/newsfirstlive-kannada/media/post_attachments/wp-content/uploads/2024/12/NF_AROGYA_HABBA_1-1.jpg)
ಆರೋಗ್ಯ ಹಬ್ಬ, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಂಭ್ರಮ. ಜನರನ್ನ ಆರೋಗ್ಯಯುತಗೊಳಿಸುವ ಉತ್ಸವ. ಆರೋಗ್ಯವಾಗಿರುವವರನ್ನ ಮತ್ತಷ್ಟು ಆರೋಗ್ಯವಾಗಿಸಿ, ಜಾಗೃತಿಗೊಳಿಸುವ ವಿನೂತನ ಫೆಸ್ಟಿವಲ್. ಆರೋಗ್ಯ ಹಬ್ಬದ ಮೂಲಕ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಒಂದೇ ಸೂರಿನಡಿ ಪರಿಹಾರ ಸಿಗುವ ವೇದಿಕೆಯನ್ನ ನಿಮಗಾಗಿ ನಿಮ್ಮ ನ್ಯೂಸ್ ಫಸ್ಟ್ ಕಲ್ಪಿಸಿದ್ದು, ಮೊದಲ ದಿನ ಯಶ್ವಸಿಯಾಗಿ ನಡೆದಿದೆ. ಇಂದು 2ನೇ ದಿನವಾಗಿದ್ದು, ಆರೋಗ್ಯಕರ ಜೀವನಕ್ಕೆ ಹಲವು ವಿಶೇಷ ಕಾರ್ಯಕ್ರಮಗಳು ಇರಲಿವೆ.
ಆರೋಗ್ಯ ಹಬ್ಬ- 2ನೇ ದಿನ ಏನೆಲ್ಲ ಕಾರ್ಯಕ್ರಮ
ಆರೋಗ್ಯ ಹಬ್ಬದ 2ನೇ ಹಾಗೂ ಕೊನೆಯ ದಿನವಾದ ಇಂದು ಬೆಳಗ್ಗೆ 10.30ರಿಂದ 11.30ರವರೆಗೂ ಪ್ರತಿ ದಿನ ಆರೋಗ್ಯ ಸೂತ್ರ ಹೆಸರಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಏನೇನು ಮಾಡಬೇಕು ಎಂದು ಶ್ವಾಸಗುರು ಶ್ರೀವಚನಾನಂದ ಸ್ವಾಮೀಜಿ ಅಗತ್ಯ ಮಾಹಿತಿ ನೀಡಲಿದ್ದಾರೆ. ಬಳಿಕ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30ರ ವಗೆರೆ ಉತ್ತಮ ಆರೋಗ್ಯಕ್ಕೆ ಆಯುರ್ವೇದಲ್ಲಿ ಏನೆಲ್ಲಾ ಅಡಗಿದೆ ಅನ್ನೋದು ಆಯುರ್ವೇದ ತಜ್ಞರು ಮಾಹಿತಿ ನೀಡಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಮನೆ ಮದ್ದು ಅಥವಾ ಮನೆ (ಮನ) ಮದ್ದು ಕಾರ್ಯಕ್ರಮ ಇರಲಿದೆ. ನಂತರ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆವರೆಗೆ ನಿಮ್ಮ ಪ್ರಶ್ನೆ ತಜ್ಞರ ಉತ್ತರ ಕಾರ್ಯಕ್ರಮ ಇರಲಿದೆ.
ಕರ್ನಾಟಕದ ವಿವಿಧ ಭಾಗದ ರುಚಿಕರ ಊಟ
ಎರಡು ದಿನ ನ್ಯೂಸ್ ಫಸ್ಟ್ ಆಯೋಜಿಸಿರುವ ಆರೋಗ್ಯ ಹಬ್ಬದಲ್ಲಿ ಮೊದಲ ದಿನ ಯೋಗ, ಆಯುರ್ವೇದ, ನ್ಯಾಚುರೋಪತಿ ತಜ್ಞರು ಆರೋಗ್ಯವಾಗಿರಲು ಅನುಸರಿಸಬೇಕಾದ ಟಿಪ್ಸ್ ನೀಡಿದ್ದಾರೆ. ಇದರ ಜೊತೆ ಒಂದೇ ವೇದಿಕೆಯಲ್ಲಿ ಕರ್ನಾಟಕದ ವಿವಿಧ ಭಾಗದ ರುಚಿಕರ ಊಟವೂ ಇಲ್ಲಿ ಲಭ್ಯವಿದೆ. ಜೊತೆಗೆ ಕರ್ನಾಟಕದ ವಿವಿಧ ಭಾಗಗಳ ಆಹಾರ ರುಚಿಯನ್ನ, ಆರೋಗ್ಯಕರ ಆಹಾರವನ್ನ ಸವಿಯೋದಕ್ಕೂ ಇದೊಂದು ಸದಾವಕಾಶ. ಮೊದಲ ದಿನ ಸಾವಿರಾರು ಜನ ಆರೋಗ್ಯ ಹಬ್ಬಕ್ಕೆ ಆಗಮಿಸಿ, ತಮ್ಮ ಆರೋಗ್ಯ ಸಮಸ್ಯೆಗಳು, ಅನುಮಾನಗಳನ್ನ ಪರಿಹರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಆರೋಗ್ಯವಾಗಿರೋಕೆ ಸರಳ ಸೂತ್ರ ಏನು? ಇಂದೇ ಕೊನೇ ಅವಕಾಶ.. ನ್ಯೂಸ್ ಫಸ್ಟ್ ಆರೋಗ್ಯ ಹಬ್ಬಕ್ಕೆ ತಪ್ಪದೇ ಬನ್ನಿ!
ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆವರೆಗೂ ಆರೋಗ್ಯ ಹಬ್ಬ ನಡೆಯಲಿದ್ದು, ಇದರ ಲಾಭವನ್ನ ನೀವೂ ಪಡೆದುಕೊಳ್ಳಿ. ಇವತ್ತು ಕೊನೆಯ ದಿನವಾಗಿರುವ ಕಾರಣ ಆರೋಗ್ಯ ಹಬ್ಬಕ್ಕೆ ನೀವೂ ಬನ್ನಿ. ನಿಮ್ಮವರನ್ನೂ ಕರೆ ತಂದು ಸ್ವಸ್ಥ, ಆರೋಗ್ಯಕರ ಜೀವನಕ್ಕೆ ಅಗತ್ಯ ಮಾಹಿತಿ ಪಡೆದುಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ