/newsfirstlive-kannada/media/post_attachments/wp-content/uploads/2025/05/kashmir-Newsfirst-ground-report-7.jpg)
ಶ್ರೀನಗರ: ಮಿಸೈಲ್ಗಳು, ಡ್ರೋನ್ಗಳ ದಾಳಿ.. ಸಾವು.. ನೋವು.. ಯುದ್ಧಭೂಮಿ ಅಂತಾನೇ ಈಗ ಕರೆಯಲ್ಪಡುತ್ತಿರುವ ಕಾಶ್ಮೀರದಲ್ಲಿ ಜನರ ಪರಿಸ್ಥಿತಿ ಹೇಗಿದೆ. ಪಟಾಕಿ ಸೌಂಡ್ಗೆ ಬೆದರೋ ಸಾಮಾನ್ಯ ಜನರು ಮಿಸೈಲ್ಗಳ ಅಪ್ಪಳಿಕೆಯ ಸದ್ದನ್ನ ಹೇಗೆ ಕೇಳ್ತಿರಬಹುದು? ಪಾಪಿಸ್ತಾನದ ನರಿ ಬುದ್ದಿ ನಾಯಕರ ಆದೇಶದಂತೆ ಅಲ್ಲಿನ ಸೈನಿಕರು ಕತ್ತಲಾಗ್ತಿದ್ದಂತೆ ಡ್ರೋನ್, ಮಿಸೈಲ್ ಮೂಲಕ ದಾಳಿ ಮಾಡ್ತಿದ್ದು, ನ್ಯೂಸ್ ಫಸ್ಟ್ ಕೂಡ ದಾಳಿ ನಡೆಯುತ್ತಿರುವ ಜಮ್ಮು ಕಾಶ್ಮೀರದಿಂದಲೇ ಡೇರಿಂಗ್ ರಿಪೋರ್ಟ್ ಮಾಡ್ತಿದೆ.
ರಣ ಹೇಡಿ ಪಾಕಿಸ್ತಾನದ ನಿರಂತರ ದಾಳಿಯಿಂದ ಕಾಶ್ಮೀರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಭಾರತದ ಸೈನಿಕರು ನೂರಾರು ಡ್ರೋನ್ ಮತ್ತು ಕ್ಷಿಪಣಿಗಳನ್ನ ಆಕಾಶದಲ್ಲೇ ಹೊಡೆದುರುಳಿಸಿದ್ದಾರೆ. ಆದ್ರೆ ಕೆಲವೆಡೆ ಅಮಾಯಕ ನಾಗರಿಕರನ್ನ ಟಾರ್ಗೆಟ್ ಮಾಡಿರೋ ಬಿಕಾರಿಸ್ತಾನದಿಂದ ಒಂದಷ್ಟು ಮನೆಗಳಿಗೂ ಹಾನಿಯಾಗಿದೆ.
ಈ ಮನೆಯ ದೃಶ್ಯಗಳೇ ಹೇಳ್ತಿದೆ ಪಾಕಿಸ್ತಾನ ದಾಳಿಯ ಭೀಕರತೆ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ. ಬೇಕು ಬೇಕು ಅಂತಾನೇ ಕಾಲ್ಕೆರೆದುಕೊಂಡು ದಾಳಿಗೆ ಮುಂದಾಗಿದ್ದ ಪಾಕಿಸ್ತಾನ ಜಮ್ಮು ಕಾಶ್ಮೀರದ ಉರಿ, ರಜೌರಿ, ಜಮ್ಮು, ಪೂಂಚ್ನಲ್ಲಿ ಹೆಚ್ಚಿನ ದಾಳಿ ಮಾಡಿದೆ. ಡ್ರೋನ್, ಶೆಲ್ ದಾಳಿ ನಡೆದ ಕಾರಣ ಇದೇ ಭಾಗದಲ್ಲಿ ಮೂರು ಮನೆಗಳು ಸಂಪೂರ್ಣ ನಾಶವಾಗಿದೆ.
ಇದನ್ನೂ ಓದಿ: ಕದನ ವಿರಾಮದ ಕಳ್ಳಾಟ.. ಪಾಕ್ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ
ಉರಿ ನಗರ, ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದೆ. ಪಾಕ್ ಗಡಿಗೆ ಹೊಂದಿಕೊಂಡಿರೋದ್ರಿಂದ ಉರಿ ಜಿಲ್ಲೆಯ ಮೇಲೆ ಹೆಚ್ಚೆಚ್ಚು ದಾಳಿ ನಡೆದಿದೆ. ಇದೇ ಪ್ರದೇಶದಲ್ಲಿ ನಾಗರಿಕರ ಸಾವು ಕೂಡ ಆಗಿದೆ. ಹೀಗಾಗಿ ಉರಿ ಮತ್ತು ಬಾರಾಮುಲ್ಲಾಗಳಲ್ಲಿದ್ದ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.
ನ್ಯೂಸ್ ಫಸ್ಟ್‌ನ ಪ್ರತಿನಿಧಿ ಜಗದೀಶ್ ಕಾಶ್ಮೀರದಿಂದಲೇ ದಿಟ್ಟ ಮತ್ತು ಎದೆಗಾರಿಕೆಯ ಪ್ರತ್ಯಕ್ಷ ವರದಿ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ