/newsfirstlive-kannada/media/post_attachments/wp-content/uploads/2025/06/RV-PU-College-kannada.jpg)
ಬೆಂಗಳೂರು: ಕನ್ನಡದಲ್ಲಿ ಪಾಠ ಮಾಡಿದ್ರು ಅನ್ನೋ ಕಾರಣಕ್ಕೆ ಉಪನ್ಯಾಸಕ ರೂಪೇಶ್ ಪುತ್ತೂರು ಅವರಿಂದ ಆರ್.ವಿ ಪಿಯು ಲರ್ನಿಂಗ್ ಹಬ್ ಪ್ರಿನ್ಸಿಪಾಲ್ ರಾಜೀನಾಮೆ ಪಡೆದಿದ್ದರು. ಈ ವಿಷಯ ತಿಳಿದ ಕೂಡಲೇ ಮೊದಲು ಧ್ವನಿ ಎತ್ತಿದ್ದು ನ್ಯೂಸ್ ಫಸ್ಟ್ ಚಾನೆಲ್. ಇದೀಗ ಸಸ್ಪೆಂಡ್ ಮಾಡಿದ್ದಕ್ಕೆ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದು, ಉಪನ್ಯಾಸಕರಿಗೆ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಪಾಠ ಮಾಡಿದ ಹಿನ್ನೆಲೆಯಲ್ಲಿ ಆರ್.ವಿ ಪಿಯು ಲರ್ನಿಂಗ್ ಹಬ್ ಪ್ರಿನ್ಸಿಪಾಲ್ ಉಪನ್ಯಾಸಕರ ರಾಜೀನಾಮೆ ಪಡೆದಿದ್ದರು. ಪ್ರಿನ್ಸಿಪಾಲ್ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನ್ಯೂಸ್ ಫಸ್ಟ್ ವರದಿ ಮಾಡಿದ ಬಳಿಕ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕಾಲೇಜಿಗೆ ಭೇಟಿ ಮಾಡಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.
ಸೌತ್ ಎಂಡ್ ಸರ್ಕಲ್ ಬಳಿಯಿರುವ ಆರ್.ವಿ ಟ್ರಸ್ಟ್ ಕಚೇರಿಯಲ್ಲಿ ಉಪನ್ಯಾಸಕ ರೂಪೇಶ್ ಪುತ್ತೂರು, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಜೊತೆ ಸಭೆ ನಡೀತು. ನ್ಯೂಸ್ ಫಸ್ಟ್ ಅಲ್ಲಿ ಸುದ್ದಿ ಪ್ರಸಾರ ಆಗುತ್ತಾ ಇದ್ದಂತೆ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ರೂಪೇಶ್‌ಗೆ ಪುನಃ ಕೆಲಸ ಕೊಡುವ ಭರವಸೆ ನೀಡಿದೆ. ನ್ಯೂಸ್ ಫಸ್ಟ್ ಕನ್ನಡ ಪರ ಕಾಳಜಿಗೆ ಒಳ್ಳೆಯ ಪ್ರತಿಫಲ ಸಿಕ್ಕಿದೆ.
ಇದನ್ನೂ ಓದಿ: ರಜನಿಕಾಂತ್ ಅಳಿಯನ ಜೊತೆ IPL ತಂಡದ ಓನರ್ ಕಾವ್ಯಾ ಮಾರನ್ ಮದುವೆ ಫಿಕ್ಸ್..?
ಆರ್.ವಿ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ನಾಗರಾಜ್ ಅವರು ಈ ವಿಚಾರ ಮ್ಯಾನೇಜ್‌ಮೆಂಟ್ ಗಮನಕ್ಕೆ ಬಂದಿಲ್ಲ. ಹೀಗಾಗಿ ಇದನ್ನ ಬಗೆಹರಿಸಲಾಗಿದೆ ಎಂದರು. ಉಪನ್ಯಾಸಕ ರೂಪೇಶ್ ಪುತ್ತೂರು ಅವರು ಮಾತನಾಡಿ, ಪ್ರಿನ್ಸಿಪಾಲ್ ತಾವು ಮಾಡಿದ್ದು ತಪ್ಪು ಅಂತ ಕ್ಷಮೆ ಕೇಳಿದ್ದಾರೆ. ನನ್ನ ನೋವಿಗೆ ಸ್ಪಂದಿಸಿದ್ದಾರೆ. ಮತ್ತೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಮಾತನಾಡಿ, ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದಾರೆ. ಉಪನ್ಯಾಸಕರು ಮತ್ತೆ ಕೆಲಸಕ್ಕೆ ಸೇರ್ತಿದ್ದಾರೆ. ಅದೇ ಸಂಸ್ಥೆಯಲ್ಲಿ ಸೋಮವಾರದಿಂದ ಕೆಲಸ ಮುಂದುವರಿಸಲಿದ್ದಾರೆ. ಈ ರೀತಿ ಘಟನೆ ಮತ್ತೆ ಮರುಕಳಿಸಬಾರದು. ಕಾಲೇಜಿನಲ್ಲಿ ಒಂದು ಕೌನ್ಸಲಿಂಗ್ ಮಾಡುತ್ತಾರೆ. ಮತ್ತೆ ಈ ರೀತಿ ಆಗಲ್ಲ ಅಂತ ಮ್ಯಾನೇಜ್ಮೆಂಟ್ ಭರವಸೆ ಕೊಟ್ಟಿದ್ದಾರೆ. ಕನ್ನಡ ಭಾಷೆ ಹಾಗೂ ಉಪನ್ಯಾಸಕರಿಗಾದ ಆದ ಅನ್ಯಾಯದ ಬಗ್ಗೆ ವರದಿ ಮಾಡಿದ ನ್ಯೂಸ್ ಫಸ್ಟ್ ಚಾನೆಲ್‌ಗೆ ರೂಪೇಶ್ ರಾಜಣ್ಣ ಅವರು ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ