ನ್ಯೂಸ್ ​ಫಸ್ಟ್​ ಕ್ರಿಕೆಟ್​ ಕಪ್​​ಗೆ ಕೌಂಟ್​ಡೌನ್: ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಫೀವರ್ ಶುರು

author-image
admin
Updated On
ನ್ಯೂಸ್ ​ಫಸ್ಟ್​ ಕ್ರಿಕೆಟ್​ ಕಪ್​​ಗೆ ಕೌಂಟ್​ಡೌನ್: ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಫೀವರ್ ಶುರು
Advertisment
  • ಹುಬ್ಬಳ್ಳಿಯಲ್ಲಿ ನ್ಯೂಸ್ ​ಫಸ್ಟ್‌ ಅದ್ಧೂರಿ ಟೆನಿಸ್‌ ಬಾಲ್‌ ಕ್ರಿಕೆಟ್ ಟೂರ್ನಿ
  • ವಿಜೇತರಿಗೆ 2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ
  • ರನ್ನರ್ ​​ಅಪ್ ತಂಡಕ್ಕೆ 1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ

ಕರ್ನಾಟಕದ ಜನಪ್ರಿಯ ನ್ಯೂಸ್​ ಚಾನಲ್ ನ್ಯೂಸ್​​ ​ಫಸ್ಟ್​ ಕನ್ನಡ, ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನ ಆಯೋಜಿಸುತ್ತಿದೆ.

ಮೇ 2, 3 ಮತ್ತು 4ನೇ ತಾರೀಖು, ಮೂರು ದಿನಗಳ ಕಾಲ ಹುಬ್ಬಳ್ಳಿಯ BDK ಗ್ರೌಂಡ್ಸ್​, ಶಿವಾನಂದ ಗುಂಜಾಳ ಸ್ಪೋರ್ಟ್ಸ್​ ಕ್ಲಬ್, JK ಸ್ಕೂಲ್ ಹತ್ತಿರ, ಟೂರ್ನಿ ನಡೆಯಲಿದೆ.

8 ಓವರ್​ಗಳ ಟೂರ್ನಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ, 10 ಓವರ್ ಸೀಮಿತವಾಗಿರುತ್ತೆ.

ಫೈನಲ್​​ನಲ್ಲಿ ಗೆದ್ದ ತಂಡಕ್ಕೆ '2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ' ನೀಡಲಾಗುತ್ತದೆ. ಹಾಗೆ ರನ್ನರ್ ​​ಅಪ್ ತಂಡಕ್ಕೆ '1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ' ನೀಡಲಾಗುವುದು.

publive-image

ಇದಷ್ಟೇ ಅಲ್ಲ.. ಟೂರ್ನಿಯಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಪ್ರತಿ ಪಂದ್ಯಕ್ಕೂ 'ಪಂದ್ಯ ಶ್ರೇಷ್ಠ ಪ್ರಶಸ್ತಿ' ನೀಡಲಾಗುವುದು. ಟೂರ್ನಿಯಲ್ಲಿ ಅತ್ಯುತಮ ಬ್ಯಾಟ್ಸ್​ಮನ್​​ಗೆ 'ಬೆಸ್ಟ್ ಬ್ಯಾಟ್ಸ್​ಮನ್ ಪ್ರಶಸ್ತಿ' ಮತ್ತು ಅತ್ಯುತಮ ಬೌಲರ್​ಗೆ 'ಬೆಸ್ಟ್ ಬೌಲರ್​ ಪ್ರಶಸ್ತಿ' ನೀಡಲಾಗುವುದು.

ಹಾಗೇ ಟೂರ್ನಿಯಲ್ಲಿ ಆಲ್​ರೌಂಡ್ ಆಟ ಆಡಿದ ಆಟಗಾರನಿಗೆ 'ಪ್ಲೇಯರ್ ಆಫ್ ದ ಸೀರಿಸ್' ಪ್ರಶಸ್ತಿ ಕೂಡ ನೀಡಲಾಗುವುದು.​

ಇದನ್ನೂ ಓದಿ: ಭಾರತ- ಪಾಕ್​ ಪಂದ್ಯಗಳಿಗೆ ಶಾಶ್ವತ ಬ್ರೇಕ್​..? ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟರ್​ ಹೇಳಿದ್ದೇನು? 

ಏ.29ರಂದು ನ್ಯೂಸ್ ಫಸ್ಟ್‌ ಕಪ್‌ ಟ್ರೋಫಿ ಅನಾವರಣ
ಇದೇ ತಿಂಗಳು ಏಪ್ರಿಲ್ 29ರಂದು ನ್ಯೂಸ್​​ ಫಸ್ಟ್ ಕ್ರಿಕೆಟ್ ಕಪ್ ಟ್ರೋಫಿ ಅನಾವರಣ ಕಾರ್ಯಕ್ರಮವನ್ನ, ಹುಬ್ಬಳ್ಳಿಯ ಹೋಟೆಲ್ ವುಡ್​ಲ್ಯಾಂಡ್ಸ್​​ನಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಎಲ್ಲಾ 16 ತಂಡಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಟೂರ್ನಿಯ ಟೈಸ್ ಮತ್ತು ರೂಲ್ಸ್​, ತಂಡಗಳ ನಾಯಕರಿಗೆ ತಿಳಿಸಲಾಗುವುದು.

ನ್ಯೂಸ್​​ಫಸ್ಟ್ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನ್ಯೂಸ್​​ಫಸ್ಟ್ ಸಂಸ್ಥೆಯ ಸಿಇಒ & ಎಂ.ಡಿ ರವಿಕುಮಾರ್.ಎಸ್, ಶ್ರೀರಾಜೇಶ್ವರಿ ಪ್ರಾಪರ್ಟೀಸ್​​​​​​ ಎಂ.ಡಿ ವಿವೇಕ್ ಮೊಕಾಶಿ ಮತ್ತು ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಭಾಗವಹಿಸಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment