/newsfirstlive-kannada/media/post_attachments/wp-content/uploads/2025/02/NF_COACHING_GURU_2-1.jpg)
ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸೈಬರ್ ಕ್ರೈಂ ಸೇರಿದಂತೆ ನಾಡಿನ ಜನರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅನೇಕ ಕಾರ್ಯಕ್ರಮಗಳನ್ನು ನ್ಯೂಸ್ ಫಸ್ಟ್ ನಿರಂತರವಾಗಿ ಮಾಡಿಕೊಂಡು ಬಂದಿದೆ. ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆಂದೇ ವಿನೂತನ ಎಕ್ಸ್‌ಪೋ ಒಂದನ್ನ ಆಯೋಜಿಸಿದೆ. ಇವತ್ತು ಮೊದಲ ದಿನದ ಎಕ್ಸ್‌ಪೋ ಸಕ್ಸಸ್ ಆಗಿದ್ದು ನಾಳೆಯೂ ಈ ಕಾರ್ಯಕ್ರಮದ ಉಪಯೋಗವನ್ನ ನೀವು ಪಡೆದುಕೊಳ್ಳಬಹುದಾಗಿದೆ.
ಪ್ಯಾಲೇಸ್ ರಸ್ತೆಯಲ್ಲಿರುವ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನ್ಯೂಸ್ ಫಸ್ಟ್ 2 ದಿನಗಳ ಕೋಚಿಂಗ್ ಗುರು EXPO ಆಯೋಜನೆ ಮಾಡಿದ್ದು ಇವತ್ತು ಮೊದಲನೇ ದಿನದ ಕಾರ್ಯಕ್ರಮ ಅದ್ಧೂರಿಯಾಗಿ ಸಕ್ಸಸ್ ಆಗಿದೆ. ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಸಚಿವರಿಗೆ ಶಾಸಕ ಪ್ರದೀಪ್ ಈಶ್ವರ್ ಜೊತೆಗೆ ಎಕ್ಸೆಲ್ ಅಕಾಡೆಮಿ ವೈಸ್ ಪ್ರೆಸಿಡೆಂಟ್ ಶಿವಕುಮಾರ್ ಸಾಥ್ ಕೊಟ್ಟರು. ಉಳಿದಂತೆ ನ್ಯೂಸ್ ಫಸ್ಟ್ ಎಂಡಿ & CEO ಎಸ್. ರವಿಕುಮಾರ್, ಎಡಿಟರ್ ಇನ್ ಚೀಫ್ ಮಾರುತಿ ಎಸ್ ಹೆಚ್ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಎಕ್ಸ್ಪೋನಲ್ಲಿ NEET, CET, JEE, UPSC, CLAT, CAT, SI, PDO, ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಎಲ್ಲಾ ಕೋಚಿಂಗ್ ಸೆಂಟರ್‌ಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ರು.
ಇದಾದ ಬಳಿಕ ವಿದ್ಯಾರ್ಥಿಗಳು ಓದಿರುವುದನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ? ಪರೀಕ್ಷೆ ಸಮಯದಲ್ಲಿ ಎದುರಾಗುವ ಮಾನಸಿಕ ಒತ್ತಡದಿಂದ ಆಚೆ ಬರುವುದು ಹೇಗೆ? ಅಲ್ಲದೇ ಪರೀಕ್ಷೆಯ ನಂತರ ಸೀಟ್ ಆಯ್ಕೆ ಮಾಡಿಕೊಳ್ಳುವ ಸರಿಯಾದ ಕ್ರಮ ಯಾವುದು ಎಂಬುದರ ಬಗ್ಗೆ ಆಯಾ ವಿಷಯದಲ್ಲಿ ಪರಿಣಿತಿ ಹೊಂದಿರುವ ತಜ್ಞರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದ್ರು.
ಇದನ್ನೂ ಓದಿ: NewsFirst ಕೋಚಿಂಗ್ ಗುರು ಎಕ್ಸ್‌ಪೋ ಉದ್ಘಾಟನೆ.. ಭಾರೀ ಸಂಖ್ಯೆಯಲ್ಲಿ ಆಗಮಿಸಿರುವ ವಿದ್ಯಾರ್ಥಿಗಳು
ಎಕ್ಸ್ಪೋನಲ್ಲಿ ಭಾಗವಹಿಸಿ ಕೋಚಿಂಗ್ ಸೆಂಟರ್ಗಳಲ್ಲಿ ನೊಂದಣಿ ಮಾಡಿಕೊಳ್ಳುವ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ನ್ಯೂಸ್ ಫಸ್ಟ್ ಸ್ಕಾಲರ್ ಶಿಪ್ ಸಹ ನೀಡುತ್ತಿದೆ. ನಾಳೆ ಕೂಡ ಕೋಚಿಂಗ್ ಗುರು ಮೆಗಾ ಎಕ್ಸ್‌ಪೋ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ EXPO ಲಾಭ ನೀವು ಪಡೆದು ಕೊಳ್ಳಬಹುದು. ಇವತ್ತು ಮಿಸ್ ಆಗಿದ್ರೆ ನಾಳೆ ಬರೋದು ಮಿಸ್ ಮಾಡಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ