/newsfirstlive-kannada/media/post_attachments/wp-content/uploads/2025/02/NF_COACHING_GURU-1.jpg)
ನ್ಯೂಸ್ ಫಸ್ಟ್ ವತಿಯಿಂದ ಆಯೋಜನೆ ಮಾಡಲಾಗಿರುವ ಕೋಚಿಂಗ್ ಗುರು ಎಕ್ಸ್ಪೋ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ, ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಕಪಕರು ಹಾಗೂ ಶಾಸಕ ಪ್ರದೀಪ್ ಈಶ್ವರ್, ನ್ಯೂಸ್ಫಸ್ಟ್ ಸಿಇಒ ಎಸ್ ರವಿಕುಮಾರ್, XL ಎಕಾಡೆಮಿ ಬೆಂಗಳೂರು ಉಪಾಧ್ಯಕ್ಷರು ಶಿವಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಕೋಚಿಂಗ್ ಗುರು ಎಕ್ಸ್ಪೋ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಕ್ಕಳಿಗೆ ಸಹಕಾರಿ ಆಗಲೆಂದು ಎಕ್ಸ್ಪೋ ಅನ್ನು ಆಯೋಜನೆ ಮಾಡಿರುವುದು ಉತ್ತಮವಾಗಿದೆ. ಸರ್ಕಾರಿ, ಖಾಸಗಿ ಶಾಲೆಗಳು ಸೇರಿ ರಾಜ್ಯಾದ್ಯಂತ 76 ಸಾವಿರ ಶಾಲಾ-ಕಾಲೇಜುಗಳಿವೆ. ಒಟ್ಟು 1 ಕೋಟಿ 8 ಲಕ್ಷ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು ಓದುವಾಗ ಯಾವ ವಿಷಯ ಆಯ್ಕೆ ಮಾಡಬೇಕು ಎಂದು ಗೊತ್ತಾಗಲ್ಲ. ಅದಕ್ಕೆ ಇಂತಹ ಎಕ್ಸ್ಪೋ ತುಂಬಾ ಉಪಕಾರಿ. ವಿದ್ಯಾರ್ಥಿಗಳು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಎಕ್ಸ್ಪೋವನ್ನು ರವಿಕುಮಾರ್ ನೇತೃತ್ವದಲ್ಲಿ ನ್ಯೂಸ್ಫಸ್ಟ್ ಆಯೋಜಿಸಿರುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಅನುಕೂಲ ಆಗಲಿದೆ. ನಗರ ಪ್ರದೇಶದಲ್ಲಿ ಮಾತ್ರ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಎಕ್ಸ್ಪೋವನ್ನು ರವಿಕುಮಾರ್ ನಡೆಸಬೇಕು ಎಂದು ಹೇಳಿದರು.
ಪ್ರದೀಪ್ ಈಶ್ವರ್ ಅವರು ಮಾತನಾಡಿ, ನಾನು ನನ್ನ ಸಾಧನೆ ಮೂಲಕ ಕರ್ನಾಟಕಕ್ಕೆ ನನ್ನನ್ನು ಮೊದಲು ಪರಿಚಯಿಸಿದ ನ್ಯೂಸ್ಫಸ್ಟ್ಗೆ ಧನ್ಯವಾದಗಳು. ಮೆಡಿಕಲ್ ಸೀಟು ಬೇಕು ಎನ್ನುವವರು ಸಿಇಟಿ ಬರೆಯಲು ನಿಮ್ಮದೇ ಗುರಿ ಇರಲಿ. ಇನ್ನೊಬ್ಬರ ಜೊತೆ ಯಾರು ಹೋಲಿಕೆ ಮಾಡಿಕೊಳ್ಳಬೇಡಿ. ಮೆಡಿಕಲ್ ಬೇಕು ಎನ್ನುವವರು ಪಿಯುಸಿ ಹಂತದಲ್ಲಿ ಚೆನ್ನಾಗಿ ಓದಿ. ಮಕ್ಕಳನ್ನು ವಿಜ್ಞಾನ ವಿಭಾಗದಲ್ಲಿ ಓದಿಸಬೇಕು ಎಂದರೆ ಪೋಷಕರು ಅವರನ್ನು ಸ್ಫೋರ್ಟ್ಸ್ಗೆ ಕಳಿಸಬೇಡಿ ಎಂದು ಹೇಳಿದರು.
ದಿನಕ್ಕೆ 6 ಗಂಟೆಗೂ ಹೆಚ್ಚು ಕಾಲ ಓದುತ್ತೇನೆ ಎನ್ನುವವರು ನೀಟ್ ಪರೀಕ್ಷೆಗೆ ಹೋಗಿ. ನೀಟ್ ಎಂದರೆ ದೊಡ್ಡ ದೊಡ್ಡ ಬುಕ್ ಓದುವುದಲ್ಲ, ಸರ್ಕಾರದ ಪುಸ್ತಕಗಳನ್ನು ಯಾರು ಓದುವುದಿಲ್ಲ. ಎನ್ಸಿಆರ್ಟಿ ಬುಕ್ಗಳನ್ನು ಓದುವುದೇ ಇಲ್ಲ. 720 ಅಂಕಗಳಿಗೆ ನೀಟ್ ಪರೀಕ್ಷೆ ಇರುತ್ತದೆ. ಇದರಲ್ಲಿ 600 ಅಂಕ ಬಂದರೆ ಮೆಡಿಕಲ್ ಸೀಟ್ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಭಾಗಿ
10ನೇ ತರಗತಿಯಿಂದ ಪದವಿ, ಸ್ಪರ್ಧಾತ್ಮಕ ಪರೀಕ್ಷೆವರೆಗೆ ಏನೇ ಅನುಮಾನಗಳಿದ್ದರೂ ಕೋಚಿಂಗ್ ಗುರು ಎಕ್ಸ್ಪೋ ಉತ್ತರ ಸಿಗುತ್ತೆದೆ. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಓದಿಗೆ, ವೃತ್ತಿ ಜೀವನಕ್ಕೆ ಅನುಕೂಲ ಆಗಲೆಂದು ನ್ಯೂಸ್ ಫಸ್ಟ್ ಈ ವಿನೂತನ ಕೋಚಿಂಗ್ ಗುರು ಮೆಗಾ ಎಕ್ಸ್ಪೋ ಅನ್ನು ಇಂದು ಮತ್ತು ನಾಳೆ ಎರಡು ದಿನ ನಡೆಸಿಕೊಡುತ್ತಿದೆ. ಬೆಂಗಳೂರಿನ ಪ್ಯಾಲೇಸ್ ರೋಡ್ ಬಳಿ ಇರುವ ಜ್ಞಾನಜ್ಯೋತಿ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರು ಭಾಗಿಯಾಗಿದ್ದಾರೆ.
ಕೋಚಿಂಗ್ ಗುರು ಎಕ್ಸ್‌ಪೋಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ಬಂದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಿರುವ ಅಭ್ಯರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. NEET, CET, JEE, UPSC, KPSC, CLAT, CAT ಹಾಗೂ SI, PSI, PDO ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತಿದೆ.
ಇದನ್ನೂ ಓದಿ:Coaching Guru; ಇವತ್ತೇ ನ್ಯೂಸ್ ಫಸ್ಟ್ ಎಕ್ಸ್ಪೋ.. ವಿದ್ಯಾರ್ಥಿಗಳೇ, ಪೋಷಕರೇ ಮಿಸ್ ಮಾಡಲೇಬೇಡಿ
ಒಂದೇ ವೇದಿಕೆಯಲ್ಲಿ ಎಲ್ಲ ಕೋಚಿಂಗ್ ಸೆಂಟರ್‌ಗಳು ಭಾಗವಹಿಸಿದ್ದರಿಂದ ವಿದ್ಯಾರ್ಥಿಗಳು, ಉದ್ಯೋಗಾ ಆಕಾಂಕ್ಷಿಗಳು ದೊಡ್ಡ ಮಟ್ಟದಲ್ಲಿ ಬಂದು ತಮಗಿರುವ ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಎಕ್ಸ್‌ಪೋದಲ್ಲಿ ತಜ್ಞರಿಂದ ಹೆಚ್ಚಿನ ಮಾರ್ಕ್ಸ್ ಗಳಿಸಲು ಸಲಹೆ ಮತ್ತು ನೆನಪಿನ ಶಕ್ತಿ ಹೇಗೆ ಇಟ್ಟುಕೊಳ್ಳಬೇಕೆಂದು ಟಿಪ್ಸ್ ಪಡೆಯುತ್ತಿದ್ದಾರೆ. ಜೊತೆಗೆ ಪರೀಕ್ಷಾ ಭಯದಿಂದ ಸ್ಪರ್ಧಾರ್ಥಿಗಳು ಹೊರಬರುವುದು ಹೇಗೆ ಎಂದು ನುರಿತ ತಜ್ಞರು ಸಲಹೆ ನೀಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ