/newsfirstlive-kannada/media/post_attachments/wp-content/uploads/2025/05/newsfirst-cricket4.jpg)
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಮೊದಲ ದಿನದ ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟೂರ್ನಿ ಭಾರೀ ಜಿದ್ದಾಜಿದ್ದಿನಿಂದ ಕೂಡಿತ್ತು. ನ್ಯೂಸ್ ಫಸ್ಟ್, ಶ್ರೀರಾಜೇಶ್ವರಿ ಪ್ರಾಪರ್ಟಿ ಸೇರಿ ಹಲವು ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹಲವು ತಂಡಗಳು ಭರ್ಜರಿ ಸೆಣಸಾಡಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿವೆ.
ಇದನ್ನೂ ಓದಿ: ಪಾಕ್ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
ಶ್ರೀರಾಜೇಶ್ವರಿ ಪ್ರಾಪರ್ಟಿಸ್, ಸಂತೋಷ್ ಲಾಡ್ ಫೌಂಡೇಷನ್, ಕೆಪಿಜೆ ಜ್ಯುವೆಲರ್ಸ್, ಧಾರವಾಡ ರೆಸಿಡೆನ್ಸಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ನ್ಯೂಸ್ ಫಸ್ಟ್ ಕ್ರಿಕೆಟ್ ಟೂರ್ನಿಯ ಮೊದಲ ದಿನದಾಟ ರೋಚಕವಾಗಿತ್ತು. ಪಂದ್ಯಾವಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದ್ರು. ನವಲಗುಂದ ಸಿಸಿ ಹಾಗೂ ಐಎಸ್‌ಕೆ ಮುಬಾರಕ್ ತಂಡಗಳ ಪಂದ್ಯದ ಟಾಸ್ ಮಾಡಿ ಲಾಡ್, ಆಟಗಾರರಿಗೆ ಶುಭ ಹಾರೈಸಿದ್ರು. ಇನ್ನು ಅಂಕಲ್ ಸಿಸಿ ಹಾಗೂ ಧಾರವಾಡ ಕೇಸರಿ ನಡುವೆ ನಡೆದ ಪಂದ್ಯಕ್ಕೆ ನ್ಯೂಸ್‌ಫಸ್ಟ್ ಪ್ರಧಾನ ಸಂಪಾದಕರಾದ ಮಾರುತಿ ಅವರು ಟಾಸ್ ಮಾಡಿ ಆಟಗಾರರಿಗೆ ಶುಭ ಹಾರೈಸಿದ್ರು.
ಆರು ಪಂದ್ಯಗಳಲ್ಲಿ ಬಲಿಷ್ಠ 12 ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಈ ಪೈಕಿ ಧಾರವಾಡ ಕೇಸರಿ, ನವಲಗುಂದ ಸಿಸಿ, ಕುಂದಗೋಳ ಕಿಂಗ್ಸ್, ಹೆಸ್ಕಾಂ, ವಿಎಂಸಿಸಿ, ಅಲ್ತಾಫ್ ಕಿತ್ತೂರ್ ತಂಡಗಳು ಗೆದ್ದು ಇಂದು ನಡೆಯುವ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿವೆ. ಇಂದು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿರುವ 2ನೇ ದಿನದ ಪಂದ್ಯಾವಳಿಯಲ್ಲಿ ಮೊದಲು ಯಂಗ್ ಸ್ಟಾರ್ ಹಾಗೂ ಬ್ಲೂ ಡೈಮಂಡ್ ಸೆಣಸಲಿವೆ. ಎರಡನೇ ಪಂದ್ಯ ಎಸ್.ಕೆ ಬಾಯ್ಸ್ ಹಾಗೂ ಎಕೆ ರಾಕರ್ಸ್ ನಡುವೆ ನಡೆಯಲಿದೆ. ನಂತರ 4 ಕ್ವಾಟರ್ ಫೈನಲ್ ಪಂದ್ಯಗಳು ಜರುಗಲಿವೆ. ಪಂದ್ಯಗಳ ಟಾಸ್ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಾಗರಾಜ್ ಗೌರಿ, ದಾದಾಪೀರ್ ಬಳ್ಳಾರಿ, ವಿನೋದ ಅಸೂಟಿ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.
3 ದಿನಗಳ ನ್ಯೂಸ್ ಫಸ್ಟ್ನ ಕ್ರಿಕೆಟ್ ಕಪ್‌ನ ಮೊದಲನೇ ದಿನ ಯಶಸ್ವಿಯಾಗಿ ನಡೆದಿದೆ. ಇಂದು ಮತ್ತು ನಾಳೆ ನಡೆಯಲಿರೋ ಕ್ರಿಕೆಟ್ ಟೂರ್ನಿಯಲ್ಲಿ ಸಾಕಷ್ಟು ಪಂದ್ಯಗಳು ಬಾಕಿ ಇವೆ. ಆಟಗಾರರು ಸಹ ಫುಲ್ ಜೋಶ್‌ನಲ್ಲೆ ಕಣಕ್ಕಿಳಿದು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದಾರೆ. ಅವಳಿನಗರಗಳ ಜನರು ಕೂಡ ಕ್ರಿಕೆಟ್ ಪಂದ್ಯಾವಳಿಯ ರೋಚಕ ಹಣಾಹಣಿಗೆ ಸಾಕ್ಷಿಯಾಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ