/newsfirstlive-kannada/media/post_attachments/wp-content/uploads/2025/05/NF_KASHMIRA.jpg)
ಶ್ರೀನಗರ: ಟ್ರಾಲ್ನ ನಾದರ್ನ ಮನೆಯೊಂದರಲ್ಲಿ ಇಬ್ಬರು ಉಗ್ರರು ಅಡಗಿರುವ ಮಾಹಿತಿ ಇದ್ದು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ನ್ಯೂಸ್ಫಸ್ಟ್ ವರದಿಗಾರ ಜಗದೀಶ್ ಖಾಶಂಪುರ ರಿಪೋರ್ಟ್ ಮಾಡುವಾಗ ಲೈವ್ನಲ್ಲಿ ಫೈರಿಂಗ್ ನಡೆದಿದೆ.
ಕಣಿವೆ ರಾಜ್ಯದಲ್ಲಿ ಆಪರೇಷನ್ ಕೆಲ್ಲರ್ ಮುಂದುವರೆದಿದ್ದು ಈಗಾಗಲೇ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪಹಲ್ಗಾಮ್ನಲ್ಲಿ ಗುಂಡಿನ ದಾಳಿ ಮಾಡಿದ್ದ ಉಗ್ರರ ಜೊತೆ ನಂಟು ಹೊಂದಿದ್ದ ಶಂಕಿತ ಭಯೋತ್ಪಾದಕ ಆಸೀಫ್ ಅಹ್ಮದ್ ಶೇಖ್ನನ್ನು ಟ್ರಾಲ್ನ ನಾದರ್ನಲ್ಲಿ ಸೇನೆ ಹೊಡೆದು ಹಾಕಿದೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಟ್ಯಾಕ್ ಮಾಡುವಾಗ ಆಸೀಫ್ ಅಹ್ಮದ್ ಸಹಾಯ ಮಾಡಿದ್ದನು. ಜೊತೆಗೆ ಅವರಿಗೆ ಆಯುಧ ಸರಬರಾಜು ಮಾಡುವಲ್ಲಿ ಸಹಕಾರಿ ಆಗಿದ್ದನು. ಈ ಬಗ್ಗೆ ಮಾಹಿತಿ ಪಡೆದು ಸೇನೆ ಇಂದು ಕಾರ್ಯಾಚರಣೆ ನಡೆಸುತ್ತಿದ್ದು ಈಗಾಗಲೇ ಒಟ್ಟು 3 ಉಗ್ರರ ಹೊಡೆದುರುಳಿಸಿದೆ.
ನ್ಯೂಸ್ ಫಸ್ಟ್ ಕನ್ನಡ ಚಾನೆಲ್ ವರದಿಗಾರ ಜಗದೀಶ್ ಖಾಶಂಪುರ ಅವರು ರಿಪೋರ್ಟ್ ಮಾಡುವಾಗ ಲೈವ್ನಲ್ಲಿ ಫೈರಿಂಗ್ ನಡೆದಿದೆ. ಭಯೋತ್ಪಾಕರ ವಿರುದ್ಧ ಭಾರತೀಯ ಯೋಧರು ಕಾರ್ಯಾಚರಣೆ ನಡೆಸುವಾಗ ಕನ್ನಡದ ಏಕೈಕ ಸುದ್ದಿ ವಾಹಿನಿ ನ್ಯೂಸ್ಫಸ್ಟ್ ಚಾನೆಲ್ ಯುದ್ಧ ಭೂಮಿಯಿಂದಲೇ ಲೈವ್ ವರದಿ ಪ್ರಕಟ ಮಾಡಿದೆ.
ಬೆಳಗ್ಗೆಯಿಂದಲೂ ಆಪರೇಷನ್ ಕೆಲ್ಲರ್ ಕಾರ್ಯಾಚರಣೆಯಲ್ಲಿ ನಿರಂತರ ಗನ್ ಸೌಂಡ್ ಕೇಳುತ್ತಿದೆ. ಪಹಲ್ಗಾಮ್ನಲ್ಲಿ ದಾಳಿ ಮಾಡಿದ ಭಯೋತ್ಪಾದಕರಿಗೆ ಸಹಾಯ ಮಾಡಿದಂತವರನ್ನು ಹೊಡೆದುರುಳಿಸುವ ಕೆಲಸ ಮಾಡಲಾಗುತ್ತಿದೆ. ಆಸೀಫ್ ಅಹ್ಮದ್ ಶೇಕ್ನನ್ನ ಮುಗಿಸಿದ್ದು ಅಮೀರ್ ನಾಸೀರ್ ವಾನಿಯನ್ನ ಕೂಡ ಹೊಡೆದು ಹಾಕಲಾಗಿದೆ.
ಸಿಆರ್ಪಿಎಫ್ ಬೆಟಾಲಿಯನ್- 11 ಈ ಕಾರ್ಯಾಚರಣೆಯನ್ನು ಮಾಡುತ್ತಿದೆ. 36 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ಮಾಡುತ್ತಿದೆ. ಈ ಭಯೋತ್ಪಾದಕರ ಹಿಟ್ ಲಿಸ್ಟ್ನಲ್ಲಿ ಒಟ್ಟು 14 ಜನರು ಇದ್ದು ಇವರು ಪಹಲ್ಗಾಮ್ನಲ್ಲಿ ಕೃತ್ಯ ಎಸಗಿದವರಿಗೆ ಸಹಾಯ ಮಾಡಿದವರು ಆಗಿದ್ದಾರೆ. ಇದರಲ್ಲಿ 6 ಜನರನ್ನು ಮುಗಿಸಲಾಗಿದೆ. ಉಳಿದ 8 ಉಗ್ರರನ್ನು ಪತ್ತೆ ಹಚ್ಚಿ ಹೊಡೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ