/newsfirstlive-kannada/media/post_attachments/wp-content/uploads/2025/04/newsfirst-cricket-cup-2025-5.jpg)
ಹುಬ್ಬಳ್ಳಿಯಲ್ಲಿ ನ್ಯೂಸ್ ಫಸ್ಟ್ ಆಯೋಜಿಸಿರೋ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ.
ಹುಬ್ಬಳ್ಳಿಯ ಹೋಟೆಲ್ ವುಡ್ಲ್ಯಾಂಡ್ಸ್ನಲ್ಲಿ ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟ್ರೋಫಿ ಅನಾವರಣ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ನ್ಯೂಸ್ಫಸ್ಟ್ ಸಂಸ್ಥೆಯ ಸಿಇಒ & ಎಂ.ಡಿ ರವಿಕುಮಾರ್. ಎಸ್, ಶ್ರೀರಾಜೇಶ್ವರಿ ಪ್ರಾಪರ್ಟೀಸ್ ಎಂ.ಡಿ ವಿವೇಕ್ ಮೊಕಾಶಿ ಮತ್ತು ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಭಾಗಿಯಾಗಿದ್ರು.
ಶ್ರೀ ರಾಜೇಶ್ವರಿ ಪ್ರಾಪರ್ಟಿ, ಸಂತೋಷ್ ಲಾಡ್ ಫೌಂಡೇಷನ್, ಕೆಪಿಜೆ ಜ್ಯುವೆಲರ್ಸ್, ಧಾರವಾಡ ರೆಸಿಡೆನ್ಸಿ ಸಹಭಾಗಿತ್ವದಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.
ಮೇ 2, 3 ಮತ್ತು 4ನೇ ತಾರೀಖು, ಮೂರು ದಿನಗಳ ಕಾಲ ಹುಬ್ಬಳ್ಳಿಯ BDK ಗ್ರೌಂಡ್ಸ್, ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್, JK ಸ್ಕೂಲ್ ಹತ್ತಿರ, ಟೂರ್ನಿ ನಡೆಯಲಿದೆ.
ಫೈನಲ್ನಲ್ಲಿ ಗೆದ್ದ ತಂಡಕ್ಕೆ ‘2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ’ ನೀಡಲಾಗುತ್ತದೆ. ಹಾಗೆ ರನ್ನರ್ ಅಪ್ ತಂಡಕ್ಕೆ ‘1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ’ ನೀಡಲಾಗುವುದು.
ಇದನ್ನೂ ಓದಿ: ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ಗೆ ಕೌಂಟ್ಡೌನ್: ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಫೀವರ್ ಶುರು
ಇದಷ್ಟೇ ಅಲ್ಲ.. ಟೂರ್ನಿಯಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಪ್ರತಿ ಪಂದ್ಯಕ್ಕೂ ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ ನೀಡಲಾಗುವುದು. ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗೆ ‘ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ’ ಮತ್ತು ಅತ್ಯುತಮ ಬೌಲರ್ಗೆ ‘ಬೆಸ್ಟ್ ಬೌಲರ್ ಪ್ರಶಸ್ತಿ’ ನೀಡಲಾಗುವುದು. ಹಾಗೇ ಟೂರ್ನಿಯಲ್ಲಿ ಆಲ್ರೌಂಡ್ ಆಟ ಆಡಿದ ಆಟಗಾರನಿಗೆ ‘ಪ್ಲೇಯರ್ ಆಫ್ ದ ಸೀರಿಸ್’ ಪ್ರಶಸ್ತಿ ಕೂಡ ನೀಡಲಾಗುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ