/newsfirstlive-kannada/media/post_attachments/wp-content/uploads/2024/11/Newsfirst-aarogya-Habba.jpg)
ಆಧುನಿಕ ಯುಗದಲ್ಲಿ ಎದುರಾಗಿರುವ ಸವಾಲುಗಳ ಪೈಕಿ, ಜನರನ್ನ ಹೆಚ್ಚು ಕದಲಿಸಿರೋದು ಆರೋಗ್ಯದ ಸಮಸ್ಯೆ. ಯಾರಿಂದ ಯಾವ ಭಾಗ್ಯವಾದರೂ ಸಿಗಬಹುದು. ಆದ್ರೆ, ಆರೋಗ್ಯ ಭಾಗ್ಯ ಸಿಗೋದು ನಿಮ್ಮಿಂದ ಮಾತ್ರ. ಆರೋಗ್ಯವೊಂದಿದ್ದರೆ, ಇಡೀ ಜಗತ್ತನ್ನೇ ಗೆಲ್ಲಬಹುದು ಅನ್ನೋ ಸತ್ಯ, ಸಾರ್ವಕಾಲಿಕ.
ಜಗತ್ತು ಬೆಳೆಯುತ್ತಿದ್ದಂತೆ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಹಳೇ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತಿವೆ. ಈ ಎಲ್ಲಾ ಗಂಭೀರತೆಯನ್ನ ಅರಿತಿರೋ ರಾಜ್ಯದ ಜನಪ್ರಿಯ ಸುದ್ದಿ ವಾಹಿನಿ ನ್ಯೂಸ್‌ಫಸ್ಟ್, ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೊಸ ಪರಿಕಲ್ಪನೆಯ, ಸದುಪಯೋಗವಾಗುವ ವಿನೂತನ ಹಬ್ಬ ಆಯೋಜಿಸಿದೆ. ಆ ಹಬ್ಬದ ಹೆಸರೇ... ಆರೋಗ್ಯ ಹಬ್ಬ.
ಏನಿದು ಆರೋಗ್ಯ ಹಬ್ಬ?
ಹಬ್ಬ ಎಂದರೇ ಸಂಭ್ರಮ. ಹಬ್ಬ ಎಂದರೇ ಸಂತಸ, ಹಬ್ಬ ಎಂದರೇ, ಸಂತೋಷದ ವಿನಿಮಯ. ಹಾಗಾದ್ರೆ, ಆರೋಗ್ಯ ಹಬ್ಬ ಎಂದರೇನು ಗೊತ್ತಾ? ಆರೋಗ್ಯದ ಬಗ್ಗೆ ಅರಿವು ಮೂಡಿಸುವ, ಜನರನ್ನ ಆರೋಗ್ಯಯುತಗೊಳಿಸುವ, ಆರೋಗ್ಯವಾಗಿರುವವರನ್ನ ಮತ್ತಷ್ಟು ಆರೋಗ್ಯವಾಗಿಸಿ, ಜಾಗೃತಿಗೊಳಿಸುವ ವಿನೂತನ ಹಬ್ಬ.
ಪ್ರತಿಯೊಂದು ಹಬ್ಬವೂ ಒಂದೊಂದು ಸಮುದಾಯದವರಿಗೆ ಬಹುಮುಖ್ಯ. ಆದ್ರೆ, ಎಲ್ಲರಿಗೂ ಸಲ್ಲುವಂತಹ, ಎಲ್ಲರಿಗೂ ಕಡ್ಡಾಯವಾಗಿರುವಂತಹ ಹಬ್ಬ ಎಂದರೇ ಆರೋಗ್ಯ ಹಬ್ಬ. ಆರೋಗ್ಯ ಹಬ್ಬದಲ್ಲಿ ಯೋಗ, ಆಯುರ್ವೇದ, ನ್ಯಾಚುರೋಪತಿ ತಜ್ಞರು ಆರೋಗ್ಯವಾಗಿರಲು ಅನುಸರಿಸಬೇಕಾದ ಟಿಪ್ಸ್ ನಿಮಗೆ ನೀಡಲಿದ್ದಾರೆ. ರಾಜ್ಯದ ಖ್ಯಾತ ಆಯುರ್ವೇದ ತಜ್ಞರು ಈ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೋಷಿಯಲ್ ಮೀಡಿಯಾ ತುಂಬಾ ಪ್ರಭಾವ ಬೀರಿರುವ ಈ ಕಾಲದಲ್ಲಿ, ಎಲ್ಲರೂ ತಮಗನಿಸೋ ಹೆಲ್ತ್ ಟಿಪ್ಸ್ ನೀಡ್ತಾರೆ. ಆದ್ರೆ, ಎಲ್ಲಾ ಟಿಪ್ಸ್ ಎಲ್ಲರಿಗೂ ಅನ್ವಯಿಸೋದಿಲ್ಲ. ಎಲ್ಲಾ ಟಿಪ್ಸ್ ಸದುಪಯೋಗವಲ್ಲ. ಇದನ್ನೆಲ್ಲಾ ಗಮನವಿಟ್ಟುಕೊಂಡು, ಬಹುತೇಕ ಜನರಿಗೆ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಖ್ಯಾತ ಆಯುರ್ವೇದ ತಜ್ಞರು ಸಲಹೆ, ಸೂಚನೆಗಳನ್ನ ನೀಡಲಿದ್ದಾರೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಕ್ಯಾರೆಟ್; ಪ್ರತಿದಿನ ಈ ತರಕಾರಿ ತಿನ್ನುವುದರಿಂದ ಇವೆ 8 ಆರೋಗ್ಯಕರ ಲಾಭಗಳು
ಡೇ ಟು ಡೇ ಲೈಫ್‌ನಲ್ಲಿ ಸರಳವಾಗಿ ಅನುಸರಿಬಹುದಾದ, ರೆಮಿಡಿಸ್‌ನ ಅರ್ಥವಾಗುವಂತೆ ನಿಮಗೆ ತಿಳಿಸಿಕೊಡಲಿದ್ದಾರೆ. ಅಷ್ಟೇ ಅಲ್ಲ, ದೈನಂದಿನ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದುಗಳನ್ನ ಹೇಗೆ ತಯಾರಿಸುವುದು ಎಂಬುದನ್ನ ನಿಮಗೆ ತಿಳಿಸಿಕೊಡಲಿದ್ದಾರೆ. ವಿಶೇಷವಾಗಿ, ಯೋಗಾಭ್ಯಾಸದ ಮೂಲಕ ಯಾವ್ಯಾವ ರೋಗದಿಂದ ಮುಕ್ತರಾಗಬಹುದು ಎಂಬುದನ್ನ ಸಹ ಯೋಗತಜ್ಞರು ನಿಮಗೆ ಹೇಳಲಿದ್ದಾರೆ.
ಆರೋಗ್ಯ ಹಬ್ಬದ ವಿಶೇಷತೆ ಏನಂದರೇ, ಆರೋಗ್ಯವಾಗಿರುವವರು ಹೇಗೆ ತಮ್ಮ ಮುಂದಿನ ಲೈಫ್‌ಸ್ಟೈಲ್‌ನ ರೂಢಿಸಿಕೊಳ್ಳಬೇಕು ಎಂಬುದನ್ನ ಸುಲಭವಾಗಿ ತಿಳಿಯಬಹುದು. ಸಣ್ಣ ಶಿಸ್ತು, ಸಣ್ಣ ಬದಲಾವಣೆಯಿಂದ ಹೆಲ್ದಿ ಲೈಫ್ ಹೇಗೆ ನಡೆಸಬಹುದು ಅನ್ನೋದನ್ನ ಆರೋಗ್ಯ ಹಬ್ಬದಲ್ಲಿ ತಿಳಿಯಬಹುದು. ಜೊತೆಗೆ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಆಯುರ್ವೇದಲ್ಲಿ ಇರುವ ಮಾರ್ಗೋಪಾಯಗಳೇನು ಅಂತಾ ತಜ್ಞ ವೈದ್ಯರು ಹೇಳಲಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹದೊಂದು ಆರೋಗ್ಯ ಹಬ್ಬ ನಡೆಯುತ್ತಿರುವುದು ಇದೇ ಮೊದಲು. ಹಾಗಾಗಿ, ಇದು ರಾಜ್ಯದ ಅತಿ ದೊಡ್ಡ ಹೆಲ್ತ್ ಎಕ್ಸ್‌ಫೋ.
ಸಾಲು ಸಾಲು ಸ್ಟಾಲ್ಸ್!
ಆರೋಗ್ಯ ಹಬ್ಬದ ಮತ್ತೊಂದು ಆಕರ್ಷಣೆ ಸ್ಟಾಲ್‌ಗಳು. ಇಲ್ಲಿ ಆಯುರ್ವೇದ, ವೆಲ್‌ನೆಸ್ ಸೆಂಟರ್ಸ್, ಮಿಲೆಟ್ಸ್, ಆರ್ಗ್ಯಾನಿಕ್ ಫುಡ್ ಪ್ರಾಡಕ್ಟ್‌ಗಳ ಸ್ಟಾಲ್‌ಗಳು ಇರಲಿವೆ. ಆರೋಗ್ಯಯುತ ಜೀವನ ನಡೆಸಲು, ನಿಮ್ಮ ಅಡುಗೆ ಮನೆಯಲ್ಲಿ ಏನೇನ್ ಇರಬೇಕೋ ಆ ಎಲ್ಲಾ ಪ್ರಾಡಕ್ಟ್‌ಗಳ ಸ್ಟಾಲ್‌ಗಳು ಇಲ್ಲಿ ಇರಲಿವೆ.
ಇದನ್ನೂ ಓದಿ: ಕಣ್ಣು, ಹೃದಯ, ಚರ್ಮದ ಆರೋಗ್ಯ; ದಿನಕ್ಕೊಂದು ಬಟರ್ ಫ್ರೂಟ್ ಸೇವಿಸುವುದರಿಂದ ಆಗಲಿರುವ ಲಾಭಗಳೇನು ಗೊತ್ತಾ?
ಆಹಾರ ಮೇಳ
ಆರೋಗ್ಯ ಹಬ್ಬದ ಮತ್ತೊಂದು, ಕೇಂದ್ರ ಬಿಂದು ಆಹಾರ ಮೇಳ. ಆರೋಗ್ಯ ಹಬ್ಬಕ್ಕೆ ಬಂದರೇ, ಒಂದೇ ಸ್ಥಳದಲ್ಲಿ ಕರ್ನಾಟಕದ ಎಲ್ಲಾ ಭಾಗದ ಆಹಾರವನ್ನ ಸವಿಯಬಹುದು. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಮತ್ತು ಹಳೇ ಮೈಸೂರು ಭಾಗದ ಟೇಸ್ಟಿ ಟೇಸ್ಟಿ ಫುಡ್‌ಗಳ ಸ್ಟಾಲ್‌ಗಳು ಇರಲಿವೆ. ಕುಟುಂಬ ಸಮೇತ ಆರೋಗ್ಯ ಹಬ್ಬಕ್ಕೆ ಬಂದರೇ, ಹೆಲ್ದಿ ಫ್ಯಾಮಿಲಿಗೆ ಬೇಕಾದ ಮಾಹಿತಿ ಸಿಗುತ್ತದೆ, ಅದೇ ರೀತಿ ಬಾಯಲ್ಲಿ ನೀರೂರಿಸುವ ಆಹಾರವೂ ಲಭ್ಯವಿರುತ್ತದೆ.
ನ್ಯೂಸ್ ಫಸ್ಟ್ ಆಯೋಜಿಸುತ್ತಿರುವ ‘ಆರೋಗ್ಯ ಹಬ್ಬ’ ಇದೇ ನವೆಂಬರ್ 30 ಮತ್ತು ಡಿಸೆಂಬರ್ 1ನೇ ತಾರೀಖು, ಗೇಟ್ ನಂಬರ್ 6, ಗ್ರ್ಯಾಂಡ್ ಕ್ಯಾಸಲ್, ಅರಮನೆ ಮೈದಾನ, ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಹಬ್ಬಕ್ಕೆ ಪ್ರತಿಯೊಬ್ಬರಿಗೂ ಉಚಿತ ಪ್ರವೇಶವಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ