಾಡಿಗೆ ಪ್ರಯಾಣಿಸಿದ್ದರು
  • ರೆಸಾರ್ಟ್‌ನಲ್ಲಿ ಮಲಗಿದ್ರೆ ನಾನು ಬದುಕುತ್ತಿರಲಿಲ್ಲ ಎಂದ ಡ್ರೈವರ್

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದಾರೆ. ನೂರಾರು ಸಾವಿನ ಮಧ್ಯೆ ಘೋರ ದುರಂತದ ಭೀಕರತೆ ಬಗೆದಷ್ಟು ಬಯಲಾಗುತ್ತಿದೆ. ನ್ಯೂಸ್ ಫಸ್ಟ್‌ ಚಾನೆಲ್‌ ತಂಡ ಕೇರಳದಲ್ಲಿ ಬೀಡು ಬಿಟ್ಟಿದ್ದು, ಗ್ರೌಂಡ್ ರಿಪೋರ್ಟ್ ಮಾಡುತ್ತಿದೆ.

ಇದನ್ನೂ ಓದಿ: 25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು? 

ವಯನಾಡಿನ ಭೂಕುಸಿತದಲ್ಲಿ ಎರಡು ನವ ಜೋಡಿಗಳಲ್ಲಿ ಇಬ್ಬರು ನಾಪತ್ತೆ ಆಗಿರೋ ಮಾಹಿತಿ ತಿಳಿದು ಬಂದಿದೆ. ನ್ಯೂಸ್ ಫಸ್ಟ್ ಜೊತೆ ಟ್ರಾವೆಲ್ ಸಿಬ್ಬಂದಿ ಚೇತನ್ ಎಂಬುವವರು ಮಾತನಾಡಿದ್ದು, ಭೀಕರತೆಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

[caption id="attachment_77719" align="aligncenter" width="800"]ಕೃಪೆ: ಮನೋರಮಾ ಕೃಪೆ: ಮನೋರಮಾ[/caption]

ಚೇತನ್ ಎಂಬುವವರು ಈಗ ಬೆಂಗಳೂರಿನಿಂದ ಕೇರಳದ ಮೆಪ್ಪಾಡಿಗೆ ಹೋಗಿದ್ದರು. ವಯನಾಡಿನಲ್ಲಿ ಇಬ್ಬರು ನವ ದಂಪತಿಗಳು ಹನಿಮೂನ್‌ಗೆಂದು ಆನ್‌ಲೈನ್ ಮೂಲಕ ರೂಮ್ ಬುಕ್ ಮಾಡಿಕೊಂಡಿದ್ದರು. ಆ ನವಜೋಡಿಗಳಲ್ಲಿ ಇಬ್ಬರು ಗಂಡಸರು ನಾಪತ್ತೆ ಆಗಿದ್ದಾರೆ. ಇಬ್ಬರು ಹೆಂಗಸರ ಪೈಕಿ ಓರ್ವ ಮಹಿಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಸಾವಿನ ದವಡೆಯಲ್ಲಿ 300 ಜನ; ಮುಂಡಕೈನಲ್ಲಿ ಸಂಜೆ 5 ಗಂಟೆಗೇ ಕತ್ತಲು ಆವರಿಸುತ್ತೆ.. ಆತಂಕ ವ್ಯಕ್ತಪಡಿಸಿದ ಶಾಸಕ 

ಚೇತನ್ ಅವರ ಟ್ರಾವೆಲ್ಸ್‌ ಮೂಲಕ ಒಡಿಶಾ ಮೂಲದ ಎರಡು ಜೋಡಿಗಳನ್ನು ಬೆಂಗಳೂರಿನ ಏರ್‌ಪೋರ್ಟ್‌ನಿಂದ ಪಿಕ್ ಮಾಡಿದ್ದರು. ಈ ನವಜೋಡಿ ಕೇರಳದ ರೆಸಾರ್ಟ್‌ನಲ್ಲಿ ತಂಗಿದ್ದು, ಭೂಕುಸಿತದಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹನಿಮೂನ್‌ಗೆ ಬಂದವರು ದಾರುಣ ಅಂತ್ಯ ಕಂಡಿದ್ದಾರೆ.

ಡ್ರೈವರ್ ಪ್ರಾಣ ಉಳಿದಿದ್ದೇ ಪವಾಡ!
ಭೂಕುಸಿತದ ಸಂದರ್ಭದಲ್ಲಿ ಡ್ರೈವರ್ ಮಂಜು ರೆಸಾರ್ಟ್‌ ಪಕ್ಕದಲ್ಲೇ ಕಾರಲ್ಲಿ ಮಲಗಿದ್ದರು. ರೆಸಾರ್ಟ್‌ನಲ್ಲಿ ಮಲಗಿದ್ದವರು ಜಲಸಮಾಧಿ‌ ಆಗಿದ್ದು, ರೆಸಾರ್ಟ್‌ನ 300 ಮೀಟರ್ ದೂರದ ಎತ್ತರ ಪ್ರದೇಶದಲ್ಲಿದ್ದ ಕಾರು ಹಾಗೂ ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..! 

ಬೆಂಗಳೂರಿನಿಂದ ಕ್ಯಾಬ್‌ನಲ್ಲಿ ಬಾಡಿಗೆಗೆ ಬಂದಿದ್ದ 4 ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಮಲಗಿದ್ದವರು ರೆಸಾರ್ಟ್‌ ಸಮೇತ ಕೊಚ್ಚಿ ಹೋಗಿದ್ದಾರೆ. ಹಾವೇರಿ ಮೂಲದ ಡ್ರೈವರ್ ಮಂಜು ಅವರು ನ್ಯೂಸ್ ಫಸ್ಟ್ ಜೊತೆ ತಾವು ಕಂಡ ಭೀಕರತೆಯನ್ನು ಹಂಚಿಕೊಂಡಿದ್ದಾರೆ.

ದುರಂತದಲ್ಲಿ ಬದುಕುಳಿದ್ದಿದೇ ಅಚ್ಚರಿ. ರೆಸಾರ್ಟ್‌ನಲ್ಲಿದ್ದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಮಲಗಿದ್ದಕ್ಕೆ ನನ್ನ ಪ್ರಾಣ ಉಳಿತು. ರೆಸಾರ್ಟ್‌ನಲ್ಲಿ ಮಲಗಿದ್ರೆ ನಾನು ಬದುಕುತ್ತಿರಲಿಲ್ಲ. ಎತ್ತರದ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದರಿಂದ ಬಚಾವ್ ಆಗಿದ್ದೇನೆ. ನನ್ನ ಕಾರು ಕೂಡ ಅಲ್ಲೇ ಇದೇ. ದಯಮಾಡಿ ನನ್ನ ಕಾರನ್ನು ನನಗೆ ವಾಪಸ್ ಕೊಡಿಸಿ ಎಂದು ಕ್ಯಾಬ್ ಡ್ರೈವರ್ ಮಂಜು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment