newsfirstkannada.com

×

ಕಾಂಗ್ರೆಸ್‌ ಗೃಹಲಕ್ಷ್ಮಿ ಯೋಜನೆಯ ಹಣ ಸಹಾಯ.. ನ್ಯೂಸ್ ಫಸ್ಟ್‌ಗೆ ಟಾಪರ್‌ ವಿದ್ಯಾರ್ಥಿ ಸಂತಸ; ವಿಡಿಯೋ ವೈರಲ್‌!

Share :

Published April 10, 2024 at 8:11pm

Update April 10, 2024 at 8:17pm

    ನನ್ನ ಓದಿಗೆ ಬಡತನ ಅಡ್ಡಿಯಾಗಲಿಲ್ಲ ಎಂದ ಕಲಾ ವಿಭಾಗದ ಟಾಪರ್

    ನನ್ನ ತಾಯಿಗೆ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಿಂದ 2 ಸಾವಿರ ಹಣ

    ನ್ಯೂಸ್ ಫಸ್ಟ್ ಚಾನೆಲ್‌ ವರದಿ ಮಾಡಿದ ವಿಡಿಯೋ ಫುಲ್ ವೈರಲ್‌!

ವಿಜಯಪುರ: 2023-24ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇಂದು ಹೊರಬಿದ್ದಿದೆ. ಕಲಾ ವಿಭಾಗದಲ್ಲಿ ವಿಜಯಪುರದ SS ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವೇದಾಂತ ಉತ್ತಮ ಅಂಕ ಪಡೆದುಕೊಂಡಿರುವುದಕ್ಕೆ ವಿಜಯಪುರ ನಗರದ BLDE ಸಂಸ್ಥೆಯ SS ಪಿಯು ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿದೆ.

ವೇದಾಂತ ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಲಬೀಳಗಿ ಗ್ರಾಮದವರು. ಬಡತನದ ಮಧ್ಯೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿ ಸಾಧನೆ‌ ಮಾಡಿರುವುದಕ್ಕೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಈ ಸಂತೋಷದ ಮಧ್ಯೆ ವಿದ್ಯಾರ್ಥಿ ವೇದಾಂತ ನಾವಿ ಅವರು ನ್ಯೂಸ್‌ ಫಸ್ಟ್ ರಿಪೋರ್ಟರ್‌ ರಾಚಪ್ಪ ಜೊತೆ ಮಾತನಾಡಿದ್ದಾರೆ. ನ್ಯೂಸ್ ಫಸ್ಟ್ ಜೊತೆ ವೇದಾಂತ ಸಂತಸ ಹಂಚಿಕೊಂಡ ವಿಡಿಯೋ ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಸಾಧನೆ; ಮಗಳು ಡಿಸ್ಟಿಂಕ್ಷನ್, ತಾಯಿಗೆ ಬಂದ ಮಾರ್ಕ್ಸ್‌ ಎಷ್ಟು?

ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ವೇದಾಂತ ನಾವಿ, RANK ಬರುತ್ತಾನೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವುದು ಸಂತಸ ತಂದಿದೆ. ನನ್ನ ಓದಿಗೆ ಬಡತನ ಅಡ್ಡಿಯಾಗಲಿಲ್ಲ. ನನ್ನ ತಾಯಿಗೆ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಿಂದ 2 ಸಾವಿರ ಹಣ ಬರುತ್ತಾ ಇತ್ತು. ಈ ಹಣ ನನ್ನ ಓದಿಗೆ ಸಹಾಯವಾಯ್ತು ಎಂದಿದ್ದಾನೆ.

ನ್ಯೂಸ್ ಫಸ್ಟ್ ಚಾನೆಲ್‌ ವರದಿಯ ವಿಡಿಯೋ, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಹಣ ನನ್ನ ಓದಿಗೆ ಸಹಾಯವಾಯ್ತು ಎಂದಿದ್ದಾನೆ. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮತ್ತೊಮ್ಮೆ ಎದೆ ತಟ್ಟಿ ಹೇಳಿಕೊಳ್ಳುವ ಸಂದರ್ಭ ಬಂದಿದೆ. ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಹೊರ ಹೊಮ್ಮಿರುವ ವಿದ್ಯಾರ್ಥಿ ವೇದಾಂತ್‌ ಜ್ಞಾನೋಬಾ ನಾವಿ ಅವರು ಓದಲು ನಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ನೆರವಿಗೆ ಬಂದಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಕಂಗಾಲಾಗಿದ್ದ ಈ ಯುವಕನ ಸಾಧನೆ ಶ್ಲಾಘನೀಯ. ನಮ್ಮ ಗ್ಯಾರಂಟಿಗಳ ಬಗ್ಗೆ ಹೆಮ್ಮೆ ಮೂಡುತ್ತಿದೆ. ವೇದಾಂತ್‌ ನೀನು ನಿಜವಾದ ಹೀರೋ, ನಿನಗಿದೋ ಹ್ಯಾಟ್ಸಾಫ್‌ ಎಂದು ಪೋಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್‌ ಗೃಹಲಕ್ಷ್ಮಿ ಯೋಜನೆಯ ಹಣ ಸಹಾಯ.. ನ್ಯೂಸ್ ಫಸ್ಟ್‌ಗೆ ಟಾಪರ್‌ ವಿದ್ಯಾರ್ಥಿ ಸಂತಸ; ವಿಡಿಯೋ ವೈರಲ್‌!

https://newsfirstlive.com/wp-content/uploads/2024/04/Puc-Result-Student.jpg

Load More